ಬಾಲೆ ನೀಲಾಂಜನ ಬೆಳಗುಬಾ

ಬಾಲೆ ನೀಲಾಂಜನ ಬೆಳಗುಬಾ ಲೀಲಾನಂದ ವಿಶಾಲ ದಯಾಳಗೆ || ಪ || ಮಿಂದು ಮಡಿಯನುಟ್ಟು ದಂದುಗವ ಬಿಟ್ಟು ಒಂದೆ ಮನಸಿನಿಂದ ವಂದಿಸುತೆ ಇಂದುವದನೆ ಜಯ ಎಂದು ಪೊಗಳುತಲಿ ಸುಂದರ ಗುರುಗೋವಿಂದನ ಆಡಿಗೆ || ೧...

ಪಂಕಜನೇತ್ರೇ ಬಾ ಅಂಕಿತಸ್ಥಾನಕೆ

ಪಂಕಜನೇತ್ರೆ ಬಾ ಅಂಕಿತಸ್ಥಾನಕೆ ಶಂಕ ನೀಲಾಂಜನ ಪಂಚಾರುತಿ || ಪ || ಕಿಂಕರತ್ವದ ತಳಗಿಯೊಳು ಬೆಂಕಿಯನು ಬೆಳಸಿಟ್ಟು ಕರ್ಪೂರ ಓಂಕಾರ ಪ್ರಣಮವನು ಜಪಿಸುತ ವೆಂಕಟೇಶಾನ ಪಾದಕಮಲಕೆ || ೧ || ಲಕ್ಷ್ಮಿರಮಣನೆಂಬ ಸಾಕ್ಷಾತನಾಮಕ್ಕೆ ಲಕ್ಷ...

ಜಯವೆನುತ ಕೈಮುಗಿದು ನಮಿಸುವೆ

ಜಯವೆನುತ ಕೈಮುಗಿದು ನಮಿಸುವೆ ನಯದೊಳೊಂದಿಪೆ ದೃಢದಲಿ ಭವಕ್ಕಪ್ರಾಣವ ದೂರಮಾಡೆಂದೆನುತ ಎನಮನಗೊನಿಯಲಿ || ಪ || ಭವನೆತ್ರೈಜೀವನ ಜಗತ್ಪರಿಪಾಲ ದಯಾನಿಧಿಯೆನುತಲಿ ಮಹೀತಲ ಹಬ್ಬಲಿ ಮಹಾಭವಾಂಡದ ಸುತ್ತಲಿ ಮೇಧಿನಿಸ್ತಳದಿ ಜನಸಿದೆಯೋ ಮೌಜಿಲಿ ಚಿನುಮಯಾತ್ಮಕ ಸ್ವರೂಪಿಲೀ ಆ ಭಯ...

ಆರತಿಯನು ಎತ್ತಿರೆ ಸದ್ಭಕ್ತರೆಲ್ಲರು

ಆರತಿಯನು ಎತ್ತಿರೆ ಸದ್ಭಕ್ತರೆಲ್ಲರು || ಪ || ಆರತಿಯನು ಎತ್ತಿರೆ ಈರತಿಗೆ ರತಿಯಿಟ್ಟು ಸಾಕ್ಷಾತ ಸಾರುತಿರೆ ಶ್ರುತಿಗಳು ಸದ್ಗುರು ಚಾರುತರ ಕೀರತಿಯ ಪೋಲ್ವಗೆ || ೧ || ಜ್ಯೋತಿತ್ರಯಕೆ ತಳಗಿ ಮೇಲಕೆ ಆತು ಬತ್ತಿಗಳೈದು...

ಶ್ರೀ ಫಕ್ಕೀರಸ್ವಾಮಿ ಶಿವಯೋಗಿ ಸಮರ್ಥ

ಶ್ರೀ ಫಕ್ಕೀರಸ್ವಾಮಿ ಶಿವಯೋಗಿ ಸಮರ್ಥ ಬೆಳಗುವೆನಾರುತಿಯಾ ಗುರುವರಾ ಎತ್ತುವೆ ಆರತಿಯಾ || ಪ || ಥಳಿಥಳಿಸುತ ಕಾಲ್ ಕೈ ಮೈ ಬಣ್ಣಾ ಕೆಂಪ ನಿಂಬಿಹಣ್ಣಾ ಗುರುವರಾ ಕೆಂಪ ನಿಂಬಿಹಣ್ಣಾ ಸೂರ್ಯನ ಕಿರಣ ವರಣ ಇವರಿಗೆ...

