ಹುಡುಗಿ ತಪ್ಪು ಹೆಜ್ಜೆ ಇಟ್ಟಿದ್ದಳು. ಸಮಾಜವನ್ನು ಎದುರಿಸಲಾರದಾದಳು. ಸತ್ಯವನ್ನು ಹೂತಿಡಲು ಆತ್ಮಹತ್ಯೆ ಮಾಡಿಕೊಂಡಳು. ಅವಳು ಸತ್ತಳು. ಸತ್ಯ ಸಾಯಲಿಲ್ಲ. “ಅವಳಿಗೆ ಮೂರು ತಿಂಗಳು ತುಂಬಿತ್ತು” ಎಂಬ ಸತ್ಯ ಎಲ್ಲರ ಬಾಯಲ್ಲೂ ಕುಣಿದಾಡು...

ಉರಿದು ಬಿದ್ದಿತು ಅಲ್ಲಿ ಹಳೆ ಬಾಳ ತೇರು ಬೆಳಕು ಚಿಗುರಿತು ಇಲ್ಲಿ ಹೊಸ ಬಾಳ ಸೂರು ಗರಿ ಬಿಚ್ಚಿತು ಕನಸು ಮುದ ಹೆಚ್ಚಿತು ಮೈ ನೆರೆದ ಮನಸು ಮುಗಿಲಾಯಿತು ಅಲ್ಲಿ ನಗುತಾವೆ ಚುಕ್ಕಿ ಹಸಿರು ಗಿಡದಾಗೆ ಹಕ್ಕಿ ನೆರೆ ಉಕ್ಕಿತು ಮೈ ನಸುನಕ್ಕಿತು ಗರಿಗೆದರಿ...

ಕಲಾಕಾರ ಇಲ್ಲವೇ ಬರಹಗಾರರ ಸೃಜನಶೀಲತೆ ಹಾಗೂ ಸಮಾಜದ ಕಟ್ಟುಪಾಡುಗಳು ಹೊರ ಜಗತ್ತಿನ ನಡುವಿನ ಅವನ ಅನುಸಂಧಾನ ಹೇಗೆ ಸಮತೋಲನದೊಂದಿಗೆ ಸಾಗಬೇಕಾದ ಅನಿವಾರ್ಯತೆ ಮಧ್ಯೇ ಆತ ಹೇಗೆ ಕಳೆದು ಹೋಗುತ್ತಾನೆ ಎಂಬುದ ಕಲಾತ್ಮಕತೆಯ ಮೇರೆಯಲ್ಲಿಯೇ ಹೆಣೆದು ಕಟ್ಟಿರ...

೧ ಕಾಯಿ, ತಾಯಿ, ಕೃಪೆಯ ತೋರಿ ನಮ್ಮ ಕೃಷ್ಣನ ; ಬೆಳ್ಳಿಬೆಟ್ಟದೊಡತಿ, ಗೌರಿ, ಬೆಳ್ಳಿಯೊಸಗೆಗೊಸಗೆ ಬೀರಿ ಕಾಯಿ ಕೃಷ್ಣನ, ಏಳು, ವಾಣಿ, ವೀಣೆದಾಳು, ಅಮೃತವಾಣಿಯಿಂದ ಹೇಳು ಪುಣ್ಯದರಸು, ಧರ್ಮದಾಳು, ದೊರೆಯ ಕೃಷ್ಣನ. ಹೊನ್ನು ನಡೆಯ, ಹೊನ್ನು ನುಡಿಯ, ಕ...

ಮಂಜಿಗೆ ನೆನೆಯದ ಮೈಯಿದ್ದರೆ ಅದು ಮೈಯಲ್ಲ ಕರುಣೆಗೆ ಕರಗದ ಮನವಿದ್ದರೆ ಅದು ಮನವಲ್ಲ ಗಾಳಿಗೆ ಅಲುಗದ ಎಲೆಯಿದ್ದರೆ ಅದು ಎಲೆಯಲ್ಲ ಬೆಂಕಿಗೆ ಉರಿಯದ ಹುಲ್ಲಿದ್ದರೆ ಅದು ಹುಲ್ಲಲ್ಲ ಹೂವಿಗೆ ಹಾರದ ಭ್ರಮರವಿದ್ದರೆ ಅದು ಭ್ರಮರವಲ್ಲ ವಸಂತಕೆ ಚಿಗುರದ ಮರವ...

