Home / ಕನ್ನಡ ಕಾದಂಬರಿ

Browsing Tag: ಕನ್ನಡ ಕಾದಂಬರಿ

ಸುಮಾರು ಐದು ಗಂಟೆಯಿರಬಹುದು. ಮೋಹನೆಯು ಕಸೂತಿಯ ಕೆಲಸ ವನ್ನು ಮಾಡುತ್ತ ಕುಳಿತಿದ್ದಾಳೆ. ಮನಸ್ಸೆಲ್ಲ ಎಲ್ಲೋ ಹೋಗಿದೆ. ಯಾವ ಕೆಲಸ ಮಾಡುವುದಕ್ಕೂ ಇಷ್ಟವಿಲ್ಲ. ಯಾವುದಕ್ಕೂ ಬೇಸರ, ಮನೆಯಲ್ಲಿ ವೀಣಾ ಇಲ್ಲದಿದ್ದರೆ ನೀನೇ ಎನ್ನುವವರಿಲ್ಲ. ತಲೆ ಒಡೆದರೂ...

ಮೇರಿಯು ಈ ದಿನ ಮನೆಬಿಟ್ಟು ಹೊರಗೇ ಹೋಗಿಲ್ಲ. ಮನೆಯಲ್ಲೂ ತನ್ನ ರೂಮು ಹೊರಗೆ ಹೋಗಿಲ್ಲ. ಮನೆಯ ಮುಂದೆ ಸುತ್ತಲೂ ಒಂದು ಸಣ್ಣ ಬಿಟ್ಟು ಕಾಂಪೌಂಡು, ಅದರ ತುಂಬಾ ಹೂವಿನ ಗಿಡಗಳು. ಮನೆಗೆ ಎರಡು ಗೇಟುಗಳು. ಒಂದು ಸಣ್ಣ ಗೇಟು. ಇನ್ನೊಂದು ಕಾರು ಬರುವುದಕ್...

ಪ್ರಾಣೇಶನಿಗೆ ದೊಡ್ಡ ಯೋಚನೆಯಾಗಿದೆ: “ರಮೇಶನು ಬುದ್ಧಿವಂತ, ವಿದ್ಯಾವಂತ, ಚೆನ್ನಾಗಿ ಸಂಪಾದಿಸಿದ ಶ್ರೀಮಂತ, ಯಾರಿಗೂ ಕೆಟ್ಟುದು ಮಾಡಿದವ ನಲ್ಲ ಮಾಡಬೇಕೆಂದುಕೊಂಡವನೂ ಅಲ್ಲ. ಆದರೂ ಅವನಿಗೇಕೆ ಇಷ್ಟು ಭಯಂಕರ ವಾದ ಸಾವು ಬಂತು? “ಜೀವನವೆನ್ನುವುದು ಇಷ...

ರಮೇಶನು ಮನೆಯವರೆಲ್ಲರನ್ನೂ ಕರೆದುಕೊಂಡು ತಿರುಪತಿಗೆ ಹೋಗಿದ್ದನು. ಬಲವಂತವಾಡಿದರೂ ಪ್ರಾಣೇಶನು ಹೋಗಲಿಲ್ಲ. ಹೊಸದಾಗಿ ಆರಂಭಿಸಿರುವ ಕನ್ಯಾಮಂದಿರವನ್ನು ನೋಡಿಕೊಳ್ಳುವ ನೆಪದಿಂದ ಅವನು ಹಿಂದೆಯೇ ನಿಂತಿದ್ದನು. ಆದರೆ ಅವನಿಗೆ ಗೊತ್ತಿತ್ತು ಇನ್ನೇನೋ ಪ...

ಸಾಹಿತಿ ಸುಂದರಯ್ಯನವರಿಗೆ ಪುಸ್ತಕದ ಬಾಬು ಮುಂಗಡ ಹಣವನ್ನು ಸಂಗಪ್ಪ ಕೊಟ್ಟುಬಿಟ್ಟ. ಆ ಸಂದರ್ಭದಲ್ಲಿ ಸುಂದರಯ್ಯ ಶಾನುಭೋಗರು ಮತ್ತು ಸಂಗಪ್ಪ ಲೋಕಾಭಿರಾಮವಾಗಿ ಮಾತಾಡ್ತ ಇದ್ದಾಗ ಸುಂದರಯ್ಯ ಹೇಳಿದರು: “ಸಂಗಪ್ನೋರೆ ನೀವು ನಿಜವಾಗ್ಲೂ ಸಮಾಜ ಸೇವೆಗೇ ...

