ಮಳೆ ಮಳೆ ಮುದ್ದು ಮಳೆ
ನೀನು ಬಂದರಲ್ಲಾ ಕೊಳೆ
ಯಾಕೆ ಬರುವೆ ಇಲ್ಲಿಗೆ?
ಕೇಳಿತೊಂದು ಮಗುವು
ಸುರಿವ ವರ್ಷ ಧಾರೆಗೆ
ಮುದ್ದು ಮಗುವೇ, ಕೇಳು ಇಲ್ಲಿ
ನಾನು ಬರದೆ ಇದ್ದರಿಲ್ಲಿ
ಎಲ್ಲ ಬರಡು ಚಿಗುರು ಕೊರಡು
ಅಂತೆ ಹಾಗೆ ಬರುವೆ ನಾನು
ಹನಿಸಿ ನೀರ ಬರಿಸಿ ಚಿಗುರ
ತಣಿಸಿ ನಲಿವೆ ಭೂಮಿಯ
ತೃಪ್ತಿ ನಗೆಯ ನಕ್ಕ ಮಳೆ
ನೀಡಿತದಕೆ ಉತ್ತರ
ಮಳೆ ಮಳೆ ಮುದ್ದು ಮಳೆ
ವರ್ಷಕ್ಕೊಮ್ಮೆ ನಿನ್ನ ಕಳೆ
ಭೂಮಿಯಲ್ಲಾ ನೀರ ಹೊಳೆ
ಮತ್ತೆ ಪಯಣ ಎಲ್ಲಿಗೆ?
ಮುದ್ದು ಮಗುವೇ ಕೇಳು ಇಲ್ಲಿ
ಮಳೆಯ ಕಾಲ ನನ್ನ ಸರಸ
ತಂಪು ತಣಿವು ಭೂಮಿ ಹರುಷ
ಬಿಸಿಲ ಧಗೆ ನನ್ನ ಹಗೆಯು
ಮೋಡದೊಳಗೆ ನನ್ನ ಮನೆಯು
ಎಂದು ಮಳೆಯು ನಕ್ಕಿತು
ತುಂತುರಾಗಿ ಹಾರಿತು
*****