ಅಂತೆ ಗುಣಿಸಿದೊಡೆಂತಾತುರದೊಳ್ ಆನಂದವಧಿಕವಾಗಲಿ ಕೆಂದೆನುತಿಳೆಯಂತರಂಗವನು ಅವಗಣಿಸುತಲಿ ಎಂತು ನೋಡಿದೊಡಂ ಇಲ್ಲಿ ನಡೆವುದು ಬರಿದಪ್ಪ ಅಂಮರ ಲೆಕ್ಕ, ಕೂಡಿ ಕಳೆಯುವ ಲೆಕ್ಕ, ಹುಟ್ಟು ಸಾವಿನ ಲೆಕ್ಕ ಅಂತಿದನು ಗುಣಿಸಿದೊಡಂ ಭಾಗಿಸಿದೊಡಂ ಅಪಾಯ ಪಕ್ಕಾ &...

ಪಾಪು ತನ್ನ ಶಿಶುವಿಹಾರ ಟೀಚರ್‌ಗೆ ಕೇಳಿತು.. “ನಾನೇನೂ ಮಾಡದಿದ್ರೆ ನನಗೆ ಶಿಕ್ಷೆ ಕೊಡುವುದಿಲ್ಲಾ?” “ಏನೂ ಮಾಡದಿದ್ರೆ ಯಾರು ಶಿಕ್ಷೆ ಕೊಡ್ತಾರೆ ಮರಿ” “ಮೇಡಂ ನಾನಿವತ್ತು ಹೊಂವರ್ಕ್ ಮಾಡಿಲ್ಲ” *****...

ಅಚ್ಚರಿಯ ನೋಟವದೇಕೆ ನಿಟ್ಟುಸಿರ ಬಿಡುವಿರೇಕೆ ಅರೆಗಳಿಗೆ ದಿಟ್ಟಿಸಿ ನೋಡಿರಿ ಕಲಾವಿದನ ಕರಚಳಕದೆ ಅವಿರ್ಭವಿಸಿದ ಕಲ್ಪನೆಯ ಚಿತ್ರವೇ ದೇವನ ಸೃಷ್ಠಿಯ ವೈಚಿತ್ರವೇ ಅಲ್ಲ ನಿಮ್ಮೆದುರು ನಿಂತಿರುವ ನಾನೊಂದು ಬೋಳು ಮರ ಗತ ಕಾಲದೆ ನಾನಾಗಿದ್ದೆ ಫಲಭರಿತ ಸಂ...

ಇಬ್ಬರಿಗೊಂದಂಬ ತೊಡುವೆ ಗಡ ಕಾಮಾ ಅರಿದರಿದು ಬಿಲುಗಾರನಹೆಯೋ ಎಸೆದಿಬ್ಬರು ಒಂದನೀ ಹರು ಗಡ ಇದು ಹೊಸತು ಚೋದ್ಯವೀ ಸರಳ ಪರಿ ನೋಡಾ ಎನಗೆಯೂ ಉರಿಲಿಂಗದೇವಗೆಯೂ ತೊಟ್ಟೆಸು ನಾವಿಬ್ಬರೊಂದಾಗೆ ಬಿಲ್ಲಾಳಹೆ ಎಸೆಯಲೋ ಕಾಮ [ಚೋದ್ಯ-ಆಶ್ಚರ್ಯ, ಹರು – ತೆಗೆದು...

ಸತಿ:- ತೇಲು ಮೋಡಗಳ ತೀಡಿ ಮುಡಿಗಟ್ಟಿ ಮಲ್ಲಿಗೆ ಮುಡಿದು ಮುಗುಳುನಗೆ ಚೆಲ್ವ ಮುಗಿಲುಚೆನ್ನೆಯ ನೋಡಿ ನಗದಿರ್ಪ ಕವಿಯು ಕವಿಯೇನೆಂಬೆ! ಚೆನ್ನ ಚಿನ್ಮಯನೆ, ಚೆಲುನಗೆಯನೊಮ್ಮೆ ಬೀರು, ಸುಪ್ರಭಾತದ ಸುಮನ ಸಂಚಯದಂತೆ! ಕಿರುನೃತ್ಯಗೈಯೊಮ್ಮೆ ಮಧುವನೀಂಟಿ ಮೈ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....