ಜಂಗಮ ಜಡವಾದೊಡನ್ನ ಸಂಭ್ರಮ ಸಾಧ್ಯವೇ?

ಸ್ವಂತ ಕೃಷಿ ಸಂಬಂಧದುದ್ಯೋಗ ಗೌರವಕ್ಕೆ ಕುಂದೆಂದು ಬಂದಿಹುದನೇಕ ಬೂಟು ಕೋಟಿನುದ್ಯೋಗಗ ಳಿಂದವರಿವರ ಕುಂತಲ್ಲೇ ದುಡಿಸಲಿಕೆ ತುಂಬ ಸಂಬಳವಿದಕೆ ಮೇಲಧಿಕ ಗೌರವಾರೈಕೆ ಕುಂತಲ್ಲೇ ಸಂಶೋಧನೆಗಳನ್ನ ಬಂದುದುರಲಿಕೆ - ವಿಜ್ಞಾನೇಶ್ವರಾ *****
ವಚನ ವಿಚಾರ – ಕೈಲಾಸ

ವಚನ ವಿಚಾರ – ಕೈಲಾಸ

ಕಾಯಕದಲ್ಲಿ ನಿರತನಾದಡೆ ಗುರುದರ್ಶನವಾದಡೂ ಮರೆಯಬೇಕು ಲಿಂಗಪೂಜೆಯಾದಡೂ ಮರೆಯಬೇಕು ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು ಕಾಯಕವೆ ಕೈಲಾಸವಾದ ಕಾರಣ ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು ಆಯ್ದಕ್ಕಿ ಮಾರಯ್ಯನ ವಚನ. ಕಾಯಕವೆ ಕೈಲಾಸ ಅನ್ನುವ ಮಾತನ್ನು ಹೇಳಿದವ ಆಯ್ದಕ್ಕಿ...

ತಪ್ಪಾಗಬಹುದು ! ತಪ್ಪನೊಪ್ಪವೆನಬಹುದೇ?

ಒಪ್ಪವೀ ಜಗವು ಇಲ್ಲಿರ್‍ಪೆಲ್ಲ ಜೀವಿಯುಂ ತಪ್ಪದೀ ಜಗದ ನಿಯಮದೊಳನ್ನ ಪಡೆಯು ತಿರ್‍ಪುದಿದನು ಕಂಡಾದಿ ಋಷಿಗಳುಸುರಿದ ವೇದ ವೊಪ್ಪುವ ಕೃಷಿಯ ಮೀರಿರಲೆಲ್ಲೆಡೆಗಲ್ಲೋಲಕಲ್ಲೋಲ ತಪ್ಪನಿನ್ನೊಂದು ತಪ್ಪಿನಲಿ ತಿದ್ದುವುದ್ಯೋಗಕಿದು ಕಾಲವಾಯ್ತಲಾ - ವಿಜ್ಞಾನೇಶ್ವರಾ *****
ವಚನ ವಿಚಾರ – ಹೆಸರು ಹೊತ್ತು ತಿರುಗುವವರು

ವಚನ ವಿಚಾರ – ಹೆಸರು ಹೊತ್ತು ತಿರುಗುವವರು

ಕಾಗೆಯ ಮರಿ ಕೋಗಿಲೆಯಾಗಬಲ್ಲುದೆ ಆಡಿನ ಮರಿ ಆನೆಯಾಗಬಲ್ಲುದೆ ಸೀಳುನಾಯಿ ಸಿಂಹದ ಮರಿಯಾಗಬಲ್ಲುದೆ ಅರಿವು ಆಚಾರ ಸಮ್ಯಜ್ಞಾನವನರಿಯದೆ ನಾಮವ ಹೊತ್ತುಕೊಂಡು ತಿರುಗುವ ಗಾವಿಲರ ಮುಖವ ನೋಡಲಾಗದು ಆಮುಗೇಶ್ವರಾ [ಗಾವಿಲ-ಹಳ್ಳಿಗ, ಅಶಿಕ್ಷಿತ] ಆಮುಗೆ ರಾಯಮ್ಮನ ವಚನ. ಅರಿವು,...

ಸ್ವಂತ ದುಡಿದನ್ನವಿಲ್ಲದೆ ಸಾವಯವ ಮೊಹರಿಂದೇನಕ್ಕು ?

ಸ್ವಂತದುದ್ಯೋಗ, ಮಡದಿ, ಮನೆ, ಮಕ್ಕಳೆನ್ನುತಲೊಂದು ಸುಖದ ಕೋಟೆಯ ಬಲಿವವಸರದೊಳೊಂದಷ್ಟು ಸಾವಯವ ಮೊಹರಿನನ್ನವನು ಕೊಂಡೊಡೇನಕ್ಕು? ಸಾವಯವವೆಂದೊಡದು ಬರಿ ಯಕ್ಷಿಣಿಯ ಹಣ್ಣಕ್ಕು ಸುಮ್ಮನಷ್ಟು ಹೊತ್ತಿನೊಳೊಂದಷ್ಟು ಭ್ರಾಮಕದ ಮಜವಿಕ್ಕು - ವಿಜ್ಞಾನೇಶ್ವರಾ *****
ವಚನ ವಿಚಾರ – ದುಡ್ಡು ಎಂಬ ನಾಯಿ

