ಒಂದು ಮುಂಜಾನೆ ಎದ್ದೆ; ರಿಪವ್ಯಾನ್ ವಿಂಕಲನು ಹದಿನೆಂಟು ವರ್ಷಗಳ ದೀರ್ಘ ನಿದ್ರೆಯಿಂದ ಎದ್ದು ಮೊಳಕಾಲನ್ನು ಮುಟ್ಟುತ್ತಿರುವ ಗಡ್ಡವನ್ನು ಕಂಡಂತೆ ನನ್ನನ್ನು ನಾನು ವಿಪರೀತ ಎತ್ತರವಾಗಿ ಬೆಳೆದದ್ದನ್ನು ಕಂಡೆ. ಮಲಗಿದ್ದ ಹಾಸಿಗೆ ದಿನದಂತೆ ಅಸ್ತವ್ಯಸ...

‘ಶ್ರೀ ರಾಮಾಯಣ ದರ್ಶನಂ’ ಕುರಿತು ವಿದ್ವತ್ ಟಿಪ್ಪಣಿಯನ್ನು ಮಾಡಲು ನಾನು ಹೊರಟಿಲ್ಲ. ಅದು ಸಾಧ್ಯವೂ ಇಲ್ಲ. ಅದು ಮಹಾಕಾವ್ಯ. ಬೃಹತ್‌ಗಾನ, ನಿತ್ಯ ರಾಮಾಯಣ. ಸ್ವರ್ಗದ ಕವಿ ಸಭೆಯಲ್ಲಿ ಆ ಮಹಾಕಾವ್ಯಗೋಷ್ಠಿಯಲ್ತಿ ಸಭಾಧ್ಯಕ್ಷರಾದ ತಮ್ಮ ಪರಮ ಪ್ರಿಯ ಗು...

(ಲೋಹಿಯಾ: ಜನನ : ೨೩-೩-೧೯೧೦ ಮರಣ ೧೧/೧೨-೧೦-೧೯೬೭ ಐನ್‌ಸ್ಟೀನ್ : ಜನನ : ೧೪-೩-೧೮೭೯ ಮರಣ ೧೭/೧೮-೪-೧೯೫೫) ಗಾಂಧಿಯ ಆಹಿಂಸಾ ತತ್ವ ಹಾಗೂ ಐನ್‌ಸ್ಟೀನರ ಅಣುವಾದ ಈ ಯುಗದ ಎರಡು ಅದ್ಭುತಗಳೆಂದು ಪರಿಗಣಿಸಲಾಗಿದೆ. ಆದರೆ ಅವು ಯಾವ ರೀತಿಯಲ್ಲಿ ಅದ್ಭು...

ಈಗಾಗಲೇ ತಂತ್ರಜ್ಞಾನದಿಂದ ಏನೆಲ್ಲ ವಿಸ್ಮಯಗಳ ಸೃಷ್ಟಿಯಾಗುತ್ತಲಿದೆ. ಮುಂದಿನ ಶತಮಾನದಲ್ಲಿ ನಂಬಲಸಾಧ್ಯವಾದ ಕೌತುಕಗಳನ್ನು ಪ್ರಕಟಿಸುತ್ತದೆ. ಹೊಸ ಪೀಳಿಗೆಯ ಹಸು, ಕುರಿ, ಕೋಳಿ ಇತ್ಯಾದಿಗಳನ್ನು ತಯಾರಿಸಬಹುದು. ಇವು ನೈಸರ್ಗಿಕವಾಗಿ ಜನಿಸಿದವಾಗಿರುವ...

ನೀವು ವಿಕ್ಟೋರಿಯನ್ ಕಾಲದ (ಅಂದರೆ ಹತ್ತೊಂಬತ್ತನೇ ಶತಮಾನದ) ಕಾಲೇಜುಗಳಲ್ಲಿನ ತರಗತಿಯ ಕೋಣೆಗಳನ್ನು ನೋಡಿದರೆ ಅವುಗಳ ರಚನೆ ಒಂದು ರೀತಿಯ ಇಗರ್ಜಿ ವೇದಿಕೆ ಹಾಗೂ ಅದರ ಮುಂದಿನ ಸಭಾಂಗಣದ ತರ ಇರುವುದು ನಿಮ್ಮ ಗಮನ ಸೆಳೆಯಬಹುದು. ಹೆಚ್ಚಾಗಿ ಇಂಥ ಶೈಲಿ...