ರಮೇಶ್ ಬೆಳಗೆದ್ದು ಕಾಫಿ ತೆಗೆದುಕೊಂಡು ಕ್ಷೌರ ಮಾಡಿಕೊಳ್ಳುತ್ತ ಕುಳಿತಿದ್ದಾನೆ. ಕ್ಲಾರ್ಕ್ ನರಸಿಂಹಯ್ಯನು ಬಂದು ಕಾಣಿಸಿಕೊಂಡನು. “ಏನ್ರಿ, ನಿಮಗೊಂದು ವಿಚಾರ ಹೇಳಬೇಕೂಂತಿದ್ದೆ. ನೀವು ಒಂದು ಎಂಟು ದಿನ ಬಿಟ್ಟುಕೊಂಡು ಪಿಳ್ಳೇಗೌಡನ ಎಸ್ಟೇಟಿಗೆ ಹೋ...

ಸಂಗಪ್ಪ ಇಷ್ಟೆಲ್ಲ ಮಾಡ್ತಿರುವಾಗ ನಿಮ್ಮ ರಾಜೇಂದ್ರನ ಬಳಗ ಎಲ್ಲಿ ಹೋಯ್ತು ಲೇಖಕರೆ ಅಂತ ನೀವು ಪ್ರಶ್ನೆ ಹಾಕಬಹುದು; ಜೊತೆಗೆ ಅವರಿಗೆ ನಿಮ್ಮ ಈ ಬರವಣಿಗೇಲಿ ಸಂಗಪ್ಪನಷ್ಟೂ ಅವಕಾಶ ಇಲ್ಲ ಅಂತಲೂ ನೀವು ಕೇಳಬಹುದು. ನಿಮ್ಮ ಎರಡು ಪ್ರಶ್ನೆಗಳೂ ಪ್ರಾಮಾಣ...

ಪಿಳ್ಳೇಗೌಡರು ಹೆಸರುವಾಸಿಯಾದ ಕಾಫಿ ಪ್ಲಾಂಟರು. ಅವರ ತೋಟ ಬಾಬಾಬುಡನ್ ಗಿರಿಗಳಲ್ಲೆಲ್ಲಾ ಬಹಳ ದೊಡ್ಡದು. ಯೂರೋಪಿಯನ್ ಪ್ಲಾಂಟರ್‌ಗಳು ಕೂಡ ಅವರಿಗೆ ಗೌರವ ಕೊಡುವರು. ಅವರ ದೇಹ ದೊಡ್ಡದು, ಗಂಟಲು ದೊಡ್ಡದು, ಹೊಟ್ಟೆ ದೊಡ್ಡದು, ಮನಸ್ಸು ದೊಡ್ಡದು; ಎಲ...

ಬೆಳಗ್ಗೆ ಎದ್ದವರು ಎದ್ದ ಹಾಗೆ ಶಾನುಭೋಗರು ಸಂಗಪ್ಪನ ಮನೆಗೆ ಬಂದರು. ಸಂಗಪ್ಪ ಶಯನಗೃಹವನ್ನಿನ್ನೂ ಬಿಟ್ಟಿರಲಿಲ್ಲ. ಅವನ ಹೆಂಡತಿಗೆ ಶಾನುಭೋಗರ ಮೇಲೆ ಸಿಟ್ಟೇ ಬಂದಿತು. ರಾತ್ರಿ ಸಂಗಪ್ಪ ಅದೆಲ್ಲಿ ಹೋಗಿದ್ದನೊ ಬೆಳಗಿನ ಜಾವದಲ್ಲಿ ಮನೆಗೆ ಬಂದಿದ್ದ. ಯ...

ವೀಣಾ ತಾತನಿಗೆ ಮೋಹದ ಮೊಮ್ಮಗಳು. ಒಂದು ಗಳಿಗೆ ಮುದುಕ ಅವಳನ್ನು ಬಿಟ್ಟಿರಲಾರ. ತಂದೆತಾಯಿಗಳ ಜೊತೆಯಲ್ಲಿ ಒಂದು ದಿನ ಸಿನಿಮಾಕ್ಕೆ ಹೋಗಿ ಬಂದರೆ ಅಲ್ಲಿ ತಾನು ಕಂಡುದು ಕೇಳಿದ್ದು ಎಲ್ಲಾ ಅವನಿಗೆ ಎರಡು ದಿನ ಹೇಳುವಳು. ಮುದುಕನಿಗೆ ಸಿನಿಮಾ ಬೇಡ. “ಛೇ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...