Home / ಕವನ / ಕವಿತೆ

ಕವಿತೆ

ದೂರದೊಂದು ಹಾಡಿನಿಂದ ಮೂಡಿಬಂದ ಕನ್ನಡ; ನನ್ನ ಮುದ್ದು ಕನ್ನಡ ಕಾಣದೊಂದು ಶಕ್ತಿಯಿಂದ ಉಸಿರಿಗಿಳಿದ ಕನ್ನಡ; ನನ್ನ ಪ್ರಾಣ ಕನ್ನಡ ನೀಲಿ ಕಡಲ ಅಲೆಗಳಿಗೆ ದನಿಯ ಕೊಟ್ಟ ಕನ್ನಡ; ಸಪ್ತಸ್ವರ ಕನ್ನಡ ತೇಲಾಡುವ ಮೋಡಗಳಿಗೆ ಮುತ್ತನಿಟ್ಟ ಕನ್ನಡ; ಸಹ್ಯಾದ್ರಿ...

ವರುಷ ವರುಷಕ್ಕೊಮ್ಮೆ ಹುಟ್ಟು ಹಾಕುವರು ನಿನ್ನ ಮೆಟ್ಟಿ ನಿಲ್ಲುವರು ಕನ್ನಡ ಕನ್ನಡವೆಂದು ಎಲೈ ತಾಯೆ ಇಂಥ ಜೀವಿಗಳಿಗೆ ನೀಡು ಚೈತನ್ಯ ನಿನ್ನ ಗುಣಗಾನ ಮಾಡುವರು ಇವರೇ ಊರ ಮನೆಯವರು ಇವರ ಭಂಡತನದ ಬದುಕಿಗೆ ನೀಡು ಚೈತನ್ಯ ಅಂದು ನಿನ್ನ ರಕ್ಷಣೆಗಾಗಿ ಪ್...

ಭೂಗರ್‍ಭಶಾಸ್ತ್ರಜ್ಞನೆತ್ತಿ ಹಿಡಿದನು ಕೊಳದ ತಳಕಿರುವ ಶಿಲೆಯೊಂದ ಬಂಡೆಗಲ್ಲದು ಸವೆದು ಹರಳಾದುದೆನ್ನುವನು, ಮತ್ತದರ ಮೇಲುಳಿದ ಮರದ ಕಿರಿಯಾಕೃತಿಯದಿಂತು ಮುದಿಮರ ತವಿದು ಕೊಳದ ನೀರಿನ ಕೆಳಗೆ ಬಿದ್ದಿರಲರೆಯ ಕೂಡಿ ಕಾಲೋದಧಿಯ ಹೊನಲ ತೆರೆತೆರೆಗೆ ತಲೆಬ...

ನಾನೆ ಗೋಪಿಕೆ ಬಾರೊ ಗೋಪನೆ ನೋಡು ಚಂದನ ಜಾರಿವೆ ಗುಡ್ಡ ಬೆಟ್ಟದ ಗಾನ ಹಕ್ಕಿಯ ಕಂಠ ಕೊರಗಿ ಸೊರಗಿದೆ ಮಳೆಯ ನೀರಿಗೆ ಹಸಿರು ಹಸಿದಿದೆ ಹನಿಯ ರೂಪದಿ ಚುಂಬಿಸು ಮಂದ ಗಾಳಿಯು ಸೋತು ನಿಂದಿದೆ ಗಂಧ ರೂಪದಿ ನಂಬಿಸು ನೋಡು ಕಡಲಿನ ಕನ್ಯೆ ಬಂದಳು ಗೆಜ್ಜೆ ಜಾ...

ಬೇವಾರ್‍ಸಿ! ನನ್ ಪುಟ್ನಂಜೀನ ರೂಪಾನ್ ಆಡ್ತಿನಿ ಬಾಪ್ಪ! ನಂಗ್ ಆಗಾಗ್ಗೆ ಆಡೀಸ್ತೈತೆ ನನ್ ಪುಟ್ನಂಜೀ ರೂಪ! ೧ ಆಲ್ನಲ್ ಕಮಲದ್ ಊ ತೇಲ್ಬುಟ್ಟಿ ಮೇಲ್ ಒಂದ್ ತೆಳ್ನೆ ಲೇಪ ಚಿನ್ನದ್ ನೀರ್‍ನಲ್ ಕೊಟ್ಟಂಗೈತೆ ನನ್ ಪುಟ್ನಂಜೀ ರೂಪ! ೨ ಅಮಾಸೇಲಿ ಅತ್ತೀಸ್...

