
ಎಲ್ಲೆ ಇರು ನಾ ನಿನ್ನ ನೆನೆಯುವೆನು ಚಿನ್ನ ನೀ ಮರೆತರೂ ಹೇಗೆ ನಾ ಮರೆವೆ ನಿನ್ನ? ನಭದ ನೀಲಿಮೆಯಲ್ಲಿ ಓಲಾಡಿ ಮುಗಿಲು ಬರೆಯುವುದು ನಿನ್ನದೇ ಮುಖಮಾಟ ಹೆರಳು ಓಡುವಾ ತೊರೆಯಲ್ಲಿ ಜಲಜಲಿಸಿ ಹರಳು ನುಡಿಸುವುದು ಓ ನಲ್ಲೆ ನಿನ್ನದೇ ಕೊರಳು! ಸಂಜೆಯ ಗಾಳಿ...
ಕ್ಷಣ ಕ್ಷಣಕೂ ಏರುಬ್ಬರವಾಗಿ ಭಗ್ನವಾಗುವ ಕನಸುಗಳ ಎಸೆಯದಿರಿ ತುಂಬು ಕತ್ತಲೆಯ ಹೆಜ್ಜೆಗಳಿಗೆ ಚುಕ್ಕೆಗಳ ಭರವಸೆಯ ಮಾತುಗಳು ಗಜಿಬಿಜಿ ಹಾದಿಯಲ್ಲೂ ಕುರುಡನಿಗೆ ಕೋಲು, ನಿರಾಳ ಉಸಿರು ಅಂತರಂಗದ ಮಾತುಗಳು ಮೂಕ ಕುರುಡು ಹೆಳವುಗಳೆಂದು ನಿರಾಶರಾದರೆ ಹೇಗೆ...
ಇನ್ನೂ ಅರ್ಥಾಗಲಿಲ್ಲೇನ್ನಿನ್ಗೆ? ನಾಕಕ್ಸರಾ ಬಾಯಾಗಿಟಗಂಡು ನಾಕ ಸಾಲು ತಲಿಯಾಗಿಟಗಂಡು ನಾಕ ಕಾಸು ಕೈಯಾಗಿಟಗಂಡು ಯಾಕ ಮೆರೀತಿಯಲೇ! ಬಾಯಾಗೇ ಅಂತ್ರಕ್ಕೇಣೀ ಹಾಕಿ ಸಮತಾ ಸೋದರತಾ ಗಾಂಧೀತಾತಾ ಅಂತಾ ಒಳ್ಳೇ ನಾಣ್ಣೆಗಳನ್ನ ಒದರಿ ಒದರಿ ಒಡಕು ಬೋಕೀ ಮಾಡಿ...
೧ ಬಾಗಿಲಿಲ್ಲದ ಬಯಲೊಳಗಿಂದ ಮೆಲ್ಲಗೆ ಬಳುಕುತ್ತಾ ಬಂತು ಬೆಳಕಿನ ಹೊಳೆ ಅದರಾಳದಿಂದೆದ್ದ ನೂರಾರು ನಿಹಾರಿಕೆಯರು ಬೊಗಸೆ ತುಂಬಿ ಸುರಿಸುತ್ತಾರೆ ಬಣ್ಣದ ಬೆಳಕಿನ ಮಳೆ. ಹೇಳಿಕೊಳ್ಳಲು ಊರಿಲ್ಲದ ಊರಿಕೊಳ್ಳಲು ಬೇರಿಲ್ಲದ ಸೋರಿಕೊಳ್ಳಲು ನೀರಿಲ್ಲದ ಬೆಳಕಿ...
ನಿನ್ನ ಚೆಲುವನ್ನೆಲ್ಲ ಹೀಗೆ ಹಂಚುವುದೇನೆ ಕಂಡವರಿಗೆ? ಪಡೆದ ಚೆಲುವಿಗೆ ತಕ್ಕ ಘನತೆ ಉಂಟೇನೆ ಕೊಂಡವರಿಗೆ? ಮಲ್ಲಿಗೆಗೆ ನೀಡಿದೆ ನಿನ್ನ ಉಸಿರಾಟದಾ ಪರಿಮಳವನು, ಹೂ ಗುಲಾಬಿಗೆ ಕೊಟ್ಟೆ ನಿನ್ನ ಕೆನ್ನೆಯ ಹೊನ್ನ ಸಂಜೆಯನ್ನು, ಪುಟ್ಟ ಕನಕಾಂಬರಿಗೆ ಮೈಯೆ...
ಕಾಲನ ಕುದುರೆ ಏರಿ ಸಂಕ್ರಾಂತಿಗೆ ಬರುತಿಹ ಸೂರ್ಯ ಮಕರರಾಶಿ ಪ್ರವೇಶಿಸುವ ದಿನ ಪವಿತ್ರ ಸ್ನಾನಕೆ ಆಗಲೇ ಜನದಟ್ಟನೆ ಹೆಣ್ಣುಗಂಡು ಭೇದವಿಲ್ಲದೆ ಮುಳುಗೇಳುವ ಪ್ರಾರ್ಥಿಸುವ ಭಕ್ತಿ ಮಾರ್ಗಿಗಳ ಬೆಳಗು ಚಳಿಗೆ ಮೈಮರಗಟ್ಟುವ ಸಮಯ ನೆಲದ ಕಣ ಕಣ ಉಸುರಿನೊಳು ...
ಅರಳಲೋ ಬೇಡವೋ ಎಂದನುಮಾನಿಸುತ್ತಲೇ ಎಲೆದಳದಳಗಳ ಅರ್ಧವಷ್ಟೇ ಮೆಲ್ಲಗೆ ವಿಕಸಿಸಿ ಯಾರ ದಿಟ್ಟಿಗೂ ತಾಗದಿದ್ದರೆ ಸಾಕೆನುತ ಮೈಮನಗಳನೆಲ್ಲ ಮುದುರಿಸಿ ದೇಹವೂ ನಾನೇ ಆತ್ಮವೂ ನಾನೇ ಬಚ್ಚಿಡಲೆಂತು ಎರಡನೂ ಪರಕೀಯ ದಾಳಿಯಿಂದ? ಕಳವಳದಿಂದ ಸಣ್ಣ ತಾಗುವಿಕೆಗೂ ...
ದಣಿದ ಜೀವಕೆ ಮತ್ತೆ ಕನಸನುಣಿಸಿ ಕುಣಿಸಿರುವ ನೀರೆ ನೀನು ಯಾರೆ? ಯಾರೆ ಚದುರೆ, ನೀನು ಯಾರೆ ಚದುರೆ? ಬಗೆಗಣ್ಣ ತೆರೆಸಿದ ಭಾವಮದಿರೆ ಉರಿವ ಬಿಸಿಲಿಗೆ ತಂಪು ಗಾಳಿ ಸುಳಿಸಿ ಮಣ್ಣಿನಲಿ ಮಳೆಬಿಲ್ಲ ಬಣ್ಣ ಕಲೆಸಿ, ಮಾತಿನಾಳಕೆ ಸಿಗದ ಉರಿಯ ಚಿಗುರ ಬೊಗಸೆಗ...













