ಹುಟ್ಟಗರತಿಯ ಕಾಣಲಿಲ್ಲಾ ಕೊಟ್ಟ್ಯಾದಿಯಲ್ಲಾ ಹುಟ್ಟಗರತಿಯ ಕಾಣಲಿಲ್ಲಾ ||ಪ|| ಹುಟ್ಟಗರತಿಯ ಕಾಣಲಿಲ್ಲಾ ಪಟ್ಟಗುಡುಮ ರಂಡೆ ನೀನು ಪಟ್ಟದಯ್ಯನವರಿಳಿಯ ಬಂದರೆ ಎಟ್ಟಿ ಮಾತುಗಳಾಡುತೀದಿ ||೧|| ಮಾನವಂತರ ಮನೆಯೊಳ್ಹುಟ್ಟಿ ಆದೆಲ್ಲ ಕೊಟ್ಟಿ ಅಪಕೀರ್ತಿ ಅವ...

ಅವರು ಬದುಕಿರುವಷ್ಟು ಕಾಲಕೂ ಮನುಷ್ಯರಾಗಿರಲಿಲ್ಲ ಸಾಯುವ ಮುನ್ನ ಮನೆಯವರ ಕೈಲಿ ಹೆಣನೋಡ ಬರಲರ್ಹರ ಮತ್ತು ವಿಶೇಷ ಅನರ್ಹರ ಯಾದಿ ಕೆಲವರು ದೊಡ್ಡ ಮನುಷ್ಯರು ಸತ್ತ ದಿನವೂ ಮನುಷ್ಯರಾಗಲಿಲ್ಲ. *****...

ಅವ್ವಾ… ಅವ್ವಾ… ಹೇಳು ದೇವದಾಸಿ ಅಂದರೇನು ನಿನಗೇಕೆ… ಅನ್ನುವರು ದೇವರ… ದಾಸಿ ನಿನ್ನ ಹಾಗೆಯೇ… ಇರುವ ನೆರೆಮನೆಯ ಸೀನು… ಶೇಖರನ… ಅವ್ವಂದಿರಿಗೇಕೆ… ಅನ್ನುವುದಿಲ್ಲ… ದೇವದಾಸಿ ಬೇಡವ...

ಎದ್ದು ಹೋಗುತೇನಿ ತಾಳೆಲೋ ಛೀ ಬುದ್ಧಿಗೇಡಿ ಎದ್ದು ಹೋಗುತೇನಿ ತಾಳೆಲೋ ||ಪ|| ಎದ್ದು ಹೋಗುತೇನಿ ತಾಳೆಲೋ ಇದ್ದು ಇಲ್ಲೇ ಭವಕೆ ಬೀಳೊ ಸಧ್ಯ ಸದ್ಗುರು ಶಾಪ ನಿನಗೆ ಸಿದ್ಧಲಿಂಗನ ಪಾದಸಾಕ್ಷಿ ||ಅ.ಪ|| ಹಟದಿ ನಮ್ಮನ್ನ್ಯಾಕ ನೋಡುತಿ ಒಣ ಕಟಗಿಯಂತೆ ಸೆಟೆ...

ಭೂಮಿ ನೀನು ಬಾನು ನಾನು ಭಾಗ್ಯ ನಮ್ಮಯ ಬದುಕಲಿ ಯಾವ ಜನುಮದ ಫಲವು ಬೆಸೆದಿದೆ, ನನ್ನ-ನಿನ್ನ ಒಲವಿನ ದಲಿ ಕಡಲು ನೀನು ನದಿಯು ನಾನು ಲೋಕ ಯಾನದ ಪಥದಲಿ ಆದಿ-ಅಂತ್ಯದಿತಿ ಮಿತಿಯ ಮೀರಿದ ಋತು-ಕ್ರತುವಿನ ಬಲದಲಿ ಮೇಘ ನೀನು ಅನಿಲ ನಾನು ದೂರ ದೂರದ ಬೆಸುಗೆ...

ನಗೆಯು ಬರುತಿದೆ ಜಗದಾಟ ನೋಡಿ ಸುಗುಣನಾಗಿ ಸುಮ್ಮನೆ ಸುಜ್ಞಾನದಿ ಅಗಣಿತ ಮಹಿಮೆಯ ಆಡಿದ ಪುರುಷನಿಗೆ ||೧|| ಕಲ್ಲು ಬಾಯೊಳಗೆ ಹುಟ್ಟಿದ ನಗೆಯು ಕಳ್ಳನಾಗಿ ಕದ್ದಡಗಿದ ಮನೆಯು ತಳ್ಳಿಕೋರ ತಗಲ್ಹಚ್ಚಿದ ಕಂಡು ||೨|| ಪ್ರಿಯತನುತ್ರಯರು ಹೊರ‌ಒಳಗೆಲ್ಲಾ ಶ್...

ಒಳ್ಳೇದಲ್ಲೋ ಇದು ಭೂಕಲಿ ಬಾರೋ ಬಾ ಮಳೆ ||ಪ|| ನಾಲ್ಕು ಲೋಕದ ಜನಾ ಕಾಕೆದ್ದು ಬಳಲುತಿರಲು ಜೋಕೆ ನಿನ್ನೊಳು ನೀ ತಿಳಿ ಕಳವಳಿಸುತಲಿ ||೧|| ಕೃಷ್ಣಾನದಿ ತುಂಬಿ ತುಳಕ್ಯಾಡಿ ಬರುತಿರಲು ಆಣೆ ಹಾಕಿದೆ ಸೈ ಸೇರಿ ಜರಿದಾಡಿ ||೨|| ಉತ್ತರ ದಿಕ್ಕಿನಿಂದ ದು...

ನಾವು ಮುಳುಗುವುದಿಲ್ಲ ಏಳುವವರು ನಾವಲ್ಲ ಮುಳುಗೇಳು ಬೀಳುಗಳ ಸಂಕರಗಳೆಮಗೆ ಸಲ್ಲ ಜಡದ ಸೋಂಕುಗಳಿರದ ನಮ್ಮ ಪಥಗಳಲಿ ನಿತ್ಯ ಜಂಗಮರು ನಾವು ಸಮಯಾತಿ ಸಮಯಗಳು ಸಮ ವಿಷಮಾದಿ ನಿಯತಿಗಳು ನಿಮ್ಮ ಹಾದಿಯ ಹೂ-ಮುಳ್ಳ ಹಾಸು ಇತಿ-ಮಿತಿಯ ಮತಿಗೀತ ಸ್ತುತಿ-ನಿಂದೆ...

ರಜೆ ಮುಗಿಸಿ ಬ್ಯಾರೆಕ್ಸ್ ಮೂಲೆಗಳಲ್ಲಿ ಜೀವಿಸತೊಡಗಿದ್ದಾರೆ ಅಸ್ವಾಭಾವಿಕ ವರ್ತನೆಗಳಿಂದ. ಅವರಲ್ಲಿ ಒಬ್ಬನೇ ಒಬ್ಬ ನಗಬಲ್ಲ; ಅವನು ದಿಕ್ಕೆಟ್ಟ ಸಿನಿಮಾ ಹಾಡುಗಳನ್ನು ಬಲ್ಲವನು. ಮಳೆ ತರಿಸುವ, ಸದಾಕಾಲ ಗಾಳಿ ಬೀಸುವ ಆ ಮರ ಹೊಸ ಹಸಿರನ್ನೇನೊ ಹೊದ್ದು...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....