
ಹೈದರಬಾದ್‌ನಿಂದ ಕಂಪನಿಯವರು Pace Maker ತಂದು ಕೊಡುತ್ತಿದ್ದರು. ಅವ್ವನ ಶಸ್ತ್ರಕ್ರಿಯೆ ಯಶಸ್ವಿಯಾಗಿತ್ತು. ನಾನು ಭಾವೋದ್ವೇಗದಿಂದ ಅತ್ತುಬಿಟ್ಟಿದ್ದೆ. ಬೆಂಗಳೂರಿನಲ್ಲಿದ್ದಾಗ ಇಷ್ಟು ಭಾವೋದ್ವೇಗಕ್ಕೊಳಗಾಗಿರಲಿಲ್ಲ. ಇದು ನನ್ನ ಬಂಧುಗಳು, ಅವ್ವನ...
‘ಪೇಳಿದರು ಕೆಟ್ಟ ಸುದ್ದಿಯ; ನೀನು ಪೋದುದನು.’ ಹೀಗೆ ಸಾಯುವುದುಂಟೆ, ತೊರೆದೆಲ್ಲ ಬಿನ್ನಾಣ? ಈ ಭೂಮಿಯಿತ್ತಯ್ಯ ನಿನಗೆ ಪಂಚಪ್ರಾಣ. ಇದು ಸ್ವರ್‍ಗವೆನುತಿದ್ದೆ. ಚಹ-ಕಾಫಿ-ಪಾನವನು ಮಾಡಿ ಭೂಸುರನಾದೆ. ಭಾಸುರಾಂಗನೆ ತಾನು ಕೃಷ್ಣ! ನಿನ ರುಕ್ಷ್ಮಿಣಿಯು...
ಜೀವ ಬಗಿಸಿತು ಹಿಂಗ ಹ್ಯಾವ ಮಾಡಲಿ ಹೆಂಗ ತಾಯಿ ನಿನ್ನಾ ಮಾರಿ ನೋಡಲೆಂಗ ಯಮನೂರಿನಾ ಮಾವ ಬಾಳ ಮಾಡ್ಯಾನ ಜೀವ ತಂದೆ ನಿನ್ನಾ ಪಾದ ಕಾಣಲೆಂಗ ಆತೂಮ ಅರವಟಿಗಿ ತಲಿತುಂಬ ಚಟುವಟಿಕಿ ಆತ್ಮರಾಯಾ ನಿನ್ನ ಪಡಿಯಲೆಂಗ ಲಿಂಗ್ಸೂರ ಶರಣಯ್ಯ ಗವಿಮಠದ ಗುರುಮಯ್ಯ ಕರ...
ಸತ್ಯಾನಂದ ಪಾತ್ರೋಟ ಅವರ ‘ಹಂಗಿಲ್ಲದ ಅಂಗಳ’ ಎಂಬ ಹೊಸ ಸಂಕಲನದ ಕುರಿತು ಒಂದಿಷ್ಟು ಟಿಪ್ಪಣಿಗಳನ್ನು ಮಾಡಬೇಕೆಂದಿದ್ದಾಗ ಈ ಕವಿ ನಡೆದ ದಾರಿಯ ಕಡೆ ಹೊರಳಿ ನೋಡುವುದು ಉಚಿತ ಎಂದುಕೊಂಡಿದ್ದೇನೆ. ಪಾತ್ರೋಟ ಅವರು ಕವಿ. ಅವರಿಗೆ ಹಾಡು ಮತ...
ಯೆಂಡ ಕುಡದೋನ್ ಕಂತೇಂತ ಯೋಳಿ ನೆಗದೆ ಯೋಳಾದ್ ಕೇಳು; ಒಂದ್ ದಿನಾರ ಸಾಜಾ ತಿಳಕೊ- ಇದ್ದೇ ಇರತೈತ್ ಗೋಳು! ೧ ಬೀದಿ ದೀಪ ಇರತೈತ್ ಅಂಗೇ! ಇರೋ ಜಾಗದಾಗೇನೆ; ನಡಿತಾನಿದ್ರೆ ನೆಳ್ಳೊಂದ್ ಮಾತ್ರ ಬತ್ತೈತ್ ಯಿಂದಾಗೇನೆ. ೨ ದೀಪದ್ ಬೆಳಕು ಬೇಕಂತ್ ಅಂದ್ರೆ ...
ಒಬ್ಬ ದೊಡ್ಡ ಕಲಾವಿದನ ಹತ್ತಿರ ಒಬ್ಬ ವ್ಯಾಪಾರಿ ಬಂದು ಒಂದು ಸುಂದರ ಚಿತ್ರ ಬರೆದು ಕೊಡಲು ಹೇಳಿದ. ಅವನು ಒಂದು ನಿಬಂಧನೆ ಹಾಕಿದ. “ಬರಿಯುವ ಚಿತ್ರದಲ್ಲಿ, ಹಕ್ಕಿ ಹಾಡಬೇಕು, ಹಾರ ಬೇಕು, ಗಿಡ ಚಿಗುರ ಬೇಕು, ಹೂವು ಅರಳಬೇಕು, ಹಣ್ಣು ಬಿಡಬೇಕು, ಕೋಗಿ...
ತರತರದಡುಗೆ ಮಾಡುವ ವರಶಕ್ತಿಯೆಮಗಿರಲು ಬರವೆಂದೇನು ಬಡ ಬಡಿಸುವುದೋ ಬೋರಿನಾಳದಿ ನೀರೆತ್ತಿ ಸೂರಪ್ಪ ಮರಗಿಡವನಳಿಸುವುದೋ? ಊರಿಗೂರೇ ಮಧುಮೇಹವಪ್ಪಂತಾ ಕಬ್ಬನಿಕ್ಕುವುದೋ? ಬರವೆನದೆಲ್ಲೆಡೆ ಬೆಳೆವ ಹಲಸಿನಡುಗೆಲ್ಲ ರೋಗಕೆ ಮದ್ದೋ- ವಿಜ್ಞಾನೇಶ್ವರಾ ****...
ಗೋವಿಂದ ರಾಯಾ ಲಂಬೋನೂ ಹೊತ್ತರೇಳು ಮೊದಲೇ ಲೆಳುವಾನೋ ಹೊತ್ತೇಳೂ ಮುನ್ನೇ ಲೆದ್ದೇನೋ ಕಯ್ಯು ಕಾಲು ಮೋರೆ ತೊಳೆದೇಲೋ ಬಣ್ಣದೊಂದು ಚದರದ ಮೇನೇಲೋ ಹೊನ್ನಿನ ಒಂದು ರಾಚೀ ಹೊಯ್ದಾನೋ ಹೊನ್ನಿಗೊಂದು ರಾಶೀ ಹೊಯ್ದೊಲೇ ಚಿನ್ನದ ಕೊಳಗ ತರವಾನೋ ಬೆಳ್ಳಿಯ ಶಿದ್...
ಬರೆದವರು: Thomas Hardy / Tess of the d’Urbervilles ಈಚೆಗೆ ನಾಯಕನ ಜೊತಿಗೆ ಮಲ್ಲಿಯೂ ಸವಾರಿ ಹೊರಡುವುದು ವಾಡಿಕೆಯಾಗಿತ್ತು. ಅವಳು ಕುದುರೆಯ ಮೇಲೆ ಗಂಡಸಿನಂತೆ ಎರಡು ರಿಕಾಪುಗಳಲ್ಲೂ ಕಾಲು ಹಾಕಿಕೊಂಡು ಕುಳಿತುಕೊಳ್ಳುವಳು. ಅವಳಿಗೆ ...
















