ಒಂದು ಮಳೆಯ ಹನಿ ಹೇಳಿತು – “ನನ್ನ ಬಾಳು ಸಾರ್ಥಕ. ನಾನು ಹೂವಿನ ದಳದ ಮೇಲೆ ಬಿದ್ದು ಅದರ ಬಾಯಾರಿಕೆ ತೀರಿಸುವೆ”
ಎರಡನೆಯ ಹನಿ ಹೇಳಿತು- “ನಾನು ಎಲೆಯ ಮೇಲೆ ಮಲಗಿ ಆನಂದ ಪಡುವೆ.” ಎಂದು.
ಮೂರನೆಯ ಹನಿಹೇಳಿತು- “ನನ್ನ ಬಾಳು ಹುಲ್ಲು ಕಡ್ಡಿಯ ಉಯಾಲೆಯಲ್ಲಿ ತೂಗಾಡುವುದು ಅದೆಷ್ಟು ಚೆಂದ” ಎಂದು.
ಇದನ್ನು ಕೇಳಿಸಿ ಕೊಂಡ ಗಾಳಿ ಮೆತ್ತಗೆ ಬೀಸತೊಡಗಿತು. ಮೂರು ಹನಿಗಳು ಕೊನೆಗೆ ಮಣ್ಣಿನಲ್ಲಿ ಒಂದಾದವು. ಅವುಗಳು ತಮ್ಮ ಹಿರಿಮೆ ಗರಿಮೆಗಳನ್ನು ಮಣ್ಣಿನಲ್ಲಿ ಹುಡುಕುತ್ತಲೇ ಇದ್ದವು.
*****