ಕೇಳಿರೈ ಸಭಾ ಬೆನ್ನೆಲವುಗಳೇ
ತಮಗೆದೆಗಾರ್‍ಕಿದ್ದೊಡೆ
ಎನ್ನ ಕಾವ್ಯವಂ ಮನದಲಿ ಪಠಿಸಿರೈ
ನಿಲ್ಲು, ನಿಲ್ಲು, ಎಲೈ ಪಂಡಿತೋತ್ತಮನೇ
ನಿನ್ನ ಕಾವ್ಯದಲ್ಲೇನಿಹುದು?
ಮೈ ಮುಚ್ಚುವುದೋ? ಉದರ ತುಂಬುವುದೋ
ಮೈ ಮೇಲಿನ ಆಭರಣವಾಗುವುದೋ
ನೀ ನುಡಿಯದಿರು ಅಹಂನಲಿ
ಹೌದು! ಎನಗಿಹುದು ಅಹಂ
ಪ್ರತಿಭೆ ಎನ್ನ ಮೈ ತುಂಬಿಹುದು ಕಾಣಾ
ರೋಮ ರೋಮಗಳಲ್ಲರಳಿಹುದು ಸಾಹಿತ್ಯ
ಎನಗುಂಟು ಲೆಕ್ಕಣಿಕೆ
ಅದರೋಳ್ ತುಂಬಿಹುದು ಸಾಹಿತ್ಯದಾ ಕಡಲು
ಕಾಂಚಾಣ ಅಡಗಿಹುದು ನಿನ್ನಲಿ
ನಿನಗರಿವಿಲ್ಲದೇ ನಿನ್ನಾ ಸುಡುತಿಹುದು ಕಾಣಾ
ಒಮ್ಮೆ ನಿನ್ನಲಿ ಮತ್ತೊಮ್ಮಿನ್ನೊಬ್ಬರಲಿ
ತುರುಗದಂತಾಡದಿರು ದುರಹಂಕಾರದಲಿ
ಸಾಂಸ್ಕೃತಿಕ ವೇದಿಕೆಯನೆಂದೂ ಧಿಕ್ಕರಿಸದಿರು
ಸಾಹಿತಿಗಳ ತಿರಸ್ಕಾರ ಸಲ್ಲದು
ಲೋಕದ ಮನ್ನಣೆ ಸಿಗದು ಕಾಣ
ನಾವ್ ಸರಸತಿ ಸುಪುತ್ರರು
ಎಮಗೆ ಈ ರಾಜ್ಯವೇನ್? ಬೇರಾವರಾಜ್ಯವೇನ್
ಸಿಗುವುದೆಲ್ಲೆಲ್ಲಾ ಮಾನ ಸಂಮಾನ
ಎಲೈ ಅಜ್ಞಾನಿ ಕೇಳು
ಸಾಹಿತ್ಯವೆಂಬುದು ಸಂತೆಯಲ್ಲಿ ಮಾರಿ
ಲಾಭ ತರುವ ಸರಬಳೆಯಲ್ಲ ಮೂಢ
ಎಲೈ ಮರುಳೆ ಅದು ಅಶಾಶ್ವತ
ಸಾಹಿತ್ಯ ಲೋಕದೋಳ್ ಮಿಂದವನೆ ಅಮರ
ಇದು ಹೆಡ್ಡನಿಗೆಂದೂ ತಿಳಿಯದು ಕಾಣಾ
ನಿಜವನ್ನರಿತು ಸಾಹಿತ್ಯ
ಸವಿಯನು ಭಾವವನು ಅರಿ
ನೀನಾಗುವಿ ಛವಿ ನೀನಾಗುವಿ ಛವಿ
*****