Home / ಕವನ / ಕವಿತೆ

ಕವಿತೆ

ಪ್ರಿಯಾ ಪ್ರಿಯಾ ಎಂದು ನನ್ನ ಇನಿಯನ ಹೇಗೆ ನೀನು ಕರೆದೆ ಹೇಳು ಕೋಗಿಲೆ? ಹರಿಯು ನನ್ನ ಇನಿಯನೆಂದು ತಿಳಿಯದೆ? ಲಜ್ಜೆ ಬಿಟ್ಟು ನೀನು ಅವನ ಕರೆವುದೆ? ಕಿಚ್ಚು ಹಚ್ಚಬೇಡ ನನ್ನ ಹೃದಯಕೆ, ಉಪ್ಪ ಸುರಿಯಬೇಡ ಉರಿವ ಗಾಯಕೆ, ಒಂದೆ ಸಮನೆ ಯಾಕೆ ಹಾಗೆ ಕೂಗುವೆ...

ನಾವಿಂದು ಬಳಸುತ್ತಿರುವ ಒಂದೊಂದು ಅಕ್ಷರದ ಹಿಂದೆ ಹೃದಯಗಳು ಮಿಡಿಯುತಿವೆ ಅಸಂಖ್ಯ ನಾಡಿ ತುಡಿಯುತಿವೆ ಅಸಂಖ್ಯ ನಾದ ಮೊಳಗುತಿವೆ ಅಸಂಖ್ಯ ಹೆಣಗಳ ಸಾಲು ಸಾಲು ಕಾಣುತ್ತಿವೆ ಅಸಂಖ್ಯ ಅಸಂಖ್ಯ ಇವು ಬರೀ ಕರಿಬಣ್ಣದ ಅಂಕು ಡೊಂಕು ಆಕಾರಗಳೆನ್ನುವಿಯಾ? ಸೂರ...

ನೀ ಸಿಗದೆ ಬಾಳೊಂದು ಬಾಳೆ ಕೃಷ್ಣಾ ನಾ ತಾಳಲಾರೆ ಈ ವಿರಹತೃಷ್ಣಾ ಕಮಲವಿಲ್ಲದ ಕೆರೆ ನನ್ನ ಬಾಳು; ಚಂದ್ರ ಇಲ್ಲದ ರಾತ್ರಿ ಬೀಳು ಬೀಳು; ನೀ ಸಿಗದೆ ಉರಿ ಉರಿ ಕಳೆದೆ ಇರುಳ ಮಾತಿಲ್ಲ, ಬಿಗಿದಿದೆ ದುಃಖ ಕೊರಳ ಅನ್ನ ಸೇರದು, ನಿದ್ದೆ ಬಂದುದೆಂದು? ಕುದಿವ...

ನಂಬಿದ್ರೆ ನಂಬಿ ಬಿಟ್ರೆ ಬಿಡ್ರಿ ಹುಂಬಗುತ್ಗಿ ಮಾತಿದಲ್ಲ ಹುಂಬರಾದೆವಲ್ಲೋ ನಾವು ಇಷ್ಟೂ ದಿನ ||ಪ|| ತುಂಬಿ ತುಳುಕೋ ದೇಶದೊಳ್ಗೆ ತುಂಬದಂಗೆ ಹೊಟ್ಟೆ ಬಟ್ಟೆ ದೊಂಬಿ ಮಾಡೋ ಶಕ್ತಿ ಇಲ್ದೆ ಕೊಳಿತಿವೋ ಜನ ||ಅ.ಪ|| ಕಂಡ ಕಂಡ ಗುಂಡು ಕಲ್ಗೆ ದೇವ್ರು ದಿ...

ಎಲ್ಲಿ ಹೋಗಲೆ, ಹೇಗೆ ಕಾಣಲೆ ನನ್ನ ಗಿರಿಧರನ? ನನ್ನ ಬೀಡಿಗೆ ತಾನೆ ಬಂದು ಕಾದು ನಿಂತವನ ಹೇಗೆ ಕಾಣದೆ ಹೋದೆನೇ, ಹೇಗೆ ತರಲವನ? ಈಗ ದಿನವೂ ದಾರಿಬದಿಗೇ ನಿಂತು ಕಾಯುವೆನೇ, ಮತ್ತೆ ಬಾರನೆ ಸ್ವಾಮಿ ಎಂದು ಹಲುವೆ ನೋಯುವೆನೇ ತಾನೆ ಒಪ್ಪಿ ಬಂದ ಗಳಿಗೆ ಹೇ...

