“ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ.” ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. “ನೋಡೇ-ನಾನು ರೈಲಿನ ಇಂಜಿನ್ನು, ನೀನು...

ನನ್ನ ಷೇಕ್ಸ್‌ಪಿಯರನ ಪವಿತ್ರ ಅಸ್ಥಿಯನಿಡಲು ಯುಗ ದುಡಿದು ಜೋಡಿಸಿದ ಕಲ್ಲರಾಶಿಯ ಮಹಲು ಬೇಕೆ ? ಅಥವಾ ಮುಗಿಲ ಇರಿವ ಪಿರಿಮಿಡ್ಡುಗಳ ತೆರೆ ಸಾಕೆ ಮರೆಸಲು ಪುನೀತ ಅವಶೇಷಗಳ? ಸ್ಮೃತಿಯ ಪ್ರಿಯಪುತ್ರನೇ, ಪ್ರಥಮಪಾತ್ರನೆ ಎಲ್ಲ ಕೀರ್‍ತಿಗೂ, ನಿನಗಂಥ ಕಳಪ...

ಹುಲಿಯು ಚೆಕ್ಕಿನ ಹತ್ತಿರ ವಿದ್ಯೆಯನ್ನು ಕಲಿಯುವುದಕ್ಕೆ ಹೋಯಿತು. ಬೆಕ್ಕು “ಅಯ್ಯಾ! ನಿನಗೆ ಸಿಟ್ಟು ಬಹಳ, ನೀನು ಆ ಸಿಟ್ಟು! ಬಿಟ್ಟರೆ ಆಗಬಹುದು” ಎಂದಿತು. ಹುಲಿಯು “ಹಾಗೇ ಆಗಲಿ” ಎಂದು ಒಪ್ಪಿ ಕೊಂಡಿತು. ಬೆಕ್ಕು ಅಕ...

ಒಂದರಳೆ ಮರದಲ್ಲಿ ಸಂಜೆಯಾಗಿರುವಲ್ಲಿ ಒಂದೊಂದೆ ಮರಳುವವು ಸಾಲುಗೊಂಡು : ಒಂದೊಂದೆ ಮರಳುವವು ಗಿಳಿಯೆಲ್ಲ ತೆರಳುವವು ಗೂಡುಗೊಂಡಿಹ ಮರವನಿದಿರುಗೊಂಡು. ಸಂಧ್ಯೆಯಿಂದೀಚೆಗೆನೆ ಸ್ಮರನೆಚ್ಚ ಶರಗಳೆನೆ ತಾಗುತಿದೆ ಗಿಳಿಹಿಂಡು ಬಂದು ಮರಕೆ. ಕೊಂಬೆಮೇಲೆಳೆಮರ...

೧ ಜಯವು ಶಾಂತಿಯ ಶರಣ, ಭಾರತ- ಪಾರತಂತ್ರ್ಯ ನಿವಾರಣಾ! ಜಯ ಮಹಾತ್ಮಾ, ಜಯವು ಮೋಹನ, ಪತಿತಜನ ಸಂಜೀವನಾ ! ೨ ಬೆಳಕು ಬಿದ್ದಿತು ಭರತಭುವಿಯಲಿ ಜನ್ಮಿಸಲು ಗುರುಗಾಂಧಿಯು, ಕಳಕಳನೆ ನಗೆಯೆದ್ದು ನಿಂತಿತು, ಶಾಂತಿ-ಸೌಖ್ಯದ ನಾಂದಿಯು ! ೩ ಭರತಮಾತೆಯ ಪೂರ್ವ...

ಎಚ್.ವಿ.ಸಾವಿತ್ರಮ್ಮ ಹುಟ್ಟಿದ್ದು ೧೯೧೩ರಲ್ಲಿ. ಅಂದರೆ ಇಪ್ಪತ್ತನೆಯ ಶತಮಾನ ಆಗ ತಾನೇ ಉದಯಿಸುತ್ತಿದ್ದ ವರ್‍ಷಗಳಲ್ಲಿ. ಆದರೆ ಈ ಲೇಖಕಿ ಬರೆದದ್ದು ಆನಂತರದ ಅರ್‍ಧಶತಮಾನಕ್ಕೆ ಹೆಚ್ಚು ಸಲ್ಲುವಂತಾಯಿತು. ಕನ್ನಡದಲ್ಲಿ ಸ್ತ್ರೀವಾದ ಕಣ್ಣು ಬಿಡುತ್ತಿದ...

ಬಯಸಿದ್ ಸಾಮಾನ್ ಬೇಕಾದಂಗೆ ಇರಲಿ ಇಲ್ದೇನ್ ಇರಲಿ- ತಾಪತ್ರೇಯನಕ್ ತಪ್ಪಿದ್ದಲ್ಲ! ಸುಳ್ಳಂತ್ ಅನ್ನೌನ್ ಬರಲಿ! ೧ ಬುಂಡೇಲ್ ಒಂದ್ ತೊಟ್ ಇರೊಗಂಟ್ಲೂನೆ ನಿದ್ದೆ ಗಿದ್ದೆ ಬರದು! ಬುಂಡೇ ಕಾಲಿ ಆಗೋದ್ರನಕ ನಿದ್ದೆ ಬರಲೇ ಬರದು! ೨ ಈ ತಾಪತ್ರೇನ್ ತಳ್ಳಾಕ...

ತಾಮ್ರಪರ್‍ಣಿಯ ಒಡಲ ರಾಜಮೌಕ್ತಿಕದ ಭಂ- ಡಾರ ಮುದ್ರೆಯನೊಡೆಯೆ, ದಿನವು ನೀರನು ಧುಮುಕು- ವಂಥ ಕುಂಗನು ಪಡೆವುದೇನು? ಮೈಮುರಿ ದುಡಿಯೆ ಮರುದಿನವು ಅಣಿಗೊಳುವದಕೆ ಕೂಳತುತ್ತು; ಮನ ಮರೆಯೆ ಕುಡಿಯಲು ಗುಟುಕು. ಹೆತ್ತ ಹೊಟ್ಟೆಯನ್ನು, ಕೈ ಹಿಡಿದ ಮೈಯನು ತ...

ಬೆಳಗಾಗಿ ನಾನೆದ್ದು ಯಾರಾರ ನೆನೆಯಲಿ ಎಳ್ಳು ಜೀರಿಗೆ ಬೆಳಿಯೋಳ-ಭೂಮಿ ತಾಯಿಯ ಎದ್ದೊಂದ ಗಳಿಗೆ ನೆನೆದೇನ. ಹಳ್ಳಿಯ ಮಹಿಳೆಯೊಬ್ಬಳು ಈ ಜಾನಪದ ಹಾಡಿನ ಮೂಲಕ ಭೂಮಿತಾಯಿಯ ಬಗ್ಗೆ ಅಭಿಮಾನದಿಂದ ನೆನೆದು ಹಾಡುತ್ತಾಳೆ. ಭಾರತ ಹಳ್ಳಿಗಳ ದೇಶವಾಗಿದೆ. ರೈತನೆ...

1234...10

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....