
ಯರಲವವೆಂಬುದು ಸತ್ಯ ಯರಲವವೆಂಬುದೆ ನಿತ್ಯ ಉಳಿದದ್ದೆಲ್ಲವು ಮಿಥ್ಯ ಹರಿ ಶಂಭೋಶಂಕರ ಅ ಆ ಇ ಈ ಮಿಥ್ಯ ಎ ಏ ಐಯೂ ಮಿಥ್ಯ ಋ ೠ ಎಂಬುದು ಮಿಥ್ಯ ಒ ಓ ಔವೂ ಮಿಥ್ಯ ಅಂ ಅಃ ಭಾರೀ ಮಿಥ್ಯ ಯರಲವವೆಂಬುದೆ ಸತ್ಯ ಉಳಿದದ್ದೆಲ್ಲವು ಮಿಥ್ಯ ಹರಿ ಶಂಭೋಶಂಕರ ಕ ಖ ಗ ...
ಬಾನ ಬಣ್ಣ ಮಾಗಿಸಿ ಶಶಿ ಮೂಡುತಿಹನದೋ. ಸಂಜೆ ಹೂವನೆರಚಿ ಸಾರೆ ನಮ್ರವಾಗಿ ತಾರೆ ತೋರೆ ಶರದದಿರುಳ ಕರವ ಪಿಡಿದು ಏರುತಿಹನದೋ. ಉದ್ಯಾನದ ಪುಷ್ಪಬೃಂದ ಲಜ್ಜೆಯ ಸಿರಿ ಹೊಂದಿದಂದ ತೆಳು ಬೆಳಕಿನ ಮೇಲುದುವನು ಧರಿಸುವಂತಿದೋ. ತಮವನುಳಿದುವೆನುವ ತೆರದಿ ನಿಡಿ...
ಶ್ರೀಮದಮಲ ವಚಃಪರಿಧಿಯಾ ದೀ ಮಹಾಕೃತಿಯಿಂದೊಲವು ಮಿಗೆ ವ್ಯೋಮದಲಿ ವಿಧು ವೇಡಿಸಿದ ಪರಿವೇಷದಿಂದೆರೆವ| ಕೌಮುದಿಯೊಲೀ ಕನ್ನಡದೊಳಾ ಸೀಮಮೆನೆ ನೆಲಸಿಹುದಿದಂ ನೆಗ ಳ್ದಾ ಮಹಾಕವಿ ನಿನಗೆ ಕನಿಗಳ ಕವಿಯೆ ವಂದಿಸುವೆ ||೧|| ಮೊದಲ ಮಗನಾ ಶುಕನು ಭಾಗವ ತದ ಪುರಾ...
ಕನ್ನಡಿಗರು ನಾವು ಕನ್ನಡಿಗರು; ಕರ್ಣನಿಗೂ ಕಡಿಮೆ ಇರದ ದಾನಶೂರರು ನಾವು ಕನ್ನಡಿಗರು! ಧೀಮಂತರು ನಾವು ಕನ್ನಡಿಗರು ಕಾವೇರಿಯ ಉಳಿಸಿಕೊಳದ ಹೋದ ಶಕ್ತಿ ಗಳಿಸಿಕೊಳದ ಮಾನ ಹೋದರೂನು ಮಾನ ಉಳಿದುದಂತೆ ನಟಿಸುತಿರುವ ಧೀಮಂತರು ನಾವು ಕನ್ನಡಿಗರು! ಸ್ನೇಹಪರರ...
ಸಿರಿಗೆರೆಯ ಸಿರಿದೇವಿ ಬನಶಂಕರಿ ಬನಗಿರಿಯ ಶಿವ ಶಿವಶಂಕರಿ ವರೇದೆ ತಾಯೆ ವೇದಾಂಭಿಕೆ ಪುಷ್ಪಾಂಕಿತ ಶೋಭಿತೆ ಸರ್‍ವೇಶ್ವರಿ ವಿಶ್ವನುತೆ ವಿಶ್ವಾಂಭರಿ ವಿಶ್ವೇಶ್ವರಿ ಮಹೋನ್ನತೆ ಮಹಾದೇವಿ ಮಾಹೇಶ್ವರಿ ಮುತ್ತೆ ದೆ ಸಿರಿತನದ ತಾಯೆ ಮುತ್ಯಾಲಮ್ಮ ಆನಂದದಾಯ...
