ಮೂರು ಮಂದಿ ಜಾಣರು ಅವರಿಗಷ್ಟೇ ಕೋಣರು ಒಮ್ಮೆ ಮೂರೂ ಕೋಣರು ತಪ್ಪಿಸಿಕೊಂಡು ಹೋದರು ಅವರ ಹುಡುಕಿ ಹೊರಟರು ಮೂರು ಮಂದಿ ಜಾಣರು ಕಂಡವರೆಲ್ಲರ ಕೇಳಿದರು ಎಲ್ಲಿ ನಮ್ಮ ಕೋಣರು? ದುಂಡು ದುಂಡು ಧಡಿಯರು ಉಂಡು ತಿಂದು ಭಂಡರು ಕತ್ತಲಲ್ಲಿ ಕಾಣಿಸರು ಅಷ್ಟು ಕ...

ಪಂಡಿತರ ಪಾಮರರ ಮನವನೊಲಿಸುತಲಿರುವೆ ಕುದಿಯುತಿಹ ಆತ್ಮಕ್ಕೆ ಶಾಂತಿಯನು ಕೊಡುವೆ ಕರೆದೊಯ್ವೆ ಎಲ್ಲಿಗೋ ಕಂಬನಿಯ ತರಿಸುವೆ ಸರಿಯಿಲ್ಲ ನಿನಗಾರು ಸಂಗೀತವೆ! ನಿರ್ಮಲದ ಹೃದಯಕ್ಕೆ ಭಕ್ತಿಯನು ಕರುಣಿಸುವೆ ಭಾವದಲಿ ನಿಮಿಷದೊಳು ದೇವನನು ಕಾಣಿಸುವೆ ಪ್ರೇಮಕ್...

ಯುಗ ಯುಗಾದಿ ಬಂದಿದೆ…, ಬೆಲೆ ಏರಿಕೆ ತಂದಿದೆ ಬಡವನ ಮಾಡಿಗೆ, ಇಲ್ಲಣಗಳ ತೋರಣ ಕಟ್ಟಿದೆ. ಮಾವು ಇಲ್ಲ, ಬೇವು ಇಲ್ಲ, ಪ್ರಕೃತಿ ಕೂಡಾ ಮುನಿದಿದೆ! ಮತ್ತೆ ಮತ್ತೆ ಯುಗಾದಿ ಬಂದಿದೆ, ಹೊಸ ತಗಾದಿ ತಂದಿದೆ. ೧ ಒಲೆ ಮೇಲಿನ, ಹೊಸತು ಮಡಿಕೆ, ಕುದಿವ...

ತಾರೆಯರು ತಾರೆಯರು ಅಪೂರ್ವ ಸುಂದರಿಯರು – ನನಗೆಲ್ಲಾ ಗೊತ್ತೋ ತಮ್ಮ ಥಳಕು ಮೇಕಪ್‌ನಲ್ಲಿ ರಾತ್ರಿ ಆಕಾಶ ತೋರ್‍ಸಿ ಥಳಪಳ ಹೊಳೆಯುವ ಈ ವಯ್ಯಾರಿಯರು; ಹೇಳ್ತೇನೆ ಕೇಳು ಹಗಲು ಮುಖವನ್ನೇ ತೋರಿಸಲು ಅಂಜಿ ಓಡುವ ಇವರು ಬರೀ ರಾತ್ರಿ ರಾಣಿಯರು. ***...

ನಿನ್ನ ನೂರಾರು ಹಸ್ತಗಳು ತೂರಿ ನೆಲದೆದೆಯ ತಬ್ಬಿಹವು ಆಹಾ ಅದೆಷ್ಟು ಆಳವೋ ನಿನ್ನ ಪ್ರೀತಿ ಎಂದೋ ನೆಲವ ಮುದ್ದಿಸಿತು ಬೀಜ-ನೀನೆದ್ದೆ ಮುದ್ದಿನ ಚೆಲುಮೆ ಎನಿತೊ ನೋವು ಸುಂಕಗಳ ತೆತ್ತು ಸ್ಥಿರವಾಯಿತು ಅಸ್ಥಿ-ಮಾಂಸ- ಮಜ್ಜಾಕಾಯ ದಿನೆ ದಿನೇ ಭದ್ರವಾಯಿತ...

ಸ್ವದೇಶಿ ಮಂತ್ರದ ಕೆಳಗೆ ವಿದೇಶೀಯ ತಂತ್ರಗಳು ವಿಜೃಂಭಿಸುತ್ತಿವೆ. ದೇಶ ಭರಿಸಲಾರದಷ್ಟು ಸಾಲದ ಶೂಲಕ್ಕೆ ಸಿಕ್ಕಿ ಉಸಿರುಗಟ್ಟುತ್ತಿದೆ. ಮತೀಯವಾದದ ಅನಿಷ್ಟ ಭಾರತದ ಮಣ್ಣನ್ನು ಕಲುಷಿತಗೊಳಿಸುತ್ತಿದೆ. ಯಾರ ಹಿಡಿತವೂ ಇಲ್ಲದೆ ಜನಸಂಖ್ಯೆ ಸ್ಫೋಟಗೊಳ್ಳು...

ಮೊನ್ನೆ Referenceಗೆಂದು Library ಹೊಕ್ಕಾಗ ಫುಸ್ತಕಗಳು ಮೋಕ್ಷಗೊಂಡವರಂತೆ ಅವುಗಳ ಮುಳುಮುಳು ಧ್ವನಿಕೇಳಿ ಚಕಿತಳಾದೆ. “ಬನ್ನಿ ಬನ್ನಿ ನಿಮಗೆ ಕಿವಿಗಳಿದ್ದರೆ ಅವಕ್ಕೊಂದು ಆತ್ಮ ಇದ್ದರೆ ಆತ್ಮಕ್ಕೂ ಒಂದು ಕಣ್ಣು ಇದ್ದರೆ, – ಕ್ಷಮಿಸ...

ಯಾರು ಏನಂದರೇನು ಯಾರಿಗೆ ಹೇಗಿದ್ದರೇನು ಅವರವರ ಮಗು ಅವರಿಗೇ ಚೆನ್ನ ಪುಟಿಕಿಟ್ಟ ಚೊಕ್ಕ ಚಿನ್ನ ಮೂಗು ಮೊಂಡಾಗಿದೆಯೆಂದಿರಾ? ಬೇಟೆಗಾರನ ಕೈಯ ಬಾಣ ಜೋಕೆ ಕಣ್ಣು ಗುಲಗುಂಜಿಯೇ? ದೇವರ ಮುಂದೆ ಹಚ್ಚಿಟ್ಟ ದೀಪ ದೂರವಿರಿ ನಕ್ಕರೆ ಭಯವೇತಕೆ? ಮೊಗ್ಗು ಬಿರಿ...

1...3031323334...73

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...