ಲಿಂಗಮ್ಮನ ವಚನಗಳು – ೨೧

ಬಂಡಿಯ ಮೇಗಣ ಹೆಳವನಂತೆ, ಕಂಡಕಂಡ ಕಡೆಗೆ ಹಲುಬಿದರೆ, ನಿಮಗೆ ಬಂದುದೇನಿರೋ? ಈ ಮಹಾಘನವನರಿಯದನ್ನಕ್ಕ. ಹಾಡಿದರಿಲ್ಲ, ಹರಸಿದರಿಲ್ಲ, ಕೇಳಿದರಿಲ್ಲ. ಏನ ಮಾಡಿದರು ವಾಯಕ್ಕೆ ವಾಯವೆಂದರು ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. ***** ಸಂಗ್ರಹ: ರಾ|| ಸಾ|| ಫ....

ಲಿಂಗಮ್ಮನ ವಚನಗಳು – ೨೦

ಒಡಕ ಮಡಿಕೆಯಂತೆ ಒಡೆದು ಹೋಗುವ, ಹಡಿಕಿಕಾಯವ ನೆಚ್ಚಿ, ತಟತಟನೆ ತಾಗಿ, ಮಠದ ಬೆಕ್ಕಾಗಿ ತಿಟ್ಟನೆ ತಿರುಗಿ, ಬಟ್ಟೆಯ ಲಿಕ್ಕಿ ಕಡಿವ ಕಳ್ಳನನರಿಯದೆ, ತಿಂಬ ಹುಲಿಯನರಿಯದೆ, ಒಡವೆಯ ಗಳಿಸಿಹೆನೆಂದು ಒಡೆಯನ ಮರೆದು, ತನ್ನ ಮಡದಿಮಕ್ಕಳಿಗೆಂದು ಅವರ...

ಲಿಂಗಮ್ಮನ ವಚನಗಳು – ೧೯

ಮರ್ತ್ಯದ ಮನುಜರು ಸತ್ತರೆನುತ್ತ, ಕತ್ತೆಲೆಯೊಳು ಮುಳುಗಿ, ಈ ಮಾತು ಕಲಿತುಕೊಂಡು ತೂತು ಬಾಯೊಳಗೆ ನುಡಿದು ಕಾತರಿಸಿ ಕಂಗೆಟ್ಟು, ಹೇಸಿಕೆಯ ಮಲದ ಕೋಣನ ಉಚ್ಚೆಯಬಾವಿಗೆ ಮಚ್ಚಿ ಕಚ್ಚಿಯಾಡಿ, ಹುಚ್ಚುಗೊಂಡು ತಿರುಗುವ ಕತ್ತೆ ಮನುಜರ ಮೆಚ್ಚರು ನಮ್ಮ...

ಲಿಂಗಮ್ಮನ ವಚನಗಳು – ೧೮

ಮರ್ತ್ಯದ ಮನುಜರು ತಾವು ಸತ್ಯರು ಸತ್ಯರು ಎನುತಿಪ್ಪರು. ಮತ್ತೆಮತ್ತೆ ಮರಳಿ, ಮಲಮೂತ್ರ ಕೀವಿನ ಕೋಣದ ಉಚ್ಚೆಯ ಬಚ್ಚಲ ಮೆಚ್ಚಿ. ಹುಚ್ಚುಗೊಂಡು ತಿರುಗುವ ಕತ್ತೆ ಮನುಜರ ಮೆಚ್ಚರು ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. ***** ಸಂಗ್ರಹ: ರಾ||...

ಲಿಂಗಮ್ಮನ ವಚನಗಳು – ೧೭

ಅಯ್ಯ, ಏನೇನು ಇಲ್ಲದ ಬಯಲ ದೇಹಕ್ಕೆ, ತಾಮಸವ ಮುಂದು ಮಾಡಿ, ಹೀಗೆ ಕಟ್ಟಿತ್ತಲ್ಲ ಜಗವೆಲ್ಲ. ಅದೇನು ಕಾರಣವೆಂದರೆ, ಸುಮುಖನ ಕಡೆಗಿತ್ತು ಜಗದ ರಚನೆಯ ನೋಡಿತ್ತು. ಇಚ್ಛೆಯ ಮಚ್ಚಿತ್ತು. ಅಂಗಸುಖವ ಬಯಸಿತ್ತು. ಕಂಗಳ ಕಾಮವನೆ ಮುಂದು...