ನನ್ನೆದೆಯು-ನಿನ್ನೆದೆಯು; ನಡುವೆ ಕ್ಷಾರೋದಧಿಯು! ಕಾಡಿನಲಿ ಅತ್ತಂತೆ ಎಲ್ಲ ಹಾಡು! ತಂತಮ್ಮ ಕಂಬನಿಯಲೆಲ್ಲರೂ ಮುಳುಗಿದರೆ ಕೆಳೆಯ ಬೇಡುವ ಎದೆಗೆ ಯಾರು ಜೋಡು? ಅರಿವಿನಾಳದೊಳಿರುವ ಅಣಿಮುತ್ತುಗಳನೆತ್ತಿ ಪವಣಿಸುವ ಜಾಣು ಬಗೆಗೆಂದು ಬಹದೊ? ಸೂಜಿಗೂ ಹದನ...

ತನ್ನ ತಾನು ಗೆದ್ದವನೇ ನಮ್ಮ ಚೆಲುವ ಗೆದ್ದುದೆಲ್ಲವನೊದ್ದವನೇ ನಮ್ಮ ಚೆಲುವ ಬೆಟ್ಟದೆತ್ತರ ಬೆಳೆದವನೇ ನಮ್ಮ ಚೆಲುವ ದಿಗಂಬರವನುಟ್ಟವನೇ ನಮ್ಮ ಚೆಲುವ ಸೂರ್‍ಯನಿಗೆ ಪ್ರತಿಸೂರ್‍ಯನೇ ನಮ್ಮ ಚೆಲುವ ಚಂದ್ರನಿಗೆ ಪ್ರತಿಚಂದ್ರನೇ ನಮ್ಮ ಚೆಲುವ ಕಲ್ಲರಳಿ ಹ...

ಬುವಿಯ ಚಾಪೆಯ ತೆರದಿ ಸುತ್ತಿ ಹೊತ್ತೊಯ್ವಂತೆ ಕತ್ತಲೆಹಿರಣ್ಯಾಕ್ಷ ಮುತ್ತಿಬಹ ನಕ್ಷತ್ರ- ಮೊತ್ತಮಂ ಧಿಕ್ಕರಿಸಿ ಬರುತಿಹನು ಗೆಲವಾಗಿ ದಿವಕಶಾಂತಿಯ ತಂದು. ಹೊಸರಾಜ್ಯವಾಯ್ತಿಂದು ಇದರ ಸತ್ಯವೆ ಬೇರೆ, ಶಾಸನವೆ ಬೇರೆ. ರವಿ ತೋರಿದಾ ಜಗದ ಮಾಯೆ ತೀರಿತು....

ಗುಡಿಯಾ ಆಟದ ಗೊಂಬೆಯಲ್ಲ ರಕ್ತ ಮಾಂಸ ತುಂಬಿದ ಜೀವಂತ ಗೊಂಬೆ ದುಃಖಕ್ಕೊಂದೇ ಹಕ್ಕು ಪಡೆದವಳು ಗುಡಿಯಾ ನೋವಿನ ಕಡಲು ಒಡಲಲಿಟ್ಟುಕೊಂಡು ನಾಪತ್ತೆಯಾದ ಪತಿ ಮರಳಿ ಬರುವ ಹಾದಿ ಕಾಯ್ದಳು ದೀರ್‍ಘ ಕಾಲದ ತನಕ ಕನಸು ಹುಸಿಹೋಯ್ತು ರೆಪ್ಪೆ ಭಾರವಾಯ್ತು. ಹನಿ...

ಸುಮ್ಮನೇಕೆನ್ನನೆಲೆ ವಿಧಿಯೆ ಕಾಡಿಸುವೆ?- ಬೇಡಿದುದ ಕೊಡೆ, ಬೇಡದುದನಾಯ್ದು ಕೊಡುವೆ! ಆರದುದನಾಪೆನೆಂದೇಕೆ ತಡಬಡುವೆ? ಕೇಳುವೊಡನೀವೆನೆಂದೇಕ ಬೇಡಿಸುವೆ? ೪ ಆದೊಡಂ ಕೇಳೆನಗೆ ನಿನ್ನಿಂದು ಬೇಡ- ಅವಳನೆನ್ನಿಂದೊಯಿದ ಇಂದೆನಗೆ ಬೇಕೆ? ಇನ್ನವಳ ಕಾಣಿಸದ ನ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...