ನಾಟಕಾ ಬಂದೈತೆ ಬಾರೇ ಅತ್ತೆವ್ವಾ

ನಾಟಕಾ ಬಂದೈತೆ ಬಾರೇ ಅತ್ತೆವ್ವಾ
ನಾಟಕಾ ಕಂಪೇನಿ ಬಂದೇತೆವ್ವಾ||

ಪುಗಸೆಟ್ಟಿ ಬಂದೈತಿ ಚೀಟಿಲ್ಲ ನೋಟಿಲ್ಲ
ಕಟ್ಟವ್ವಾ ಜಡಿಮಾಲಿ ಬಾರೇಯವ್ವಾ
ಪೀತಾಂಬ್ರ ತಾರವ್ವ ತೊಡಿಗಚ್ಚಿ ಹಾಕವ್ವ
ಗೆಜ್ಜೀಯ ಕಟ್ಟವ್ವ ಬಾರೇಯವ್ವಾ

ಪಾಸಿಲ್ಲ ಪಾಟಿಲ್ಲ ಕಟ್ಟಿಲ್ಲ ಮೆಟ್ಟಿಲ್ಲ
ಅಂಕಿಲ್ಲ ಸುಂಕಿಲ್ಲ ಬಾರೇನವ್ವಾ
ವಂಕಿಲ್ಲ ಸರಗಿಲ್ಲ ತುರುಬೀಗಿ ಗಿಣಿಯಿಲ್ಲ
ಕುಣೀಯವ್ವ ಕುಣಿಸವ್ವ ಬಾರೇನವ್ವಾ

ಆರಂಭ ಗಣಪಿಲ್ಲ ಮಾರಂಭಿ ಠೊಣಪಿಲ್ಲ
ಎದ್ದಾಂಗ ಇದ್ದಾಂಗ ಬಂದೇತೆವ್ವಾ
ಕುಡದಂಗ ಕುಣೀತವ್ವಾ ಹಿಡಿದಂಗ ಹಿಡಿತವ್ವಾ
ಹುಡಗಾರು ಕ್ಯಾಕೀಯ ಹಾಕ್ಯಾರವ್ವಾ

ಆಡ್ದಂಗ ಆಟವ್ವಾ ನೋಡ್ದಂಗ ನೋಟವ್ವಾ
ಓಡ್ದಂಗ ಓಟವ್ವಾ ಬಾರೇನವ್ವಾ
ಮಾಡ್ದಂಗ ಮಾಟವ್ವಾ ಕೂಡ್ದಂಗ ಕೂಟವ್ವಾ
ಬೇಡ್ದಂಗ ಬೇಟವ್ವಾ ಬಾರೇನವ್ವಾ


Previous post ಫೈಲು
Next post ರಾಮಾಯಣ ಮಹಾಭಾರತ

ಸಣ್ಣ ಕತೆ

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…