ಹಾವು ಕಂಡಿರೇನಮ್ಮಯ್ಯಾ ಈ ಸ್ವಾಮಿಯೊಳು
ಹಾವು ಕಂಡಿರೇನಮ್ಮಯ್ಯಾ ||ಪ||
ಹಾವು ಕಂಡರ ಎನ್ನ ಜೀವವು ಕು೦ದಿತು
ತನ್ನ ಮಂಡಲಗಟ್ಟಿ ಮಾಯವಾದಿತು
ಗುಂಡೇಲಿಂಗನ ಗುಡಿಯ ಮುಂದ || ಆ. ಪ. ||
ಹಂಡಬಣ್ಣದ ಹಾವು ಕಂಡಾಕ್ಷಣಕ್ಕೆ
ಬಂಡಿಗೆಬ್ಬಿಸಿತು ಮನವು ಪಿ೦ಡದೇಹವು
ತಣ್ಣಗಾಗುವೆ ಈಶ್ವರನ ಬಳಿಯಲಿ
ಉಳಿವುದಿನ್ನು ಕಷ್ಟಬಂತು ಚಿಟ್ಟನೆಂದು ಚೀರಿಕೊಂಡೆ || ೧ ||
ಯಳವತ್ತಿ ಗ್ರಾಮದೊಳು ಗುಂಡೇಲಿಂಗ ಪುಂಡನಾಗಿರುತಿಹನು
ಆರು ಇಲ್ಲದೆ ಗಾರುಗೊಂಡಿತು
ಸಾರಿ ನೀರಲ್ಲಿ ಕೆರೆಯೊಳು
ಸಾರಲೇನು ಶಿಶುನಾಳಧೀಶನು ಹಾದಿತಪ್ಪಬಾರದೆಂದು || ೨ ||