ಶಿವಲೋಕದಿಂದ ಒಬ್ಬ ಸಾಧು ಬಂದಾನು ಶಿವನಾಮವನ್ನು ಕೇಳಿ ಅಲ್ಲಿ ನಿಂತಾನು ||ಪ|| ಮೈತುಂಬ ಬೂದಿಯನ್ನು ಧರಿಸಿಕೊಂಡಾನು ಕೊರಳೊಳು ರುದ್ರಾಕ್ಷಿ ಕಟ್ಟಿಕೊಂಡಾನು ||೧|| ಮೈಯಲ್ಲಿ ಕಪನಿಯ ತೊಟ್ಟುಕೊಂಡಾನು ಕೈಯಲ್ಲಿ ತ್ರಿಶೂಲ ಹಿಡಿದುಕೊಂಡಾನು ||೨|| ಊರ ...

ಬಾ ನೋಡುನು ಭಾಮಿನಿ ಈ ನಗರದಿ ಆ ಮಹಾಮಹಿಮನು ಬಂದಿಹನಮ್ಮಾ ಮೀನಾಕ್ಷಿಯನುಭವಮಂಟಪ ಮಧ್ಯದಿ ತಾನೇತಾನಾಗಿ ಕುಳಿತಿಹನಮ್ಮಾ || ೧ || ಎಡ್ಡಿಸುತಲಿ ಮನಿ ಮನಿ ತಿರುಗುತ ಘನ ಕಡ್ಡಿ ಕಸರು ಕಳೆದಿಹನಮ್ಮಾ ದುಡ್ಡು ಕಾಸಿಗೆ ಕೈಯೊಡ್ಡದೆ ಕಲಿಯೊಳು ಗುಡ್ಡನೇರಿ ...

ಸಾಧುರಿಗೊಂದಿಸುವೇ ನಿತ್ಯದಿ ದಿವ್ಯ ಸಾಧುರಿಗೊಂದಿಸುವೇ                                      ||ಪ|| ಬೇಧವನಳಿದಾತ್ಮ ಭೋಧವ ತಿಳಿಯುತಾ ಕ್ರೋಧಾದಿಗಳ ಸುಟ್ಟು ಮೋದದಿಂದಿರುವಂಥ                  ||೧|| ಕಾಲಕರ್ಮವ ತುಳಿದು ಕಾಲಿಲೆ ಒದ್ದು ...

ಸಾಧು ನೋಡಲೋ ಇವನು ಸಾಧು ನೋಡಲೋ ಭೋಧಾನಂದದಿ ಮೆರೆವ ಮಹಾತ್ಮರು ||ಪ|| ಎಂಟು ಗುಣಗಳ ಅಳಿದು ಕುಂಟನಾದನೋ ಸೊಂಟರಗಾಳಿಗೆ ಶಿಲ್ಕಿದೀಲೋಕದಿ ಕಂಠದಲಿ ಕಪ್ಪವನು ಧರಿಸಿದವ ||೧|| ಆಸೆ ಅಳಿದನು ಕರ್ಮ ಪಾಶ ಕಳೆದನು ವಸುಮತಿಗೆ ನೆಲಗುಡ್ಡದಿ ನೆಲಸಿಹ ಭಾಸುರ ...

ಓಂ ದೇವದೇವರ ದೇವರ ಮಗನ ದೇವಲೋಕದ ಬುಡುಬುಡಿಕ್ಯಾ ನಾ ಭಾವಶುದ್ಧವಾಗಿ ಕೇಳಿರಿ ಸುಮ್ಮನ ದೇವಲೋಕದ ಸತ್ವಾಧೀನ ||೧|| ಪಡುವಣ ದಿಕ್ಕಿನ ಬುಡುಬುಡಿಕ್ಯಾ ನಾ ಮೂಡಣ ದೇಶವ ನೋಡುತ ಬಂದೆ ಬೇಡಿ ಬೇಡಿದ್ದನು ಹೇಳುವ ಕೇಳೆ ರೂಢಿಯೊಳಗೆ ನಾ ನುಡಿಯುಪವೆ ತಾಯಿ |...

