ಕವಿತೆಯೆಂದರೇ ವಿಸ್ಮಯ ಎಂದರು ಕೆಲವರು ಈ ಬದುಕು ಅದಕ್ಕಿಂತ ವಿಸ್ಮಯ ಎಲ್ಲೋ ಅಲ್ಲೊಮ್ಮೆ ಇಲ್ಲೊಮ್ಮೆ ಒಂದು ಪದವೋ ವಾಕ್ಯವೋ ಕೈ ಹಿಡಿದರೆ ಮಾತು ಬೆಳಕಾದರೆ ಒಂದು ಕವಿತೆ ಈ ಬದುಕೋ ಕ್ಷಣ ಬಿಡದಂತೆ ಕೈ ಹಿಡಿದು ದರದರ ಎಳೆದು ಆಕಾಶಕ್ಕೋ ಪಾತಾಳಕ್ಕೋ ಎಸೆ...

ಅವರು ತ್ರಿಶೂಲಗಳನ್ನು ಹಿಡಿದಿದ್ದಾರೆ ಇವರು ತಲವಾರಗಳನ್ನು ಹಿಡಿದಿದ್ದಾರೆ ಕಿಚ್ಚು ಹಾಯಿಸುವ ಹಬ್ಬದಲಿ ಇಬ್ಬರೂ ಹುರುಪಿನಲಿ ಪಾಲ್ಗೊಂಡಿದ್ದಾರೆ! ‘ಅಲ್ಲಾ’ ಎಂದರೆ ನೇರ ಸ್ವರ್ಗಕ್ಕೆ ಅಟ್ಟುತ್ತಾರೆ ‘ರಾಮ’ ಎಂದರೆ ಇಲ್ಲ...

ಕಲ್ಲಪ್ಪ ಬಡವ ಅಂದ್ರೆ ಬಡವ, ಕಷ್ಟಪಟ್ಟು ತೋಟಗಾರಿಕೆ ತರಬೇತಿ ಪಡೆದ. ಒಳ್ಳೆಯವನಾಗಿದ್ದ. ಎಲ್ಲರೂ ಆತನನ್ನು “ನಮ್ಮ ಮನೆಗೆ ಬನ್ನಿ,” “ನಮ್ಮ ಮನೆಗೆ ಬನ್ನಿ,” “ಹೂದೋಟ ಮಾಡಿಕೊಡಿ”, “ತೆಂಗಿನಗಿಡ ನ...

ಕೇಳಿರೈ ಸಭಾ ಬೆನ್ನೆಲವುಗಳೇ ತಮಗೆದೆಗಾರ್‍ಕಿದ್ದೊಡೆ ಎನ್ನ ಕಾವ್ಯವಂ ಮನದಲಿ ಪಠಿಸಿರೈ ನಿಲ್ಲು, ನಿಲ್ಲು, ಎಲೈ ಪಂಡಿತೋತ್ತಮನೇ ನಿನ್ನ ಕಾವ್ಯದಲ್ಲೇನಿಹುದು? ಮೈ ಮುಚ್ಚುವುದೋ? ಉದರ ತುಂಬುವುದೋ ಮೈ ಮೇಲಿನ ಆಭರಣವಾಗುವುದೋ ನೀ ನುಡಿಯದಿರು ಅಹಂನಲಿ ಹ...

ಒಮ್ಮೆ ಹುಟ್ಟುತ್ತೇವೆ ಒಬ್ಬತಾಯಿಯ ಗರ್ಭದಿಂದ ಅಣ್ಣ ತಮ್ಮಂದಿರಾಗಿ, ಅಕ್ಕತಂಗಿಯರಾಗಿ, ಇನ್ನೊಮ್ಮೆ ಸಿಗುವುದೇ ಈ ಯೋಗ? ಮರೆತೇ ಬಿಡುತ್ತೇವೆ ಜಗಳಾಡುತ್ತೇವೆ. ಒಂದೇ ಬಟ್ಟಲಲ್ಲಿ ಉಂಡು ಒಂದೇ ಮನೆಯಲ್ಲಿ ಬೆಳೆದೂ ಒಬ್ಬರಿಗೊಬ್ಬರು ಅಪರಿಚಿತರಾಗುತ್ತೇವೆ...