ಜಯಮಂಗಳಂ ಜಯ ಜಗತ್ಯಾಳು

ಜಯಮಂಗಳಂ ಜಯ ಜಗತ್ಯಾಳು ಜಯ ಮಹಾರುದ್ರಗೆ || ಪ || ರುದ್ರ ಭಕ್ತರು ರುದ್ರ ತಳಗಿಯ ಪಿಡಿದು ರುದ್ರಮಂತ್ರವ ಜಪಿಸಿ ರುದ್ರನೊಳು ರುದ್ರದೃಷ್ಟಿಯನಿಟ್ಟು ರುದ್ರನಡಿಗಳಿಗೆ || ೧ || ಶಿವನೆ ಗಗನವೇರಿ ಶಿವ ನಿಮ್ಮೊಳೊಲಿದು...

ಆರುತಿ ಬೆಳಗುವೆನು ಯೋಗದ

ಆರತಿ ಬೆಳಗುವೆನು ಯೋಗದ ಆರುತಿ ಬೆಳಗುವೆನು || ಪ || ಆರುತಿ ಬೆಳಗುವೆ ಪರಮಾರ್ಥದ ಸಾರವ ತಿಳಿದಿನ್ನು ತಾರಕ ಬ್ರಹ್ಮಗೆ || ಆ. ಪ. || ಗುದಗುಹ್ಹೆಗಳನೊತ್ತಿ ಮೇಲಕೆ ಚದುರತನದಲಿ ಹತ್ತಿ ಸದರ ಮನಿಯೊಳು...

ಪ್ರಮೀಲೆಯ ಹೋಳೀಪದ

ಗುರುವರನ ಸ್ಮರಿಸಿ ಕರಿಮುಖಗ ಕರಗಳ ಮುಗಿದು ವರವ ಬೇಡುವೆನು ಶಾರದಿಗೆ ||ಇಳವು|| ಶಾರದಿ ಗಣಪತಿ ಉಭಯ ಮೂರುತಿ ಹದಪೂರ ನುತಿಸಿ ನಮೋಯೆಂದು ಭಾರತ ಪುರಾಣದ ಸಂದು ಧಾರುಣಿಪತಿ ರಾಜೇಂದ್ರ ಧರ್ಮನಾ ಯಜ್ಞ ತುರಗವು ಬಂದು...

ಮೈಲಾರಲಿಂಗನ ಹೋಳೀಪದ

ಗುರುವೆ ನೀ ಗತಿಯೆಂದು ಹರುಷದಿ ಪೊಗಳುವೆ ಸರಸ್ವತಿ ಕರಿಮುಖ ಉಭಯರನು ಬಹು- ತರದಿ ಬೇಡುವೆ ದಿವ್ಯ ಅಭಯವನು ಮನ- ವರಿತು ಪೇಳುವೆ ಪದ ಶುಭದಿ ನಾನು ಧರಿನೇರುವೆ ನಾ ತೋರುತ ದಕ್ಷನಾ ಹರನೊರವಿನಾ ಮಾರಹರನ...

ಕಲ್ಯಾಣನಗರದಲಿ ಅಲ್ಲಮಪ್ರಭುವಿನ

ಕಲ್ಯಾಣನಗರದಲಿ ಎಲ್ಲಾ ಗಣಂಗಳು ಅಲ್ಲಮ ಪ್ರಭುವಿನ ಕಾಣುತಲಿ ಸೊಲ್ಲು ಸೊಲ್ಲಿಗೆ ಶಿವನ ಪ್ರಮಾಣದಲಿ ಅಲ್ಲಿಗಲ್ಲಿಗೆ ನಿಲ್ಲುವಂಥ ತಾಣದಲಿ ಕಲ್ಲಿನೊಳಗೆ ಕರುಣದಿ ಮೆರದೀತೋ ಬಲ್ಲವರ‍್ಹೇಳರಿ ಸ್ಥಾನದಲಿ ಪ್ರಸ್ಥಾನದಲಿ ||ಪ|| ಬಲ್ಲಿದ ಬಸವನ ಮಹಿಮೆಯ ಹೇಳತೇನಿ ಎಲ್ಲರು...