ವಚನ ವಿಚಾರ – ದುಡ್ಡು ಎಂಬ ನಾಯಿ

ಕಾಂಚನವೆಂಬ ನಾಯ ನಚ್ಚಿ ನಿಮ್ಮ ನಾನು ಮರೆವೆನಯ್ಯಾ ಕಾಂಚನಕ್ಕೆ ವೇಳೆಯಲ್ಲದೆ ಲಿಂಗಕ್ಕೆ ವೇಳೆಯಿಲ್ಲ ಹಡಿಕೆಗೆ ಮೆಚ್ಚಿದ ಸೊಣಗ ಅಮೃತದ ರುಚಿಯ ಬಲ್ಲುದೆ ಕೂಡಲಸಂಗಮದೇವಾ [ಕಾಂಚನ-ಚಿನ್ನ, ಹಡಿಕೆ-ಎಲುಬು, ಸೊಣಗ-ನಾಯಿ] ಬಸವಣ್ಣನ ವಚನ. ದುಡ್ಡು ಎಂಬ ನಾಯಿಯನ್ನು...

ಜೀವ ಜಗಕೆಮ್ಮ ಜಡ ಯಂತ್ರ ಬಲ ಬೇಕೇ ?

ನಾವೇನೆ ಮಾಡಿದೊಡದು ನಿರ್ಜೀವವಿರುತಿಲ್ ಜೀವ ಜಗವನಂತಿಮದಿ ಕೆಡಿಸುತಿರಲ್ ಸಾವಯವವೆನದಿನ್ನು ಅನ್ಯ ದಾರಿಗಳಿಲ್ಲ ಸಾವಯವವೆಂದೊಡದು ಕೊಂಡು ತಿನ್ನುವುದಲ್ಲ ಅವಯವಗಳೆಮ್ಮದಮಗಾಗಿ ದುಡಿವ ಬಲ - ವಿಜ್ಞಾನೇಶ್ವರಾ *****
ವಚನ ವಿಚಾರ – ಕಲ್ಲಿನಲಿ ಕಠಿಣ

ವಚನ ವಿಚಾರ – ಕಲ್ಲಿನಲಿ ಕಠಿಣ

ಕಲ್ಲಿನಲ್ಲಿ ಕಠಿಣ ಖುಲ್ಲರಲ್ಲಿ ದುರ್ಗುಣ ಬಲ್ಲವರಲ್ಲಿ ಸುಗುಣ ಉಂಟೆಂದೆಲ್ಲರೂ ಬಲ್ಲರು ಇಂತೀ ಇವು ಎಲ್ಲರ ಗುಣ ಅಲ್ಲಿಗಲ್ಲಿಗೆ ಸರಿಯೆಂದು ಗೆಲ್ಲ ಸೋಲಕ್ಕೆ ಹೋರದೆ ನಿಜವೆಲ್ಲಿತ್ತು ಅಲ್ಲಿಯೆ ಸುಖವೆಂದನಂಬಿಗ ಚೌಡಯ್ಯ [ಖುಲ್ಲರಲ್ಲಿ-ದುಷ್ಟರಲ್ಲಿ] ಅಂಬಿಗ ಚೌಡಯ್ಯನ ವಚನ....

ಯಾಕಾಧುನಿಕ ಜನಕಿಷ್ಟು ಕಷ್ಟವೋ ಶಿಷ್ಟ ಕೃಷಿಯೆನ್ನಲಿಕೆ?

ಪ್ರಕೃತಿ ಪರವಾಗದೊಡಿತ್ತ ಅಧ್ಯಾತ್ಮ ತತ್ತ್ವಜ್ಞಾನವೆಂದೊಡಂ ಸೊಕ್ಕಿನೊಳತ್ತ ವಿಜ್ಞಾನವೆಂದೊಡಂ ಏನು ಪುರುಷಾರ್ಥ? ಪ್ರಕೃತಿಪರ ಜೀವನಕಿರ್‍ಪುದದೊಂದೆ ಕೃಷಿ ಕ್ಷೇತ್ರ ಯುಕ್ತದೊಳನ್ನಾರೋಗ್ಯ ಐಶ್ವರ್‍ಯವಾರಾಮ ಇಲ್ಲಿಹುದು ಎಕ್ಕಸಕ್ಕವಾಗದಂದದೊಳಿಲ್ಲಿ ವಿಜ್ಞಾನವಾಧ್ಯಾತ್ಮ ಬೆರೆಯುವುದು - ವಿಜ್ಞಾನೇಶ್ವರಾ ***** ಎಕ್ಕಸಕ್ಕ=ಸಿಕ್ಕಾಪಟ್ಟೆ
ವಚನ ವಿಚಾರ – ಕಲಿಯಬಾರದು

ವಚನ ವಿಚಾರ – ಕಲಿಯಬಾರದು

ಕಲಿಯಬಾರದು ಕಲಿತನವನು ಕಲಿಯಬಾರದು ವಿವೇಕಸಹಜವನು ಕಲಿಯಬಾರದು ದಾನಗುಣವನು ಕಲಿಯಬಾರದು ಸತ್ಪಥವನು ಸಕಳೇಶ್ವರದೇವಾ ನೀ ಕರುಣಿಸಿದಲ್ಲದೆ [ಕಲಿಯಬಾರದು-ಕಲಿಯಲು ಬಾರದು, ಅಸಾಧ್ಯ] ಸಕಲೇಶಮಾದರಸನ ವಚನ. ಈ ವಚನದ ಮೊದಲ ನಾಲ್ಕು ಸಾಲುಗಳಲ್ಲಿರುವ `ಕಲಿಯಬಾರದು' ಎಂಬ ಮಾತನ್ನು ನಿಷೇಧದ...