ಚಳಿಗಾಲದಂತಿದ್ದ ನಿನ್ನ ಅಗಲಿಕೆ ಹೇಗೆ ಕರಗಿ ಓಡುತ್ತಿರುವ ಸಂವತ್ಸರದ ಸುಖದ ಕೊಡುಗೆಯಾಗಿದೆ ಈಗ! ಎಷ್ಟು ಜಡಗಟ್ಟಿದೆ, ಎಂಥ ಕತ್ತಲೆ ಕಾಲ ಕಂಡೆ! ಮುದಿ ಫಾಲ್ಗುಣದ ಬರಿತನವೆ ಎಲ್ಲೆಲ್ಲೂ. ಕಳೆದ ಸಲ ನೀನಿರದ ಚೈತ್ರ-ಕಾರ್ತಿಕ ಅವಧಿ ಮಧುವಸಂತನ ಸಿರಿಯ ತ...

ಆರಿದ ನಂದಾದೀಪ ಎಂದಿನಂತೆ ನಿರುತ್ಸಾಹದಿಂದ ಎದ್ದು ರಣರಂಗಕ್ಕೆ ಬಂದು “ಮಹಾರಾಜ ನಿಮ್ಮ ಜೇಷ್ಠ ಪುತ್ರರಾದ ಇಂದ್ರಜಿತುವು ನಿಕುಂಬಳಾ ದೇವಿಯ ಅನುಗ್ರಹದಿಂದ ದೊರೆತ ಮಾಯಾರಥದಲ್ಲಿ ಕುಳಿತು ಯಾರಿಗೂ ಕಾಣದಂತೆ ಆಕಾಶದಲ್ಲಿ ಅಡಗಿ ಬಾಣಗಳ ಪ್ರಯೋಗದಿ...

ಕತ್ತಲೆಯ ಕಿಡಿಗೇಡಿತನ ಕಂಡು ಋಭು ನೊಂದು ದೇವಗಾನದಿ ಬೆಳಕ ತಂದನೇನು? ಬೆಳಕೆ ದಾರಿಯತೋರು ಎಂಬ ಒಳದನಿ ಕೇಳಿ ಸೂರ್ಯನಾರಾಯಣನು ಬಂದನೇನು ? ತಾಮಸದ ಪಾಚಿಯನು ಎತ್ತಿ ಹಾಕಿದ ಹಾಗೆ ಹಿಮಕೆ ಮುತ್ತಿದ ತಿಮಿರರಾಸಿಯನ್ನು ಮಾಯಮಾಡಿದ ಅಬ್ಬ! ಆದಿತ್ಯನವಗಾವು-...

ತುಂಬಿ ಬಂದಿದೆ ಹೃದಯವಿಂದು ನಿನ್ನ ನೆನಪೇ ತಂದಿದೆ | ಅಲೆಗಳಿಲ್ಲದೆ ಪ್ರೇಮಗಂಗೆ ಶಾಂತವಾಗಿ ಹರಿದಿದೆ || ಪ || ಹುಣ್ಣಿಮೆಯ ಈ ಶುಭ ರಾತ್ರಿ ಹಗಲಿನಂತೆ ಬೆಳಗಿದೆ | ಧರೆಗೆ ಇಳಿದಾ ಚಂದ್ರ ಕಾಂತಿ ಹಾಲಿನಂತೆ ಹರಡಿದೆ || ೨ || ಜೋಡಿ ಹಂಸದ ಪುಟ್ಟ ದೋಣ...

1...12131415

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...