ಇಳಕಲ್ಲಿನ ಭವ್ಯ ದರ್ಗಾ ನನ್ನ ಪ್ರೀತಿಯ ಪ್ರಶಾಂತ ವಿಹಾರ ಸ್ಥಾನ. ಇಂದು ಹೈವೇ ರಾಕ್ಷಸನ ಹಾವಳಿಗೆ ತುತ್ತಾಗಿ ಆ ದರ್ಗಾದ ಅಖಂಡ ಶಾಂತಿಗೆ ಭಂಗ ಬಂದಿದೆ. ಆದರೆ ಆ ಕಾಲದಲ್ಲಿ ಅದೇ ದರ್ಗಾ ಸುಂದರ ಸುಖದ ಶಾಂತಿಯ ಪರಿಸರವಾಗಿತ್ತು. ನನಗೆ ಭಾರಿ ಖುಷಿ ಕೊಟ...

ಹದಿನಾಲ್ಕನೇ ಶತಮಾನದ ಉದ್ದಕ್ಕೂ ಬದಲಾವಣೆಯ ಗಾಳಿ ಇಂಗ್ಲೆಂಡಿನ ಪ್ರತಿ ಹಂತಗಳಲ್ಲೂ ಬೀಸತೊಡಗಿತ್ತು. ರಾಜಕೀಯ, ಸಾಮಾಜಿಕ, ಧಾರ್‍ಮಿಕ, ಹಾಗೂ ಸಾಹಿತ್ಯಿಕ ರಂಗಗಳಲ್ಲಿ ಅಭೂತವಾದ ಬದಲಾವಣೆಗಳು ಗೋಚರಿಸತೊಡಗಿದ್ದವು. ರಾಜಕೀಯ ಹಿನ್ನೆಲೆಯನ್ನು ಗಮನಿಸಿದರ...

ನಾನು ಕಳೆದ ೬೦ ವರ್ಷಗಳಿಂದಲೂ ಮೈಸೂರು ಬೆಂಗಳೂರು ನಡುವೆ ಪ್ರಯಾಣ ಮಾಡುತ್ತಿದ್ದೇನೆ. ಹಿಂದೊಮ್ಮೆ ಶ್ರೀ ಲಾಲ್‌ಬಹದ್ದೂರ್ ಶಾಸ್ತ್ರಿಯವರು ಮೈಸೂರಿನಿಂದ ಹಿಂತಿರುಗಿ ಬಂದು ದಕ್ಷಿಣ ಬೆಂಗಳೂರಿನ ಎಂ. ಎನ್. ಕೃಷ್ಣರಾವ್ ಪಾರ್ಕ್‌ನಲ್ಲಿ ಭಾಷಣ ಮಾಡಿದರು....

ಪ್ರತಿಯೊಬ್ಬ ಬರಹಗಾರನೂ ಒಂದಲ್ಲ ಒಂದು ಬಾರಿ ಈ ಪ್ರಶ್ನೆಗೆ ಉತ್ತರಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ನಾನೇಕೆ ಬರೆಯುತ್ತೇನೆ? ಬರೆಯುವುದರಿಂದ ನನಗಾಗುವ ಲಾಭವೇನು? ಬರೆಯದೇ ಇದ್ದರೆ ನಷ್ಟವೇನು. ಬರಹವೆನ್ನುವುದು ಚಟವಾ, ಪ್ರೀತಿಯಾ. ಹಣಕ್ಕಾಗಿಯಾ? ಖ...

ವಿಚಾರವನ್ನು ಕೇವಲ ಪ್ರಚಾರದ ಘಟ್ಟದಲ್ಲಿ ನೆಲೆ ನಿಲ್ಲಗೊಡದೇ, ಆಚಾರದ ಅಂಕಣದಲ್ಲಿ ಕ್ರಿಯಾಶೀಲ ಗೊಳಿಸಿದವರು ಶರಣರು ಶರಣೆ ರೆಮ್ಮವ್ವೆ… ‘ ಆಚಾರವೇ ಪ್ರಾಣ ಲಿಂಗವಾದ ರಾಮೇಶ್ವರಲಿಂಗ” ವೆಂದು ಸಾರಿದ್ದಾಳೆ. ಅಂತರಂಗದ ಚಿಂತನೆಗಳನ್ನು ಪ್...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...