ಗುಡಿಯು ಮಠವು ನಿನಗೆ ಯಾಕೆ ನಡುವಿನವರಿಗೆ ಗಡಿಯ ಗೋಡೆ ನಿನಗೆ ಯಾಕೆ ನಡುವಿನವರಿಗೆ ಮೂರ್ತಿ ಮೂರ್ತಿ ರೂಪ ನೂರು ನಿನಗೆ ಯಾತಕೆ ಕೀರ್ತಿ ಹಾಡಿ ತಮ್ಮ ಮೆರೆವ ನಡುವಿನವರಿಗೆ ||ಪ|| ಧರ್ಮ ಶಾಸ್ರ ಗ್ರಂಥ ಸೂತ್ರ ನಿನಗೆ ಯಾತಕೆ ಕರ್ಮಗೇಡಿ ಕೆಲಸಗೇಡಿ ನಡು...

ತೊರೆದು ಹೋಗದಿರೊ ಜೋಗಿ ಅಡಿಗೆರಗಿದ ಈ ದೀನಳ ಮರೆತು ಸಾಗುವ ಏಕೆ ವಿರಾಗಿ? ಪ್ರೇಮ ಹೋಮದ ಪರಿಮಳ ಪಥದಲಿ ಸಲಿಸು ದೀಕ್ಷಯೆನಗೆ; ನಿನ್ನ ವಿರಹದಲೆ ಉರಿದು ಹೋಗಲೂ ಸಿದ್ಧಳಿರುವ ನನಗೆ. ಹೂಡುವೆ ಗಂಧದ ಚಿತೆಯ ನಡುವ ನಿಲುವ ನಾನೇ; ಉರಿ ಸೋಂಕಿಸು ಪ್ರಭುವೇ ...

ಇಹದ ಸುಖವನು ಬಯಸಿ, ಆತ್ಮಯೋಗದ ಬಲವು ತನ್ನದೆಂಬುದ ನೆಚ್ಚಿ, ಮುಂಗುರಿಯ ದೃಷ್ಠಿಯನು ನಂಬಿಕೆಯ ನೇತೃದಲಿ ನೋಡುತಲು, ಜೀವನದ ಧ್ಯೇಯವನು ದಿಗ್ಭ್ರಾಂತ ತರಂಗದೊಳಾಡಿಸುತ, ಕೋಟಿಮಾನವರಲ್ಲಿ ತನ್ನ ಪ್ರತಿಭೆಯ ಸಾಕ್ಷ್ಯ ಸಾರುತಲಿ ಪಾಡುತಲಿ, ಮಾನವನು ತಾನ್ಪ...

ಅಮ್ಮನನು ಅಪ್ಪಿರುವ ಎಳೆಯ ಕಂದನ ತೆರದಿ ಮೈಸೂರ ಕಂಕುಳಲಿ ಕೊಡಗ ನಾಡು ಗಿರಿಶಿಖರ ಮಲೆಮೌನ, ಕಾಡುಕಳುಪುವ ಕಂಪು ತೊರೆಯನೀರಿನ ಗೀತ ಸೊಗದ ಬೀಡು! ಕಾವೇರಿ ಬರುತಿಹಳು ಕೊಡಗಿನಲಿ ಜನಿಸುತ್ತ ಅಂಕು ಡೊಂಕಿನ ಕೊಂಕು ಬಿಂಕದಿಂದ, ಸಂದೇಶ ತರುತಿಹಳು ಕೊಡಗ ನಾ...

ಈ ಧ್ವನಿಯೆ ಬೇರೆ ಈ ನೋಟ ಚಂದ್ರನ ತೋಟ ಇದರ ಕಣಿ ಬೇರೆ ಇದು ತಾನೊಂದೆ ಸಾರುತಿದೆ ಯುದ್ಧ ಕೂಡದೆಂದು ಅತ್ತ ಅಸ್ತ್ರದ ನೋಟ ಅರ್ಧ ಭೂಮಿಗೆ ಸದಾ ಸರಿಯೆಂದು ತೋರುತಿದೆ ಕೊಲೆಮನೆ ಕಡುಗತ್ತಿ ಕುರಿಮರಿಯ ಕುಣಿದಾಟ ಬೇಕು ಮಾನವನ ದಾನವತೆಗೀ ರಾತ್ರಿಯೂಟ &nbs...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...