ಕ್ರಿಮಿನಲ್ಲು ನನಕಣ್ಣು ಸಿವಿಲ್ಲು ಮಾಡಯ್ಯ

ಕ್ರಿಮಿನಲ್ಲು ನನಕಣ್ಣು ಸಿವಿಲ್ಲು ಮಾಡಯ್ಯ
ಶಿವಬಲ್ಲ ಸಿಹಿಬೆಲ್ಲ ಆಗಬೇಕು
ಕೆನೆಬೆಲ್ಲ ಕೊಬ್ಬರಿಯ ಎದೆಯನ್ನು ನೀಡಯ್ಯ
ರಾವಣನ ರಂಬಾಟ ನಿಲ್ಲಬೇಕು

ಕರಿಯ ಬೆಕ್ಕಿನ ಕಣ್ಣು ಗಿಡದ ಮಂಗನ ಕಣ್ಣು
ಬೇಲಿಮುಂಗಲಿ ಕಣ್ಣು ನಿಲ್ಲಬೇಕು.
ಓ ಅಕ್ಕ ಓ ತಾಯಿ ನನ್ನವ್ವ ನನದೇವಿ
ತಾಯಿಯೆಂಬುವ ಬೆಳಗು ತುಂಬಬೇಕು

ಕಣ್ಣೊಳಗ ಶಿವತುಂಬಿ ಮಳೆತುಂಬಿ ಹೊಳೆತುಂಬಿ
ಹರಹರಾ ಹರನೆಂಬ ಹಾಡುಬರಲಿ
ಕಣ್ಣು ಕವಳಿಯ ಹಣ್ಣು ರುಚಿಯ ನಿಂಬೆಯ ಹಣ್ಣು
ಶಾಂತಿಸಾಗರ ಸುರಿದು ತುಂಬಿ ಬರಲಿ

ಎದಿಯೊಳಗ ಶಿವಲಿಂಗ ನಿಜಲಿಂಗ ಚಿಲ್ಲಿಂಗ
ತಲಿಯೊಳಗ ಘನಲಿಂಗ ತೂಗಾಡಲಿ
ಓ ಅಯ್ಯ ಅಪ್ಪಯ್ಯ ಚನ್ನಯ್ಯ ಚಲುವಯ್ಯ
ಪಂಚಲಿಂಗೇಶ್ವರನೆ ಕುಣಿದಾಡಲಿ.


Previous post ಬಡ್ಜಟ್
Next post ಚಕ್ರವ್ಯೂಹ

ಸಣ್ಣ ಕತೆ

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…