ನಂಬಿಕೆ

ತೆನೆ - ೧ ಗಂಟೆಯ ಮುಳ್ಳು ನಿಂತಿದೆ ನಿಮಿಷದ ಮುಳ್ಳಿಗೋ ಗರಬಡಿದಿದೆ ಕ್ಷಣದ ಮುಳ್ಳು ಹೆಜ್ಜೆ ಕಿತ್ತಿಡಲಾರದೇ ಮೂಗುಬ್ಬಸದಿಂದ ತೆವಳುತಿದೆ ಸೋರುತ್ತಿದೆ ಗಳಿಗೆ ಬಟ್ಟಲು ಇನ್ನಾದರೂ ಹೊಸತಿಗೆ ತೆರೆಯಬಾರದೇ ಬಾಗಿಲು? ಪಿಸುಗುಟ್ಟುವ ಚಂದಿರ ಏರಿಸುತ್ತಾನೆ...

ಹೊತ್ತಲ್ಲದ ಹೊತ್ತಲ್ಲಿ

ಇಳೆಗೆ ಹೊಸರಾಗ ಕಲಿಸುವ ಹುಚ್ಚು ಯಾಕೆ ಬಂತೋ ಈ ಮಳೆಗೆ? ಹೊತ್ತು - ಗೊತ್ತು ಒಂದೂ ಇಲ್ಲದೇ ಹೀಗೆ ಸುರಿದು ಬಿಡುವುದೇ ಇಳೆಗೆ? ನಡೆಯುತ್ತಾ ನಡೆಯುತ್ತಾ ಅರ್ಧದಲ್ಲೇ ಥಟ್ಟನೆ ಎಲ್ಲಾ ನಿಂತು ಗಾಳಿ -...

ಮಗುವಿಗೆ…

ಮಗೂ ಯಾವುದೇ ಕಾರಣಕ್ಕೂ ಮೂಗು ಉದ್ದ ಬೆಳೆಯೆಬಿಡಬೇಡ ಸೀದಿದ್ದು, ಸಿಟ್ಟಿದ್ದು, ಕೆಟ್ಟಿದ್ದು ವಾಸನೆ ಬಡಿದರೆ ಮೂಗಿಗೆ ಮೂಗು ಮುಚ್ಚಿಕೋ ಮೂಲ ಹುಡುಕ ಹೋಗಬೇಡ. ಇವರು ಬೆಳಕಿನ ಮಂದಿ ಸೂರ್ಯನೇ ಇವರ ದೊಂದಿ ಕೆಟ್ಟ ಕುತೂಹಲಕ್ಕೆ....

ಮಾತು – ಮೌನದ ನಡುವೆ

ಮೌನದಕ್ಷಯ ಪಾತ್ರೆಯೊಳಗೆ ಒಂದು ಅಗುಳು ಮಾತು ಕಾವು ಕೂತು ಚಟಪಟನೆ ಸಿಡಿದು ಸಾವಿರವಾಯ್ತು ಲಕ್ಷವಾಯ್ತು ಅಕ್ಷಯವಾಯ್ತು ಎಷ್ಟೊಂದು ಮಾತು ಕಣ್ಣುಬಿಟ್ಟಿದೆ ಮೊಳೆತು! ಮೌನ ಹೊದ್ದ ನಿರ್ಜೀವ ಕನಸುಗಳಿಗೆ ಮಾತು ತುಂಬುವ ಹೊತ್ತು ಕೆಂಪು, ಹಸಿರು,...

ದೋಸೆಹಿಟ್ಟು ನದಿಯಾದದ್ದು

ಅವಳು ದೋಸೆಹಿಟ್ಟು ತಿರುವಿ ಬೋಸಿಗೆ ತುಂಬಿಟ್ಟು ಇದ್ದಂಗೇ ಇರಬೇಕು ಎಂದೆಚ್ಚರಿಕೆ ಕೊಟ್ಟು ನೆಮ್ಮದಿಯಲಿ ಮಲಗಿ ಏಳುವಾಗಾಗಲೇ... ದೋಸೆಹಿಟ್ಟು ಒಳಗೇ ಹುಡುಗಿ ಸೊಕ್ಕಿ ಬೋಸಿ ಮೀರಿ ಉಕ್ಕುಕ್ಕಿ ಹರಿಹರಿದು ಹೊಸಿಲು ದಾಟಿ ಶುಭ್ರ ಬಿಳಿಯ ನದಿಯಾಗಿ...