ಹಠಾತ್ತನೆರಗಿತು ಹಕ್ಕಿ; ಬಲಿಷ್ಠ ರೆಕ್ಕೆಯ ಬಿಚ್ಚಿ ಬಡಿವ ಪಟಪಟಸದ್ದು. ಬೆಚ್ಚಿದ ಹುಡುಗಿಯನ್ನ ಕೊಕ್ಕಿಂದ ಹಿಡಿದೆತ್ತಿ, ಮುದ್ದಿಸಿತು ಅಸಹಾಯ ಎದೆಗೆ ಎದೆಯನೊತ್ತಿ ಸವರುತ್ತ ಅವಳ ತೊಡೆಬೆತ್ತಲೆಯ ಕಪ್ಪಾದ ಜಾಲಪಾದ. ಗರಿತೆರೆದ ಇಂಥ ಅದ್ಭುತವ ಸಡಲುತ್...
ಲಕ್ಷ್ಮೇಶ್ವರದ ರಾಮಲಿಂಗ ದೇವಾಲಯದ- ಲೊಂದು ಸಾವಿರಲಿಂಗ ಮೂಡಿರಲು ಪಿಂಡದಲಿ ರಾಮೇಶ್ವರವೆ ಆಗುತದು ಭರತಖಂಡದಲಿ ಮೆರೆಯಬಹುದಿತ್ತೆಂದು ಜನರೊಂದು ವಿಸ್ಮಯದ ಮಾತ ನುಡಿವರು. ಅಕಟ! ಕೋಳಿ ಸೂರ್‍ಯೋದಯದ ಕಾಲಕ್ಕೆ ಕೂಗಿತ್ತು. ಆ ಶಿಲಾಖಂಡದಲಿ ಮೂಡಲಿಹ ಕೊನೆ...
ಮ್ಯಾಲ ತುಂತುರ ಹನಿಯು ತಂತಿ ವಾದ್ಯದ ಮುಗುಲು ಬನತುಂಬ ಮಳೆಬಿಲ್ಲು ಬಿತ್ತಿಬಾರ ಹನಿಹನಿಯು ಬಿದ್ದಲ್ಲಿ ಸವಿಮುದ್ದು ಇದ್ದಲ್ಲಿ ಭೂರಮಣಿ ಮೈಬಿಚ್ಚಿ ಹೂವು ತಾರ ಏಳು ಬಣ್ಣದ ಮುಗುಲು ಸಂಜಿ ಶೀತಲ ನವಿಲು ಗಗನ ಮಲ್ಲಿಗಿ ಸುರಿದು ಕೈಯತಾರ ಬಾಳಿ ತೋಳನು ಚಾ...
ಬೆಂಕೀನ್ ಇಟ್ಟಿದ್ಲಂತೆ ಯಿಂದ್ ಅಡಗೂಲಜ್ಜಿ- ಮುನಿಯನ್ಗು ಆತ್ಕೋಂತ ಔಳೀಗಿದ್ ಕಜ್ಜಿ! ಕೋಳಿ ಕೂಗ್ದಿದ್ರೆಲ್ಲು ಬೆಳಕೇ ಆಗಾಲ್ವ! ಯೆಂಡ ಇಲ್ದೋಯ್ತಂದ್ರೆ ಆಡಾಕಾಗಾಲ್ವ? ೧ ಝುಮ್ಮಂತ್ ಇರಬೇಕಾದ್ರೆ ಪದಗೊಳ್ದು ಗತ್ತು ಏನಾರ ಬೇಕೇ ಬೇಕ್ ಅದಕೊಂದು ಮತ್ತು...













