ಬಾನಿಂದೇನೋ ಇಳಿಯುತಿದೆ ಬುವಿಯೆದೆಯೊಳಕ್ಕೆ ಕಲ್ಪನೆ ಏನನೊ ಸೇರಿಸಿದೆ ಕಾಣುವ ದೃಶ್ಯಕ್ಕೆ ನದಿಯೆದೆಯಲ್ಲಿ ಮುಗಿಲಿನ ಕವಿತೆ ಹುಣ್ಣಿಮೆ ಇರುಳಲ್ಲಿ, ಬಾನಿನ ಹಾಡು ಮೂಡಿತು ಹೇಗೆ ಭೂಮಿಯ ಶ್ರುತಿಯಲ್ಲಿ? ನೋಟಕೆ ಶ್ರವಣಕೆ ತಿಳಿಯದ ಏನೋ ಕಾಡಿದೆ ಎದೆಯಲ್ಲ...

ಹಾಸ್ಟಲಿನಲ್ಲಿದ್ದ ತನ್ನ ವಸ್ತುಗಳನ್ನೆಲ್ಲ ತುಂಬಿಕೊಂಡು ಬಂದಿದ್ದ ಇಳಾ ಸಕಲೇಶಪುರದಿಂದ ಬಾಡಿಗೆ ಟ್ಯಾಕ್ಸಿ ಮಾಡಿಕೊಂಡು ಮನೆ ತಲುಪಿದಳು. ಬಂದವಳೇ ರೂಮು ಸೇರಿ ತನ್ನ ವಸ್ತುವನ್ನೆಲ್ಲ ಹಾಕಿ ಅಜ್ಜಿಯನ್ನು ಹುಡುಕಿಕೊಂಡು ಬಂದಳು. ಅಜ್ಜಿ ದೇವರ ಮನೆಯಲ್...

‘ಅಸ್ಪೃಶ್ಯ ಚಂಡಾಲ ಪಂಚಮ ಹೊಲೆಯ’ರೆಂದು ದೂರವಿಟ್ಟಿಹೆವಲ್ಲ ನಮ್ಮ ಸಮ ಸೋದರರ? ಅನ್ಯತ್ರವಿಲ್ಲದಿಹ ಹೊಲೆಯದೇನವರ? ನಾವೆ ಮಾಡಲು ಹೇಸುವೆಮ್ಮ ಸೇವೆಯನಿಂದು ಅವರು ಮಾಡುತಲಿಹುದೆ ಅವರಿಗಂಟಿದ ಹೊಲೆಯೆ? ಸಲ್ಲದಿಲ್ಲದ ಸತ್ತ ಶಾಸ್ತ್ರದಾಧಾರವನು ಕೊಟ್ಟು, ಅ...

ನಮ್ಮಂಕಲ್ ಜೀವನ ಮಾಡ್ಕೊಂಡಾರೆ ಬಲು ಸರಳ ಏನೇ ಅಂದ್ರೂ ಹರಿ ಓಂ ಹರಿ ಓಂ! ಅದು ಬಿಟ್ಟರೆ ಬರಿ ಓಂ! ಹಸಿವಾಗುತ್ತಾ ಎಂದರೆ ಹರಿ ಓಂ ಶರಬತ್ತು ಬೇಕಾ ಎಂದರೆ ಹರಿ ಓಂ ಟೀವಿ ಹಾಕ್ಲಾ ಎಂದರೆ ಹರಿ ಓಂ ವಾಕಿಂಗ್ ಹೋಗ್ತೀರ ಎಂದರೆ ಹರಿ ಓಂ ಯಾವಾಗ ಬರ್ತೀರ ಎಂ...

ನಚ್ಚಿನಾ ಸೋದರಿಯೆ ಕಡುಜಾಣೆ ನೀನಮ್ಮ ಸ್ವಚ್ಛವಾಗಿದೆ ಮನವು ಮುದವಾಯಿತಮ್ಮ ಅಚ್ಯುತಾನಂತದೊಳು ಎನಿಬರೆನಿಬರು ಉಂಟೊ? ಸಚ್ಚರಿತ ಮಾನವರು ಶೀಲ ಸುಗುಣಾನ್ವಿತರು ನಿನ್ನ ನುಡಿ ಹಿತವಿಹುದು ನಿನ್ನ ನಡೆ ಸೊಗವಿಹುದು ನಿನ್ನ ಶ್ರಾವ್ಯದ ಗಾನ ಮಧುರವಾಗಿಹುದು ...

ಅದೇ ಕವಿತೆ ಹರಿತ ಕತ್ತಿಯಂತೆ ಸ್ವಾತಿ ಮುತ್ತಿನಂತೆ ಚಿತ್ತಿ ಮಳೆಯಂತೆ ಕರಾವಳಿ ಲಗ್ನದಂತೆ ಬದಲಾಗದ ವ್ಯವಸ್ಥೆಯಂತೆ. * ಅದೇ ಕವಿತೆ, ಅದೇ ಕಪ್ಪಿಟ್ಟ ಮುಖ ಬಡಿದಾಡೋ ಕೈ ಕಾಲು, ಉರಿಯುತ್ತಿರುವ ಕಣ್ಣುಗಳು ಮುಳುಗಡೆಯಾಗಿರುವ ಊರು ಕೇರಿಗಳು ಈ ಪ್ರಗತಿ ...

ಅಷ್ಟೇ ವಯಸ್ಸಿಗೆ ಬರುತ್ತಿರುವ ಕೆಂಡಸಂಪಿಗೆ ಕೆನ್ನೆಯ ಕನ್ನೆಯರು ಕ್ಷಣಕ್ಕೊಮ್ಮೆ ಕನ್ನಡಿಯಲ್ಲಿಣುಕುವಂತೆ, ಈ ಚಂದ್ರನಿಗೆ ಕಂಡ ಕಂಡ ಕಪ್ಪೆ ಹೊಂಡಗಳಲ್ಲು ತನ್ನ ಪ್ರತಿಬಿಂಬ ನೋಡಿಕೊಳ್ಳುವ ಚಾಳಿ, ಇದಕ್ಕೇನನ್ನೋಣ ನೀವೇ ಹೇಳಿ. *****...

ಹಕ್ಕಿಯೊಂದು ಮೇಲೆ ಹಾರಿ ತೇಲಿಹೋಯಿತು ಚಿಕ್ಕಿಯಾಗಿ ಬಾನಿನಲ್ಲಿ ಸೇರಿ ಹೋಯಿತು ಇದೇ ಮಣ್ಣಿನಲಿ ಹುಟ್ಟಿ ರೆಕ್ಕೆ ಪುಕ್ಕಗಳನು ತಳೆದು ಬಿಳಿಯ ಹಂಸವಾಗಿ ಮಹಿಮೆ ಪಡೆದುಕೊಂಡಿತು ಹದ್ದು ಕಾಗೆ ಗೂಗೆಗಳಲೆ ಬೆಳೆದು ನಿಂತಿತು ಎನಿತೊ ಬೆಳ್ಳಕ್ಕಿಗಳನು ಸೃಷ್...

1...1718192021...73

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...