Home / ಕವನ / ಕವಿತೆ

ಕವಿತೆ

ಇಂದೇನು ಬಾನಿನಲಿ ಅತುಲಲಾವಣ್ಯ, ಮಂದಮಾರುತನ ಮಿಳಿತದಾಗಮನ; ಉದಿಸುತಿದೆ ದುರ್ಗದಲಿ ಹೊಸಹುರುಪು ಚೇತನ, ಮೊಳಗುತಿದೆ ಕಹಳೆಯು ಕೂಡೀವರ್ತನ. ಭವ್ಯ ದೇವಿಯ ಭವನ ಮುತ್ತಿಹರು ಅವರು, ನೂರಾರು ಜೀವಿಗಳು ಮಾಯವತಿ ಪೀಠದೆದರು; ಹಿಡಿಯಲಿ ಮಿನುಗುತಿದೆ ಬಂಟರಾ ...

(೧) ಮನುಕುಲದ ಕೆನ್ನೀರ ಮಡುವಿಗಿಹ ನಡುಸುಳಿಯ ನಟ್ಟನಡುವೆಯೆ ನಿಂತು ಬರೆಯುತಿಹೆನೀ ಮಾತ. ಎದೆ ಬೆಂದು ಬೇಯಿಸಲು,-ಓದುಗನೆ ಮುನಿಯದಿರು ಸಟಿಯಲ್ಲ, ಕನಸಲ್ಲ ನರನ ರಕ್ಕಸತನವು. ಇಲ್ಲಿಯೇ ಕೋಟೆಕೊತ್ತಳವ ಕಟ್ಟುವ ಮುನ್ನ- ವಿತ್ತೊಂದು ಬೆಟ್ಟವಿದು. ವನಚರರ...

ಕವಿದ ಕತ್ತಲೆ ವಿಶ್ವ ಕಂಡುಽ ರವಿಯು ಮೂಡಲಿ ಎಂದು ಮನವೋ ತಿವಿದು ಅಳುತಿದೆ ಮತ್ತೆ ಅಳುತಿದೆ ಬಲಾ ಕಣ್ಣೀರೇನೋ ||೧|| ಓ ರವಿ ಬೆಳಗುವೆ ಎಂದು ಅಂದದಿ ನರರು ನೋಯುತ ನಿನ್ನ ಜಪಿಸುತ ವೀರ ದಿನಕರ ಮರೆತ ಎನ್ನುತ ಮತ್ತೆ ಬರುವರು ಜನ ||೨|| ಇಪರಿ ದುಃಖವ ನ...

ಸುತ್ತೆಲ್ಲ ನೀರೆ ನೀರಾದ ಕಡಲಿನ ಹರವು ಎತ್ತಲೂ ಏರೇರಿ ಬರುವ ತೆರೆ ಸಾವಿರವು ಇದು ಏನು ಯಾಕೆಂದು ತಿಳಿವ ಬಗೆನಾವೆಗಳು ಮದದಿ ಸುಳಿದಾಗಿಹವು ಬರಿ ಮೂಡುಮುಳುಗುಗಳು. ಎಂದಿಗೂ ಇದ್ದಂತೆ ಇಹುದು ಈ ಮುನ್ನೀರು ಇಂದಿಗೂ ಇದರಾಳವರಿತವರು ಅದು ಯಾರು ? ಅರಿಯ...

ಮರುಳು ಮಾಡಾಕ ಹೋಗಿ ಮರುಳಸಿದ್ಧನ ನಾರಿ ಮರುಳಾಽಗ್ಯಾಳ ಜಂಗಮಯ್ಯಗ ಕಿನ್ನರಿ ಆಗ್ಯಾಳ ಕೈಯ್ಯಾಗ ನುಡಿದಾಳ ಬಂದ್ಹಾಂಗ ಮೈಯ್ಯಾಗ ॥ಪಲ್ಲ॥ ಆಡುತಾಡುತ ಬಂದು ಸಿಂಗಾರಸೊಳ್ಳೀ ಹಾಂಗ ಹಾಡಿಲೆ ಕಿವಿಗಲ್ಲ ಕಡಿದ್ಯೇನ ಹಾದಿ ತಪ್ಪಿಸಿಕೊಂಡ ಗುಂಗಿಯ ಹುಳಧಾಂಗ ಗು...

