ಬಾ ಬಾರೆಲೆ ಕೋಗಿಲೆ
ಚೈತ್ರ ಬಂದಿದೆ
ಹಾಡು ಹಾಡಲೆ ಕೋಗಿಲೆ||
ಸಿಹಿ ಕಹಿಗಳ ಮಿಲನ
ಈ ಜೀವನ ವಿಧಿಯು
ಬರೆದ ಕತೆಯು ಅವಲೋಕನ||
ದಿನಗಳು ಉರುಳಿದಂತೆ
ಕ್ಷಣಕ್ಷಣವು ಬೆರೆತ
ಕಾಲನ ಡಮರುಗನ ಆಟ||
ನಿನ್ನ ಹಾಡಿಗೆ ಕಾಲನ
ಸೋಲಿಲ್ಲ ನಿನ್ನದೆ ರಾಗದ
ಆಲಾಪನೆ ನಿತ್ಯಸತ್ಯ||
ನೀನು ಕಪ್ಪು ಕಾಲನ
ಗತಿ ಕಪ್ಪು ಹೊಳಪಿನ
ಮಧ್ಯೆ ಎದೆ ಮೆಟ್ಟಿದ ಹಾಡು||
ನಿನ್ನ ಸ್ವರದ ಬೆಳಗು
ಬೈಗು ಚಂದ್ರತಾರೆ
ಸೂರ್‍ಯನ ಬಿಂಬ ಹೊಳಪು||
ಚೈತ್ರ ಬಂದಿದೆ ಕೇಳೆ ಕೋಗಿಲೆ
ಬಂದ ವಸಂತ ತಂದನವ
ಶೃಂಗಾರ ಗೀತ ಮಧುವನ||
ಮರಗಳ ನಡುವೆ
ಕುಳಿತು ಅವಿತು ಹಾಡುವ
ಹಕ್ಕಿ ಪ್ರೀತಿಗೆ ನೀನೆ ಚುಕ್ಕಿ||
ನಿನ್ನ ಹಾಗೆ ಪ್ರೀತಿ
ಪ್ರೇಮ ಕಾಣುವುದಿಲ್ಲ
ಹುಟ್ಟಿಕೊಂಡ ನಿನ್ನ ರಾಗದಂತೆ ಸತ್ಯನಿತ್ಯ||
*****