ಹೃದಯದಲ್ಲಿ ವಾಗ್ದೇವಿಯ ಬಿಂಬವನ್ನು ಪ್ರತಿಷ್ಠಿಸಿಕೊಂಡು, ಚಂಚಲ ನೇತ್ರರು ದೇವರ ಪೂಜೆಯನ್ನು ತೀರಿಸಿದರು. ಆಜ್ಞೆಗನುಗುಣನಾಗಿ ವಾಗ್ದೇವಿಯು ಬಳಗದೊಡನೆ ತೀರ್ಥಪ್ರಸಾದಕ್ಕೆ ಸಕಾಲದಲ್ಲಿ ಬಂದೊದಗಿ ದಳು. ತೀರ್ಥಪ್ರಸಾದವಾಯಿತು. ರಾತ್ರಿಯೂಟದ ಏರ್ಪಾಟುಮ...

ಮುಗಿಯಿತು ಬಾಳಿನ ಒಂದು ಮಜಲು ಅವರು ಕರೆದೊಯ್ಯಲು ಬಂದಿಹರು ಹೊರಡ ಬೇಕಾಗಿದೆ ಹೊಸ ಜಾಗಕೆ ಹೊಸ ಬಾಳನು ನಡೆಸಲು ಕಸಿ ಮಾಡಿದ ಸಸಿ ತೆರದಿ ಇಲ್ಲಿಗೆ, ಇನ್ನು ಮೇಲೆ ನಾನೊಬ್ಬ ಅತಿಥಿಯಾದೆನೆಂದು ತಿಳಿದಾ ಇವಳಿಗೆ, ತನ್ನೊಳಗೆ ಏನೋ ಆಗುತ್ತಿದೆ ಏನೆಂದು ಹೇ...

ಹುಟ್ಸೋದ್ಯಾಕೆ ಸಾಯ್ಸೋದ್ಯಾಕೆ ನಮ್ಮಯ ತಪ್ಪಾದ್ರು ಏನು? ಸ್ತ್ರೀಭ್ರೂಣವಾಗಿದ್ದೆ ತಪ್ಪೇನು?? ನಿಮ್ಮಯ ತೆವಲಿಗೆ ಆಡದ ಮಾತಿಗೆ ನಮ್ಮಯ ಈ ಬಲಿ ಹಿತವೇನು? ರೋಗಿಗಳನ್ನು ಉಳಿಸುತ್ತೀರಿ ನಮ್ಮಯ ಸಾವಿಗೆ ಕಾಯುತ್ತೀರಿ ಸಂಕಟಕೊ ಇಲ್ಲ ಸಂತಸಕೊ ಕಡೆಗೆ ಕಂಬನ...

“ಇಡ್ಲಿ, ಚಟ್ನಿ, ಇಡ್ಲಿ!” ಎಂತ ಕೂಗಿಕೊಂಡು ಬೈಸಿಕಲ್ ಮೇಲೆ ಬಂದವನು ಹೊರಟು ಹೋಗಬೇಕಾಗಿತ್ತು, ತನ್ನ ಎಡ ಹಿಡಿದು; ಆದರೆ ಅವನು ಹಾಗೆ ಹೋಗಲಿಲ್ಲ. ದಿಲೇರಖಾನ್ ನಿಂತಿದ್ದ ಕಡೆಗೆ ಬಂದ. ದಿಲೇರ್ ಹೇಳಿದ- “ಖಬರ್‍ದಾರ್ ಇದ್ಲೀಖಾನ...

1...4041424344...147

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...