ಲಿಂಗಮ್ಮನ ವಚನಗಳು – ೧೬

ನರರ ಬಿಡೆನು, ಸುರರ ಹಾಡೆನು. ಕರಣಂಗಳ ಹರಿಯಬಿಡೆನು. ಕಾಮನ ಬಲಿಗೆ ಸಿಲ್ಕೆನು. ಮರವೆಗೊಳಗಾಗೆನು. ಪ್ರಣವ ಪಂಚಾಕ್ಷರಿಯನೆ ಜಪಿಸಿಹೆನೆಂದು ತನುವ ಮರೆದು ನಿಜಮುಕ್ತಳಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. ***** ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ

ಲಿಂಗಮ್ಮನ ವಚನಗಳು – ೧೫

ಕಾಯವೆಂಬ ಕದಳಿಯನೆ ಹೊಕ್ಕು, ನೂನ ಕದಳಿಯ ದಾಂಟಿ, ಜೀವಪರಮನ ನೆಲೆಯನರಿದು, ಜನನಮರಣವ ಗೆದ್ದು, ಭವವ ದಾಂಟಿದಲ್ಲದೆ, ಘನವ ಕಾಣಬಾರದೆಂಬರು ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. ***** ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ

ಲಿಂಗಮ್ಮನ ವಚನಗಳು – ೧೪

ತನು ನಷ್ಟವಾದರೇನಯ್ಯ, ಮನ ನಷ್ಟವಾಗದನ್ನಕ್ಕ? ವಾಕ್ಕು ನಷ್ಟವಾದರೇನಯ್ಯ, ಬೇಕುಬೇಡೆಂಬುದನಳಿಯದನ್ನಕ್ಕ? ಅಂಗ ಸುಖ ನಷ್ಟವಾದಡೇನಯ್ಯ, ಕಂಗಳ ಪಟಲ ಹರಿಯದನ್ನಕ್ಕ? ಮನ ಮುಗ್ಧವಾದಡೇನಯ್ಯ, ಅಹಂಮೆಂಬುದ ಬಿಡದನ್ನಕ್ಕ? ಇವೆಲ್ಲರೊಳಗಿರ್ದವೆಲ್ಲ ನೆನಿಸಿಕೊಂಬವರ ನುಡಿಯ ಒಲ್ಲದು ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. *****...

ಲಿಂಗಮ್ಮನ ವಚನಗಳು – ೧೩

ಕೈಲಾಸ ಮರ್ತ್ಯಲೋಕವೆಂಬರು. ಕೈಲಾಸವೆಂದರೇನೋ? ಮರ್ತ್ಯವೆಂದರೇನೋ? ಅಲ್ಲಿಯು ನಡೆಯು ಒಂದೆ, ಇಲ್ಲಿಯು ನಡೆಯು ಒಂದೆ. ಅಲ್ಲಿಯ ನುಡಿಯು ಒಂದೆ, ಇಲ್ಲಿಯ ನುಡಿಯು ಒಂದೆ ಕಾಣಿರಯ್ಯ ಎಂಬರು. ಕೈಲಾಸದವರೆ ದೇವರ್ಕಳೆಂಬರು. ಮರ್ತ್ಯಲೋಕದವರೆ ಮಹಾಗಣಂಗಳೆಂಬರು. ಸುರಲೋಕದೊಳಗೆ ಸಾಸಿರ ಕಾಲಕ್ಕಲ್ಲದೆ,...

ಲಿಂಗಮ್ಮನ ವಚನಗಳು – ೧೨

ಬ್ರಹ್ಮಾಂಡದಲ್ಲಿ ಹುಟ್ಟಿದವರೆಲ್ಲ ಭವಬಂಧನಕ್ಕೊಳಗಾದರಯ್ಯ. ನಿಮ್ಮ ನಂಬಿದ ಸದ್ಭಕ್ತಮಹೇಶ್ವರರು ಭವಬಂಧನವನೆ ಹಿಂಗಿ ಮರಣ ಬಾಧೆಯನೆ ಗೆದ್ದು, ಕರಣಿಂಗಳ ಸುಟ್ಟು, ಅರಿವ ಮನವ ನಿಲಿಸಿ, ಆನಲ ಪವನ ಗುಣವರತು, ಜನನಮರಣ ವಿರಹಿತವಾದ ಶರಣರ ಭವಭಾರಿಗಳೆತ್ತ ಬಲ್ಲರು ನಿಮ್ಮ...