ರವಿ

ಕವಿದ ಕತ್ತಲೆ ವಿಶ್ವ ಕಂಡುಽ
ರವಿಯು ಮೂಡಲಿ ಎಂದು ಮನವೋ
ತಿವಿದು ಅಳುತಿದೆ ಮತ್ತೆ ಅಳುತಿದೆ ಬಲಾ ಕಣ್ಣೀರೇನೋ ||೧||

ಓ ರವಿ ಬೆಳಗುವೆ ಎಂದು ಅಂದದಿ
ನರರು ನೋಯುತ ನಿನ್ನ ಜಪಿಸುತ
ವೀರ ದಿನಕರ ಮರೆತ ಎನ್ನುತ ಮತ್ತೆ
ಬರುವರು ಜನ ||೨||

ಇಪರಿ ದುಃಖವ ನೋಡಿ ದಿನಕರ
ತಪ್ಪು ಹೊರದಲೆ ಮತ್ತೆ ಮೂಡಿದ
ಕಪ್ಪು ಮೋಡದ ತಿಳಿಯ ಬಾನಲಿ ಸುತ್ತು ಬೆಳಗಿದನೋ ||೩||

ರವಿಯ ಬೆಳಕಿದು ದಿನದ ಆರುತಿ
ಕವಿದ ಕತ್ತಲೆ ತಿಳಿಯ ಮಾಡುವ
ವಿಧಿಯ ಮೂರುತಿ ಇವನು ಬಾನ್ ಮರುತಿ
ತಿಳಿಯದೇನು ||೪||

ವಿಶ್ವ ತಂದೆಯ ಮಗನು ಇವನೋ
ವಿಶ್ವ ಮಲಗಿಸಿ ತೆರೆವನವನೋ
ಅಶ್ವ ಹೊತ್ತವ ರವಿಯು ಇವನೋ ಮೂಜಗ ಒಡೆಯನಿವ ||೫||

ರವಿಯು ಬೆಳಗಿದ ಬೆಳಕೆ ಬೆಳಕೋ
ಅವನ ಛಾಯೆಯು ಮುಳುಗಿ ತೇಲಿತು
ಕಾವ ಹುಟ್ಟಿದ ನೆಲದಿ ಹಾ ಹಾ ಏನಿದು
ವಿಚಿತ್ರವೋ ||೬||

ಅಂತೆ ದೆವನ ಸೃಷ್ಟಿ ರಮ್ಯವು
ಇಂತ ಸೃಷ್ಟಿಗೆ ಹುಚ್ಚು ಮಾನವ
ಸಂತೆ ಎಬ್ಬಿಸಿ ತನ್ನ ಹೆಮ್ಮೆಗೇ ಮಾಡಿ ಕೆಡವಽನೋ ||೭||

ಮನುಜ ಪ್ರಯತ್ನ ಎಷ್ಟು ದಿನವೋ
ಮಿನುಗು ಹೊಳೆವಾ ತಾರೆಗಳಂತೆ
ಮನಸು ಹುಮ್ಮಸ ಇರುವ ತನಕವೇ ಆಟ
ನಂತರ ಏನು ||೮||

ರವಿಯ ತೇಜವ ಮುಚ್ಚು ನೋಡುವ
ಕಾವ ವಿಜ್ಞಾನಿ ಬರುವ ನೋಡುವ
ದೇವ ಕಳುಹಿದ ರವಿ ಬೆಳಗುವ ವಿಶ್ವ ವಿಜ್ಞಾನಿ ಅಲ್ಲ ||೯||
*****

Tagged:

Leave a Reply

Your email address will not be published. Required fields are marked *

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...