ಗಂಗಿನ ತರಬೇಕಂತ ನಂದಿನ ಸೃಂಗಾರ ಮಾಡಿ || ಕೊಂಬಣಸ ಕೊರಳಽ ಹುಲಗೆಜ್ಜಿ | ಕೋಲ ||೧|| ಕೊಂಬುಽ ಆಣಸ ಕೊರಳ ಹುಲಗೆಜ್ಜಿ ಶಿವರಾಯಾ || ಗಂಗಿಽನ ತರವೋಽ ನಡದಾರ | ಕೋ ||೨|| * * * ಹೆಳ್ಳಽದ ದಂಡಿಽಗಿ ಹೂವ ಕೋವೂ ಜಾಣಿ || ಲಿಂಗಕೊಂದ್ಹೂವಽ ದಯಮಾಡ | ಕೋ...

ಹೇಗೆ ಕಳೆಯಲಿ ತಾಯಿ ನೀನಿಲ್ಲದ ದಿನಗಳ ಎಂದೂ ಊಹಿಸಿಕೊಳ್ಳದ ನನ್ನ ಈ ದಿನಗಳ ನೀ ತೋರಿದ ಬೆಟ್ಟದ ಗುಡಿ ನಿನ್ನನ್ನು ಕೇಳಿದೆ ಮೌನವಾದ ನನ್ನ ನೋಡಿ ಕಾಡು ಮೌನ ಹೊದ್ದಿದೆ ನೀ ನುಡಿದ ನೂರು ಹಾಡು ಗಾಳಿಯಲ್ಲಿ ತೇಲಿದೆ ಏಕೊ ಏನೊ ರಾಗ ಬದಲು ಶೋಕ ಗೀತೆ ಹೊಮ...

ಕುಂಟೋಬಿಲ್ಲೆ ಆಡುತ್ತಿದ್ದಾಗ ಬಾಲ್ಯದಲ್ಲಿ ಕುಂಟುವುದೆಂ ದರೇನೆಂದೇ ತಿಳಿಯದು ಬಡಿಯಿತಂತೆ ಬಾಲ್ಯದಲ್ಲೇ ಪೋಲಿಯೋ ಬೆಳೆಯಬೇಕಿದ್ದ ಕಾಲು ಕುಂಟಿತು – ಕಲ್ಪನಾ ಶಕ್ತಿ ಗರಿಗೆದರಿತು ಬಾಗಿಲೊಂದು ಹಾಕಿಕೊಂಡಾಗ ಇನ್ನೊಂದು ತೆರೆಯಿತು. ನಮ್ಮ ಸಿಜಿಕ...

ನನ್ನ ಅಜ್ಜನ ಕುಲ ಯಾವುದೋ ಅವನ ಅಜ್ಜನ ನೆಲೆ ಯಾವುದೋ ನನ್ನ ಅಪ್ಪನ ಸೆಲೆ ಯಾವುದೋ ನಾನೇನು ಬಲ್ಲೆ? ನಾನು ಕಸಿ ಮಾವಿನ ಮರ ಕಡಲಂಥ ಹೆಣ್ಣು ತೆರೆಯಣ್ಣ…… ಕಣ್ಣು! *****...

ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. “ಪತಿಯೇ ದೇವರು” ಎನ್ನುವ ಸಾಂಪ್ರದಾಯಿಕ ಗೊಡ್ಡು ಸಂಸಾರದ...

ಒಂದೇ ಮಾತು ಒಂದೇ ಮನಸು ಒಂದೇ ನಡೆ ಒಂದಾಗಲಿ ಈ ನಾಡಿನ್ಯಾಗ ಡಾಲರ್‌ಗಾಗಿ ಭಾಷೇನ ಒತ್ತಿ ಇಡೋ ಮಂದಿ ಈ ನಾಡಿನ ಹಿತ ಹ್ಯಾಂಗ ಕಾಯ್ತಾರ ಮಾಡ್ತೀವಿ ಕನ್ನಡದ ಪೂಜಿ ಅಂತಾರ ಆಹ್ವಾನ ಪತ್ರ ಛಾಪಿಸ್ತಾರ ಆಂಗ್ಲ ಭಾಷೆಯೊಳಗ ಆಂಗ್ಲದ ಗುಂಗಿನ್ಯಾಗ ಇಂಗ್ಲ್ಯಾಂಡ...

ಒಪ್ಪಿದವರು ಬರಲಿಲ್ಲ ಬಂದವರು ಒಪ್ಪಲಿಲ್ಲ. ಇವರಿಬ್ಬರ ನಡುವೆ ಬಂದವರು ತನುಮನ ಅರಳಿಸಲಿಲ್ಲ. ಕೊಚ್ಚಿ ಹೋಯಿತು ಜೀವನ ರೊಚ್ಚಿಗೇಳಲಿಲ್ಲ ಮನ ಸುಖವ ಮರೆತಿತು ತನು ಅಪ್ಪಿಕೊಂಡಿತು ಮೌನ. ಸುಖವಿಲ್ಲ ದುಃಖವಿಲ್ಲ ಸರಸವಿಲ್ಲ ವಿರಸವಿಲ್ಲ ದಾರಿಯಿದೆ ನೇರಕೆ...

ಕಾಲನ ಗಳಿಗೆ ಬಟ್ಟಲನ್ನು ಕುಡುಗೋಲನ್ನು ಕೈಯಲ್ಲಿ ಹಿಡಿದಿರುವ ಚೆಲುವನೇ ನೀನಿನ್ನು ಮುಂಚಿನಂತಲ್ಲ ಕರಗುತ್ತ ಬೆಳೆದಿರುವೆ, ಸುತ್ತಲಿನ ಗೆಳೆಯರೆಲ್ಲರ ಕೊಡವಿಕೊಂಡಿರುವೆ. ಅದು ನಿನ್ನ ಸವಿಯಿಚ್ಛೆ ಬಲಿತುದನು ತೋರುವುದು. ಎಲ್ಲ ಗೊಂದಲವನು ನಿಯಂತ್ರಿಸಬ...

ಭಾಷೆ ಬಹಳ ಹಗುರಾದ ಸಾಧನವಾದ್ದರಿಂದ ಅದರ ಪ್ರಶ್ನೆ ಬಂದಾಗಲೆಲ್ಲ ಅದನ್ನು ನಾವು ಏನುಬೇಕಾದರೂ ಮಾಡಬಹುದು ಎಂದು ತಿಳಿಯುತ್ತೇವೆ. ಅದು ಸಾಧ್ಯವಿಲ್ಲ ಅನಿಸಿದಾಗ ಯಾರು ಯಾರನ್ನೋ ದೂರುತ್ತೇವೆ. ಫರ್ಡಿನಾಂಡ್ ದ ಸಸ್ಸ್ಯೂರ್ ತನ್ನ A Course in General...

1...910111213...16

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....