Home / ಕವನ / ಕವಿತೆ

ಕವಿತೆ

ನಿನ್ನೆ ಮುಸ್ಸಂಜೆಯಿಂದ ಮುಂಜಾವಿನವರೆಗೂ ಆಕಾಶದಲ್ಲಿ ರಾರಾಜಿಸಿದ ಚಂದ್ರ ಇಂದು ನಿಧಾನಕ್ಕೆ ಮೈ ಮುರಿದು ಎದ್ದು ಬರುತ್ತಿದ್ದಾನೆ ನೋಡಿ ಅವನು ಹಾಗೇ;  ಒಂದೊಂದು ಮಿಥಿಗೊಂದೊಂದು ಮೋಡು, ಕ್ಷಣಕ್ಷಣಕ್ಕೊಂದು ಮೋಡಿ, ಇಂದು ಇವನಿಗೆ ಏನಾದರೂ ಆಗಿರಬಹುದು ...

ನಾನಿನ್ನ ಕರೆವೆ ನೀ ಬರದೆ ಇರುವೆ | ಏಕೆ ನೀ ಬಾರದಿರುವೆ ನಿನಗಾಗಿ ತಪಿಸಿ ಬಿಸಿಲಲ್ಲಿ ಜಪಿಸಿ | ಸುಖವನ್ನು ಸಾರದಿರುವೆ ಒಳಗೆಲ್ಲ ಬೆಂಕಿ ಮೇಲೆಲ್ಲ ಬೆಂಕಿ | ಉರಿ ಉರಿಯ ಬೆಂಕಿಯಾದೆ ಆರಿಸುವ ನೀರೆ ನೀನೇಕೆ ಬಾರೆ | ಬಹು ಸಮಯ ಕಾದೆ ಕಾದೆ ಮೋಡಗಳ ಕನಸ...

ಬಾರಿನಲ್ಲಿ ಅರ್ಧತುಂಬಿದ ಗ್ಲಾಸಿನ ಮೂಲಕ ಹಾದುಬರುವ ವಿದ್ಯುದ್ದೀಪದ ಅಪೂರ್ವ ಹೊಂಬಣ್ಣದ ಬಗ್ಗೆ ಹೇಳುತ್ತಿಲ್ಲ ನಾನು.  ಅಥವ ಮಾಗಿಯ ಹಣ್ಣಾದ ಭತ್ತದ ತೆನೆಗಳ ಮೇಲೆ ಬೀಳುವ ಮುಸ್ಸಂಜೆಯ ಬಗ್ಗೆಯೂ ಅಲ್ಲ.  ನಾನು ಸುವ್ಯವಸ್ಥಿತವಾದ ಹಳದಿ ಬಣ್ಣದ ಬಗ್ಗೆ ...

ಸೃಷ್ಟಿಯಲಿ ಚೆಲುವು ದೃಷ್ಟಿಯಲಿ ಚೆಲುವು ಕಳೆಯಲ್ಲಿ ಚೆಲುವು ಬೆಳೆಯಲ್ಲಿ ಚೆಲುವು ಮರಮರವು ಚಿಗುರು ನಗುತಿರುವ ಚೆಲುವು ಮೈತುಂಬ ಸೀರೆಯಂತೆ ಬಿಳಿಹಳದಿ ಕೆಂಪು ತರತರದ ಕಂಪು ಮುಖವರಳಿ ನಗುವಳಂತೆ ಆಕಾಶದಲ್ಲಿ ನೀರನ್ನು ಹೊತ್ತು ಮೋಡಗಳು ಸಾಗುತಿಹವು ತಲ...