ಬರುವುದೊಮ್ಮೆ ಬರುವುದು ಬಾರದೆಂದು ಬಾರದು ಬರುವ ಬಿಡುವ ಭೂತಕಾಗಿ ಇಂದು ಭಯವದೇಕದು? ಗೈವ ಗೈಮೆ ಸಾಗಲಿ ಮೈ ಮನವ ತುಂಬಲಿ ಸಾವು ಬದುಕು ನೋವು ನೂರು ಹಾರಿ ಬರಲು ನಗುತಿರು! ಕರಿದು ಮೋಡ ಹೊಳೆವುದು ಬರಿದು ಕೈ ತೀವುದು ಸಿರಿಯು ಕಣ್ಣ ಮುಚ್ಚಿ ತಾನೆ ಎಲ್...

ಮೈ ಸೋತು ಬಳಲಿದೆ; ನಿಸರ್ಗಸಂಚಾರಿ ಮನ ಒಡಲಿಗಿಂತಲು ಜಡವು; ಹೆಪ್ಪುಗಟ್ಟಿದ ಕೊಳವು! ನಿದ್ದೆ ಎಚ್ಚರಗಳ ವಿಚಿತ್ರ ಮೇಳದ ಸೆಳವು! ಮುಚ್ಚುಗಂಗಳ ಬಿಚ್ಚಲೂ ಕಷ್ಟ; ಎದೆಯ ಬನ- ದೊಳದಾವುದೋ ಕಿಚ್ಚು- ಹೊಗೆ ಕಿಚ್ಚು! ಈ ದೇಹ ಬೆವರಿ ಗಾಳಿಯ ತೆಳುವು ಪೊರೆ ಚ...

ಬಾರೆ ಗೆಳತಿ ಬಾರೆ ಕೃಷ್ಣ ಬಂದ ನೀರೆ ನಿನ್ನ ಮುಖವ ತೋರೆ ಮನದ ಮಬ್ಬು ಜಾರೆ ದಣಿದು ಬಂದ ರಂಗ ಏಕೆ ಮನಕೆ ಭಂಗ ಬಾರೆ ಬಾರೆ ಹೀಂಗ ತಳುವಬೇಡ ಹಾಂಗ ಕೊಳಲ ನುಡಿಸಲಾರ ಜಾಣೆ ನೀನೆ ಬಾರ ಅವನ ಹೃದಯ ಭಾರ ಇಳಿಸೆ ನೀನೆ ಬಾರ ಕಮಲ ಕಣ್ಣು ಬಾಡಿ ನಿನ್ನನೆಲ್ಲು ...

(ಗೋ. ಕೃ. ಅವರಿಗೆ) ಎದುರು ಬಾನ ತೀರದಲ್ಲಿ ರಾಶಿ ರಾಶಿ ಹೊನ್ನ ಚೆಲ್ಲಿ ಸರಿಯುತಿಹಳು ಸಂಜೆ, ಕೆಳೆಯ, ಸ್ವರ‍್ಣಲುಬ್ಧವಾಗಿ, ಎಲೆಯ ಕೈಗಳಿಂದ ಬೊಗಸೆಯಾಯ್ದು ಹಳುವಿಹುದಿಕೊ ಹುಯಿಲಗಯ್ದು. ಇದನು ಕಂಡು ಕೊಂಕು ಚಂದ್ರ ನಗುತಿಹನದೊ ಮುಗಿಲಿನಿಂದ, ಕೊನೆ ಆ...

ನನ್ನನರಸುತೊಬ್ಬ ಜಾಣಿಯೆದುರು ಬಂದಳು ತನ್ನದೊಂದು ಪ್ರೇಮಸಂಽದೇಶ ತಂದಳು! ದೊರೆಯ ದಯೆಯ ಕೈಯು ನನ್ನ ಕೈಯ ಬೆರಳಲಿ ಬೆರೆತ ಗುರುತ ಕಂಡು ಹೃದಯಕುಸುಮವರಳಲಿ! ಈ ಕುಸುಮವಿದರ್ಪಿತವಿದೆ ಯಾವ ದೇವಿಗೆ ಅಕೆಯೊಲುಮೆ ನನ್ನ ಬಾಳ ದಾರಿ-ದೀವಿಗೆ! *****...

1...1213141516...635

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...