ಮಗು ಚಿತ್ರ ಬರೆಯಿತು ಬೆರಳುಗಳ ಕೊರಳ ಆಲಿಸಿ ಗೆರೆಯನೆಳೆಯಿತು. ಪುಟ್ಟ ಮನೆಯೊಂದ ಕಟ್ಟಿ ಮನೆಯ ಮುಂದೊಂದು ಮರವ ನೆಟ್ಟು ರೆಂಬೆ ಕೊಂಬೆಗೆ ಎಲೆಯನಿಟ್ಟು ಎಲೆಯ ನಡುವೆ ಹೂವನರಳಿಸಿ ಹೂವಿನ ಜೊತೆಗೆ ಹಣ್ಣನಿರಿಸಿ ಹಿಗ್ಗಿ ನಲಿಯಿತು....
ಎಲ್ಲ ನೆನಪುಗಳಿಗೆ ವಿರಾಮ ಹೋಗಿ ಬರುವೆ ರಾಮ ಇರಿಸುವೆ ನನ್ಹೆಸರ ಉರಿಸಿಕೊ ನಿನ್ನೊಳಗೆ ಹೋಗಿ ಬರುವೆ ರಾಮ.... ನಾ ಬಲ್ಲೆ ನಿನ್ನೊಲುಮೆ ಇತ್ತ ಬಿತ್ತಿ ಬೆಳೆದಿಹ ಪ್ರೇಮ ಅತ್ತ ಒತ್ತಿ ಸುತ್ತಿಹ ನೇಮ ಕೊರಗದಿರು...
ಹೂವು ಮುಳ್ಳಿನ ಬಗ್ಗೆ ಮುಳ್ಳು ಹೂವಿನ ಬಗ್ಗೆ ಏನು ಹೇಳುತ್ತಿದೆಯೋ ಅರ್‍ಥವಾಗುತ್ತಿಲ್ಲ. ಹಗಲು ರಾತ್ರಿಯ ಬಗ್ಗೆ ರಾತ್ರಿ ಹಗಲಿನ ಬಗ್ಗೆ ಏನು ಹೇಳುತ್ತಿದೆಯೊ ಅರ್‍ಥವಾಗುತ್ತಿಲ್ಲ. ನಗು ಅಳುವಿನ ಬಗ್ಗೆ ಅಳು ನಗುವಿನ ಬಗ್ಗೆ ಏನು...
ಕಾಮನಬಿಲ್ಲು ಅಷ್ಟೂ ಬಣ್ಣಗಳನ್ನು ಚೆಲ್ಲಿತು ನನಗೆ ನಾನೆ ಕೇಳಿಕೊಂಡೆ ನಿನಗೆ ಯಾವ ಬಣ್ಣ ಇಷ್ಟ? ಗೊರಟೆ, ಗುಲಾಬಿ, ಸೇವಂತಿಗೆ ದಾಸವಾಳ, ಕನಕಾಂಬರ, ಮಲ್ಲಿಗೆ ಹೆಣೆದು ನಿಂತವು ಅನ್ನಿಸಿತು: ಆಯ್ಕೆ ಬಹಳ ಕಷ್ಟ. ೨ ಹುಲಿ,...