ಬೀದಿ

ವ್ಯೋಮ ಮಂಡಲದೊಳಗಿನ ರಹಸ್ಯ ಲೋಕದಂತೆ ನೂರುಗೂಢಗಳ ಗರ್ಭದೊಳಗೇ ಅಡಗಿಸಿ ಕಣ್‌ ಮಿಟುಕಿಸಿ ಸೆಳೆವ ತುಂಟ ಊರೊಳಗಿನ ಈ ಬೀದಿ. ಬಣ್ಣಬಣ್ಣಗಳ ಕನಸು ತುಂಬಿಟ್ಟುಕೊಂಡ ಅಂಗಡಿ ಸಾಲು ಎಂದಿಗೂ ಯಾರೂ ಕೊಳ್ಳದ ಕೈಗೆಟುಕದ ಸೂರ್ಯಚಂದ್ರತಾರೆ ಎಲ್ಲ...

ಪ್ರೀತಿಗೇಕೆ ಸೋಲುತ್ತದೆ?

ಕಣ್ಣಂಚಿನಲ್ಲಿ ಉಯ್ಯಾಲೆಯಾಡುತ್ತಿದ್ದ ಹನಿಯಲ್ಲಿ ಹೆಸರಿಲ್ಲದ ಯಾವುದೋ ಉಸಿರು ದೋಣಿಯಾಟವಾಡುತ್ತದೆ ಯಾವುದು ಆ ಹೆಸರಿಲ್ಲದಾ ಉಸಿರು? ಕಣ್ಣಂಚಿನಲ್ಲಿ ಉಯ್ಯಾಲೆಯಾಡುತ್ತಿದ್ದ ಹನಿಯಲ್ಲಿ ನೆನಪು ರಂಗೋಲಿಯಿಡುತ್ತದೆ ಹಕ್ಕಿಯೊಂದು ಮೊಟ್ಟೆಯಿಡುತ್ತದೆ ಎಲ್ಲಿಯವು ಈ ನೆನಪು, ಕನಸು, ಹಕ್ಕಿ? ಕಣ್ಣಂಚಿನಲ್ಲಿ ಉಯ್ಯಾಲೆಯಾಡುತ್ತಿದ್ದ...

ಹುಷ್ ! ಸದ್ದು!

೧ ಬಾಗಿಲಿಲ್ಲದ ಬಯಲೊಳಗಿಂದ ಮೆಲ್ಲಗೆ ಬಳುಕುತ್ತಾ ಬಂತು ಬೆಳಕಿನ ಹೊಳೆ ಅದರಾಳದಿಂದೆದ್ದ ನೂರಾರು ನಿಹಾರಿಕೆಯರು ಬೊಗಸೆ ತುಂಬಿ ಸುರಿಸುತ್ತಾರೆ ಬಣ್ಣದ ಬೆಳಕಿನ ಮಳೆ. ಹೇಳಿಕೊಳ್ಳಲು ಊರಿಲ್ಲದ ಊರಿಕೊಳ್ಳಲು ಬೇರಿಲ್ಲದ ಸೋರಿಕೊಳ್ಳಲು ನೀರಿಲ್ಲದ ಬೆಳಕಿನ ಹೊಳೆಯಲಿ...

ಮುಟ್ಟಿದರೆ ಮುನಿಯೂ, ಕನಕಾಂಬರ ಬೀಜವೂ

ಅರಳಲೋ ಬೇಡವೋ ಎಂದನುಮಾನಿಸುತ್ತಲೇ ಎಲೆದಳದಳಗಳ ಅರ್ಧವಷ್ಟೇ ಮೆಲ್ಲಗೆ ವಿಕಸಿಸಿ ಯಾರ ದಿಟ್ಟಿಗೂ ತಾಗದಿದ್ದರೆ ಸಾಕೆನುತ ಮೈಮನಗಳನೆಲ್ಲ ಮುದುರಿಸಿ ದೇಹವೂ ನಾನೇ ಆತ್ಮವೂ ನಾನೇ ಬಚ್ಚಿಡಲೆಂತು ಎರಡನೂ ಪರಕೀಯ ದಾಳಿಯಿಂದ? ಕಳವಳದಿಂದ ಸಣ್ಣ ತಾಗುವಿಕೆಗೂ ಮೈಮನಗಳ...

ಸೂರ್ಯನೂ ಮಾಗಬಹುದಲ್ಲಾ?

ಬೇರಿಳಿಸಲು ಕುಡಿಯೊಡೆಯಲು ಹೂ ಅರಳಿಸಲು ಸೂರ್ಯನೇನು ಒಂದು ಕಾಳೇ? ಜೀವ ತುಂಬಲು ಚೈತನ್ಯ ನೀಡಲು ಬಿಡದಂತೆ ಹಿಡಿದಿಡಲು ಆಗಸವೇನು ಮಣ್ಣೇ ? ಅನಾದಿಯಿಂದ ಆಗಸಕ್ಕೆ ಅದೇ ದೂರು ಸೂರ್ಯನ ಆತ್ಮಸಾಂಗತ್ಯವಿಲ್ಲದ ಬೇಜಾರು ಸೂರ್ಯನಿಗೋ ಅವನದೇ...