ಬಾರಣೆ

ಬಾರಣೆ

ಗುತ್ತಿನವರು ನಡೆಸುವ ದೊಂಪದ ಬಲಿ ಅಂದರೆ ಆಸುಪಾಸಿನ ಹತ್ತೂರಲ್ಲಿ ಎಲ್ಲೂ ಇಲ್ಲದ್ದು. ಸುಗ್ಗಿ ಕೊಯ್ಲು ಕಳೆದು ಸರಿಯಾಗಿ ಮೂವತ್ತನೆಯ ದಿವಸಕ್ಕೆ ನಡೆಯುವ ದೊಂಪದ ಬಲಿ ಊರಿಗೆ ಎಲ್ಲಿಲ್ಲದ ಕಳೆ ತರುತ್ತದೆ. ನಾಲ್ಕೂರುಗಳ ಜನ ಅಲ್ಲಿ...
ಹೀಗೊಂದು ನಾಯೀಕತೆ

ಹೀಗೊಂದು ನಾಯೀಕತೆ

ಅದೊಂದು ನಿರ್ಜೀವ ಊರು. ಸಂಜೆ ಯಾಗುವಾಗ ಆ ಊರಿಗೆ ರಂಗೇರುತ್ತದೆ. ಶಾಲೆಯ ಹತ್ತಿರದಲ್ಲೇ ಇರುವ ಕಳ್ಳು ಮತ್ತು ಸಾರಾಯಿ ಗಡಂಗುಗಳು ಆಗ ತುಂಬಿ ತುಳುಕುತ್ತವೆ. ಶಾಲೆಗೆ ಮಕ್ಕಳನ್ನು ಕಳುಹಿಸಲು ಹಿಂದೆ ಮುಂದೆ ನೋಡುವವರೂ ಕೂಡ...
ಬೈಸಿಕಲ್ಲು

ಬೈಸಿಕಲ್ಲು

ಅವನ ಬೈಸಿಕಲ್ಲಿಗೆ ಎಷ್ಟು ವರ್ಷವಾಗಿರಬಹುದೆಂದು ಅವನಿಗೂ ಸರಿಯಾಗಿ ಹೇಳಲು ಸಾಧ್ಯವಿರಲಿಲ್ಲ. ಅದಕ್ಕೆ ಪೈಂಟು ಇಲ್ಲದೆ ಅದೆಷ್ಟೋ ವರ್ಷಗಳು ಕಳೆದಿದ್ದವು. ಅದಕ್ಕೆ ಬೆಲ್ಲು ಇರಲಿಲ್ಲ. ಅದರ ಎಲ್ಲಾ ಭಾಗಗಳೂ ಹೊರಡಿಸುವ ಶಬ್ದದಿಂದಾಗಿ ಬೇರೆ ಬೆಲ್ಲಿನ ಅಗತ್ಯವಿರಲಿಲ್ಲ....
ನಿಂತವರು

ನಿಂತವರು

ಇಸರಪ್ಪನನ್ನು ಅಯ್ಯಾ ಅವರು ಬರಹೇಳಿದ ಸುದ್ದಿ ಒಬ್ಬರಿಂದ ಇನ್ನೊಬ್ಬರಿಗೆ, ಅವರಿಂದ ಮತ್ತೊಬ್ಬರಿಗೆ ಹೀಗೆ ಆ ಪುಟ್ಟ ಊರಲ್ಲಿ ಬಹಳ ಬೇಗ ಎಲ್ಲರಿಗೂ ತಿಳಿದು ಹೋಯಿತು. ನಾಲ್ಕು ದಿನಾ ರಜಾ ಹಾಕಿ ಊರಿಗೆ ಹೋಗಿ ಆಗ...
ಪುಂಸ್ತ್ರೀ – ೧೮

ಪುಂಸ್ತ್ರೀ – ೧೮

ವಿಲೀನನಾದನು ವೇಣುನಾದದಲಿ ಭೀಷ್ಮ ಇದು ಅವಳೇ ಇರಬಹುದೆ? ಹಾಗೆ ಅಂದು ನನ್ನೆದುರು ನಿಂತು ಮೊದಲ ಬಾರಿಗೆ ನನ್ನನ್ನು ಏಕವಚನದಲ್ಲಿ ಕರೆದು ಪ್ರತಿಜ್ಞೆಯಂತಹ ಮಾತುಗಳನ್ನಾಡಿ ಧಗಧಗನೆ ಉರಿಯುತ್ತಿದ್ದ ಚಿತೆಯನ್ನು ಪ್ರವೇಶಿಸಿದಳಲ್ಲಾ, ಆ ಅಂಬೆಯೇ ಹೀಗೆ ಶಿಖಂಡಿಯಾಗಿ...
ಪುಂಸ್ತ್ರೀ – ೧೭