೧ ಪುಷ್ಟವಾದ ಒಂದು ಬೆಕ್ಕು ನನ್ನ ಮನೆಯ ಡ್ರಾಯಿಂಗ್ ರೂಮಿನಲ್ಲಿ ಬಂದು ನನ್ನನ್ನು ಕಂಡು ಹಠಾತ್ತನೆ ನಿಂತಿತು.  ಅಲ್ಲಿ ಅದು ನನ್ನನ್ನು ನಿರೀಕ್ಷಿಸಿರಲಾರದು. ಇಲ್ಲ, ಸೋಮವಾರ ಎಲ್ಲರೂ ಅವರವರ ಆಫೀಸಿಗೆ ಹೋಗಿರುವ ಅಪರಾಹ್ನವಂತೂ ಖಂಡಿತ ಇಲ್ಲ. ತುಸು ಅ...

ಹಾಡೆಲೆ ಹೃದಯದ ಹಕ್ಕಿಯೆ ಹಾಡು ನವ ಜೀವನ ಸುಮಧುರ ಗಾನ ಕೊರಡು ಕೊನರುತಿದೆ ಚೆಲುವು ಹರಡುತಿದೆ ಉದಿಸಲಿ ಚೇತನ ತಂತಾನ ರಾತ್ರಿ ಸರಿಯುತಿದೆ ಉಷೆಯು ಬರುತಲಿದೆ ಓಹೋ ಎಂಥಹ ಸುರ ಚೆಲುವು ಇದನ್ನು ಕಾಣಲು ಉಂಡದ್ದಾಯಿತು ಓ ಹಾ ಇರುಳಿನ ಕಡು ನೋವು ಜಗವೆ ಸು...

ದೂರದ ಮೂಸಿಹೊಳೆಯ ಸಂಕದ ಮೇಲೆ ಸಿಕಂದರಾಬಾದಿನಿಂದ ಫಲಕ್‌ನುಮಾಗೆ ನಿಧಾನವಾಗಿ ಗಮಿಸುತ್ತಿರುವ ಲೋಕಲ್‌ಗಾಡಿಯನ್ನು ನೋಡಿದಾಗ ನನಗೆ ಕೆಲವೊಮ್ಮೆ ನೆನಪಾಗುವುದು- ಮಳೆಗಾಲದಲ್ಲಿ ನಮ್ಮೂರ ಅಡಿಕೆ ತೋಟಗಳಲ್ಲಿ ಕಾಣಿಸುವ ಸಾವಿರಕಾಲಿನ ಬಂಡಿಚೋರಟೆಗಳು: ತಿರು...

ನಾನು ಪ್ರಕೃತಿ ಶಿವ ಸತ್ಕೃತಿ ನನ್ನ ಗುಣವ ಹೇಳುವೆ ನೀನು ವಿಕೃತಿಯಾಗಿ ಬಂದೆ ದುಃಖಗಳನು ತಾಳುವೆ ಭೂಮಿಯೊಳಗೆ ನಾನು ಆಳ ಬೇರು ಬಿಟ್ಟು ನಿಂತಿಹೆ ಗಗನದಲ್ಲಿ ತಲೆಯನೆತ್ತಿ ಚೆಲುವನೆಲ್ಲ ಹೊತ್ತಿಹೆ ಮಣ್ಣಿನೊಳಗೆ ಒಡಬೆರೆಯುತ ಭದ್ರವಾಗಿ ಬೆಳೆದಿಹೆ ಸಣ್ಣ...

ಟ್ಯಾಂಕ್‌ಬಂಡಿನ ಕಳ್ಳರನ್ನು ಸೃಷ್ಟಿಸಿ ಕದಿಯಲು ಬಿಟ್ಟೆ ನಾನು, ಅವರಿಗೆ ಪರ್ಸ್ ಉಡಾಯಿಸುವ ಕೈಚಳಕವನ್ನು ಕಲಿಸಿದೆ. ತುಂಬಾ ಬುದ್ದಿವಂತರು.  ಹೇಗಾದರೂ ತಪ್ಪಿಸಿಕೊಳ್ಳುತ್ತಿದ್ದರು. ಅವರಲ್ಲಿ ಒಬ್ಬನಿಗೆ ಆಮೆಗಳೆಂದರೆ ಪ್ರೀತಿ.  ಇನ್ನೊಬ್ಬ ಬಹಳ ಹಿಂ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....