ರುಮು ರುಮು ಗಾಳಿ ಬೀಸಿತು
ಝಳ ಝಳ ನದಿ ಹರಿಯಿತು
ತೊಟ ತೊಟ ಹನಿ ಉದುರಿತು
ಮಿಣ ಮಿಣ ತಾರೆ ಮಿನುಗಿತು.

ಏಯ್! ಯಾರಲ್ಲಿ?
ಇದೆಲ್ಲಾ ಯಾಕೆ ನಡೆಯುತಿದೆ ಇಲ್ಲಿ?

ಘಮ ಘಮ ಹೂ ಪರಿಮಳಿಸಿತು
ಧಗ ಧಗ ಬೆಂಕಿ ಉರಿಯಿತು
ಪಟ ಪಟ ರೆಕ್ಕೆ ಬೀಸಿತು
…..ಹಕ್ಕಿ ಹಾರಿತು.

ಏಯ್! ಯಾರಲ್ಲಿ?
ಇದೆಲ್ಲಾ ಯಾಕೆ ನಡೆಯುತಿದೆ ಇಲ್ಲಿ?!

ಯಾಕೆ? ಯಾಕೆ?

ದೂರದಲ್ಲಿದ್ದ ಬೆಟ್ಟ ಕಿವಿಗೊಟ್ಟು
ಮಾರುತ್ತರ ನೀಡಿತು;

ಯಾಕೆ…. ಯಾಕೆ…ಕೆ…ಕೆ…ಕೆ
*****