ಪುಂಸ್ತ್ರೀ – ೧೭

ಅಗ್ನಿಗಾಹುತಿಯಾಯ್ತು ಸಕಲವು ಅಂಬೆ ಬ್ರಾಹ್ಮೀ ಮುಹೂರ್‍ತದಲ್ಲಿ ಮಧುಭಾಷಿಣಿ ‘ಅಂಬೆ, ಅಂಬೆ’ ಎಂದು ನನ್ನ ಮೈ ಕುಲುಕಿಸಿದಾಗ ನನಗೆ ಎಚ್ಚರವಾಯಿತು. ನಾನು ಎಲ್ಲಿದ್ದೇನೆಂದು ತಿಳಿಯಲು ಸ್ವಲ್ಪ ಹೊತ್ತು ಬೇಕಾಯಿತು. ಇಂದು ನನ್ನ ಜೀವನದ ಅತ್ಯಂತ ನಿರ್ಣಾಯಕ...
ಪುಂಸ್ತ್ರೀ – ೧೬

ಪುಂಸ್ತ್ರೀ – ೧೬

ಅಸ್ತಮಿಸಿದನು ಕರ್ಣ ದಿನಮಣಿ ಸೂರ್ಯಾಸ್ತಮಾನವಾಗುತ್ತಿದ್ದಂತೆ ಇದ್ದಕ್ಕಿದ್ದಂತೆ ಯುದ್ಧರಂಗದಿಂದ ಆವರೆಗೆ ಕೇಳಿಬರುತ್ತಿದ್ದ ಕದನ ಕರ್ಕಶ ಸದ್ದು ಅಡಗಿತು. ಭೀಷ್ಮರಿಗದು ಅಸಹನೀಯ ಮತ್ತು ವಿಪತ್ತಿನ ಸೂಚನೆಯಂತೆ ಭಾಸವಾಗತೊಡಗಿತು. ಏನು ವಿಪತ್ತು ಸಂಭವಿಸಿರಬಹುದು? ಶಲ್ಯ ಸಾರಥ್ಯದಲ್ಲಿ ಕರ್ಣ ಅರ್ಜುನನನ್ನು...
ಪುಂಸ್ತ್ರೀ – ೧೫

ಪುಂಸ್ತ್ರೀ – ೧೫

ಮಿಳಿತವಾದುದು ಪ್ರೇಮ ನಯನದಲಿ ಗಿರಿನಾಯಕ ತೋರಿಸಿಕೊಟ್ಟದ್ದು ಪರಶುರಾಮರನ್ನು. ಬದುಕಿರುವಾಗಲೇ ಕತೆಯಾದವರು ಅವರು. ಅಂಬೆ ಎಳವೆಯವಳಾಗಿದ್ದಾಗ ಅವಳ ಅಪ್ಪ ಪರಶುರಾಮರ ಕತೆಗಳನ್ನು ಎಷ್ಟೋ ಬಾರಿ ಹೇಳಿದ್ದುಂಟು. ಅಪ್ಪ ಅವರನ್ನು ಕ್ಷತ್ರಿಯ ದ್ವೇಷಿ ಎಂದು ವರ್ಣಿಸುತ್ತಿದ್ದ. ಕ್ಷತ್ರಿಯಾಣಿಯ...
ಪುಂಸ್ತ್ರೀ – ೧೪

ಪುಂಸ್ತ್ರೀ – ೧೪

ರೋಷದಲಿ ಕುದಿದನು ರುಧಿರವ ಶಲ್ಯ ಭೂಪತಿಯನ್ನು ಕರ್ಣ ಸಾರಥ್ಯ ವಹಿಸುವಂತೆ ಒಡಂಬಡಿಸಲು ತನ್ನಿಂದ ಸಾಧ್ಯವಾದುದಕ್ಕೆ ಭೀಷ್ಮರಿಗೆ ಅಮಿತಾನಂದವಾಗಿತ್ತು. ಎದೆಯ ನೋವು ಮರೆತು ಹೋಗಿ ರಾತ್ರಿ ಚೆನ್ನಾಗಿ ನಿದ್ದೆ ಬಂದಿತ್ತು. ಯುದ್ಧ ಹದಿನೇಳನೆಯ ದಿನವನ್ನು ಪ್ರವೇಶಿಸಿದೆ....
ಪುಂಸ್ತ್ರೀ –  ೧೩

ಪುಂಸ್ತ್ರೀ – ೧೩

ಸುಖದ ಕ್ಷಣವದು ಎಷ್ಟು ನಶ್ವರ? ಗಿರಿನಾಯಕನ ಮನೆಯ ಮಹಡಿಯಲ್ಲೊಂದು ವಿಶಾಲ ಕೊಠಡಿಯಿತ್ತು. ಅದನ್ನೇ ಅಂಬೆಗೆಂದು ಬಿಟ್ಟುಕೊಡಲಾಯಿತು. ಅದರಲ್ಲಿ ಎದುರು ಬದುರಾದ ಎರಡು ದೊಡ್ಡ ಕಿಟಕಿಗಳಿದ್ದವು. ಪೂರ್ವದ ಕಡೆಯ ಕಿಟಕಿಯಿಂದ ನೋಡಿದರೆ ದಟ್ಟವಾದ ಕಾಡು, ಪೊದೆ,...