ಹಸಿವು

ಅಲ್ಲಿ ಝಗಝಗಿಸುವ ಸೂರ್ಯ ಉರಿನಾಲಿಗೆ ಚಾಚುತ್ತಾನೆ ಅವನಂತೆ ತಿರುಗಣಿಯ ಗೋಳಾಟವಾಡುವ ಉರಿಯುಂಡೆಗಳು ಯಾವ ಒಡಲಿಗಾಗಿ ತಿರುಗುತ್ತಿವೆಯೋ? ಎರವಲಿಗೆ ಮೈತೊರೆದು ಗೂಟಕೊಡನಾಡುತಿವೆ ಗಣನೆಯಿಲ್ಲದ ಮಣ್ಣ ಗುಂಡುಗಳು, ನೆರಳ ಬಂಡುಗಳು ಇಲ್ಲಿ ಕೆಳಗೆ ಹಸಿದ ಮಣ್ಣು ಬಾಯ್ಬಿಟ್ಟು...

ದೋಸೆಹಿಟ್ಟು ನದಿಯಾದದ್ದು

ಅವಳು ದೋಸೆಹಿಟ್ಟು ತಿರುವಿ ಬೋಸಿಗೆ ತುಂಬಿಟ್ಟು ಇದ್ದಂಗೇ ಇರಬೇಕು ಎಂದೆಚ್ಚರಿಕೆ ಕೊಟ್ಟು ನೆಮ್ಮದಿಯಲಿ ಮಲಗಿ ಏಳುವಾಗಾಗಲೇ... ದೋಸೆಹಿಟ್ಟು ಒಳಗೇ ಹುಡುಗಿ ಸೊಕ್ಕಿ ಬೋಸಿ ಮೀರಿ ಉಕ್ಕುಕ್ಕಿ ಹರಿಹರಿದು ಹೊಸಿಲು ದಾಟಿ ಶುಭ್ರ ಬಿಳಿಯ ನದಿಯಾಗಿ...