ಸಾಧುವಿಗೊಂದಿಸುವೆ ಸತ್ಯದಿ ||ಪ|| ಬೇಧ ಕ್ರೋಧ ಭೇದಿಸಿ ಮೋದದಿ ಸದ್ಗುರುಪದಕ್ಹೊಂದಿದಾ ||೧|| ಆಲಿಗಳ ಬಲದಲ್ಲಿ ಬ್ರಹ್ಮದ ಸಾಲು ಜ್ಯೋತಿಯ ಮಾಲಿನೊಳಗಿರುವ ||೨|| ದೋಷಭವದುರಿತನಾಶ ಶಿಶುನಾಳಧೀಶನೊಳು ಮಹೇಶನೊಲಿಸಿದಂಥಾ ||೩|| ****...

ಸಾಧುಗಳಿಗೆ ಶಿವನ ಚಿಂತೆಯು ಅನಂತವು ||ಪ|| ಬೇಧಭಾವವಳಿದು ಮಾಯಾ ಭ್ರಾಂತಿ ಕಳೆದು ಭವನ ತುಳಿದು ಶಾಂತರೂಪದಿಂದ ಮೆರೆಯುವ ||ಅ.ಪ.|| ದುಡ್ಡು ಹಣವು ಹೆಡ್ಡತನವನು ಜಡದೊತ್ತೆ ಗುಡ್ಡನೇರಿ ತೋರ್ಪ ಫನವನು ಅಡ್ಡಬರುವ ಅಖಿಲ ವಿಷಯ ಜಡ್ಡುಗಳಿದು ಜನನ ಮರಣ ಕ...

ಅಲ್ಲೀಕೇರಿಗೆ ಹೋಗುನು ಬರ್ತೀರೇನ್ರೇ ನೀವು ಒಲ್ಲದಿದ್ದರೆ ಇಲ್ಲೆ ಇರತೀರೇನ್ರೇ ||ಪ|| ಕಲ್ಲೌ ಮಲ್ಲೌ ಕೂಡಿಕೊಂಡು ದೀವಳಿಗೆ ಹಬ್ಬದಲ್ಲಿ ಉಲ್ಲಾಸದಿಂದ ಅಲ್ಲಮಪ್ರಭುವಿನ ಮರೆತೀರೇನ್ರೇ ಇಲ್ಲೇ ಇರತೀರೇನ್ರೇ ||ಅ.ಪ.|| ಮಡಿಯನುಟ್ಟು ಮೀಸಲದಡಗಿ ಮಾಡಬೇಕ...

ಗುಜಗುಜಮಾಪೂರ ಆಡೋಣ ಸಜ್ಜನರೆಲ್ಲರು ಕೂಡೋಣ || ಪ|| ಗಜಿಬಿಜಿ ಸಂಸಾರ ದೂಡೋಣ ಸಾ- ಯುಜ್ಯ ಮುಕ್ತಿಯ ಹೊಂದೋಣ ||ಅ.ಪ.|| ಹಸ್ತಿನಿ, ಚಿತ್ತಿನಿ, ಶಂಖಿನಿ, ಪದ್ಮಿನಿ ಉತ್ತಮರೆಲ್ಲರು ಆಡೋಣ ಕುರುಡ ಕುಂಟರೆಲ್ಲ ಹೋಗೋಣ ರಂಟಿ ಕುಂಟಿ ಹೊಡೆಯೋಣ ||೧|| ಕೆಂ...

ಗುಡಿಯ ನೋಡಿರಣ್ಣಾ ದೇಹದ ಗುಡಿಯ ನೋಡಿರಣ್ಣಾ ||ಪ|| ಗುಡಿಯ ನೋಡಿರಿದು ಪೊಡವಿಗೆ ಒಡೆಯನು ಅಡಗಿಕೊಂಡು ಕಡುಬೆಡಗಿನೊಳಿರುತಿಹ ಗುಡಿಯ ನೋಡಿರಣ್ಣಾ ||ಅ.ಪ.|| ಮೂರು ಮೂಲೆಯ ಕಲ್ಲು ಅದರೊಳು ಜಾರುತಿರುವ ಕಲ್ಲು ಧೀರ ನಿರ್ಗುಣನು ಸಾರ ಸಗುಣದಲಿ ತೋರಿ ಅಡಗ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...