ಬೆಂಕಿಯ ಮೂಲ

ಉರಿಯುತ್ತಿದೆ ಬೆಂಕಿ ಧಗಧಗ ಕೆನ್ನಾಲಿಗೆಯ ಚಾಚಿ ಭಗ ಭಗ ಮುಗಿಲೆತ್ತರ ವ್ಯಾಪಿಸಿ ಆಕ್ರಮಿಸುತ್ತಿದೆ ಉದ್ದಗಲ ನೋಡಲೆಷ್ಟು ಚೆನ್ನ ಸಪ್ತ ವರ್ಣಗಳ ನರ್ತನ ಕಣ್ತುಂಬಿಸಿ ಮನ ತುಂಬಿಸಿ ಆನಂದಿಸುವ ಪರಿ ಕೇಕೆ ಹಾಕಿದ ಕೂಗಿಗೆ ಮುಗಿಲಲ್ಲಿ...

ಪಯಣವೆತ್ತ?

ಅಂದು, ಸ್ವಾತಂತ್ರ್ಯ ಬೇಕೆಂದು ನಮ್ಮ ದೇಶ ನಮಗೇ ಬೇಕೆಂದು ಸ್ವದೇಶೀ ಚಳವಳಿಮಾಡಿ ಹೊರಗಟ್ಟಿದರು ವಿದೇಶೀಯರ ನಮ್ಮ ಹಿರಿಯರು, ದೇಶಕ್ಕಾಗೇ ಜೀವತೆತ್ತವರು. ಇಂದು, ವಿದೇಶಿ ಬಂಡವಾಳ ಹೂಡಿಕೆದಾರರ ನಾವೇ ಆಹ್ವಾನಿಸಿ ಹರಾಜು ಹಾಕಲು ಸಿದ್ಧರಾಗಿರುವೆವು ನಮ್ಮ...

ರಾಜಕಾರಣ

ರಾಜಕಾರಣವೆಂದರೆ ಏನೆಂದುಕೊಂಡಿರಿ ವಿನಾಕಾರಣ ಹೊಡೆದಾಟ ಬಡಿದಾಟ ದೊಂಬರಾಟ ಕಣ್ಣು ಹಾಯಿಸಿ ತಿಹಾಸದತ್ತ ಗದ್ದುಗೆಯೇರಲು ಅನಿವಾರ್ಯ ಕೊಲೆ, ಸುಲಿಗೆ ರಕ್ತಪಾತ ಚಾಣಕ್ಯನ ನೀತಿತಂತ್ರ ಹಣ ಅಧಿಕಾರ ದಾಹಕ್ಕೆ ಮುಗ್ಧ ಪ್ರಾಣಗಳ ಬೆಲೆ ಮಾನವೀಯ ಸಂಬಂಧಗಳು ಬತ್ತಿ...

ಯಾವ ಜನ್ಮದ ವೈರಿ ನೀನು?

ಹೊತ್ತು ಏರುವ ಮುನ್ನ ಮುತ್ತು ಸುರಿಯುವ ಮುನ್ನ ಅಸ್ತಂಗತನಾದನು ರವಿಯು. ಕತ್ತಲಾಯಿತು ಜೀವನ. ಬರಿದಾಯಿತು ಒಡಲು ಬತ್ತಿ ಹೋಯಿತು ಒಲವು ನಿನ್ನ ನೆನಪಲ್ಲಿ ಕೊಚ್ಚಿ ಹೋಯಿತು ಜೀವಿಸುವ ನಿಲುವು. ಯಾವ ಜನ್ಮದ ವೈರಿ ನೀನು...

ಶಾಂತಿಮಂತ್ರ

ಶಾಂತಿ ಶಾಂತಿ ಶಾಂತಿ ಶಾಂತಿ ಮಂತ್ರ ಊದಿದ ಬಾಯಿಗಳಲ್ಲಿಂದು ರಣಕಹಳೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಗುಬ್ಬಿಯ ಮುಂದೆ ಬ್ರಹ್ಮಾಸ್ತ್ರ ಸರ್ವಾಧಿಕಾರದ ಪರಮಾವಧಿ ರಕ್ಷಕರೇ ಭಕ್ಷಕರಾಗಿ ನುಡಿಸಿದರು ಭೀಭತ್ಸಗಾನ ದೇವರಿಗೂ ಸಡ್ಡು ಹೊಡೆದು ಮಾಡಿದರು...

ನ್ಯಾಯ

ವಾಲ್ಮೀಕಿ ಕುಮಾರವ್ಯಾಸ ಯಾರೂ ಒದಗಿಸಲಿಲ್ಲ ಹೆಣ್ಣಿಗೆ ನ್ಯಾಯ. ಅದಕ್ಕೇ ತಪ್ಪಲಿಲ್ಲ ಅವಳಿಗೆ ಸತತ ಅನ್ಯಾಯ. ಪತಿಯೇ ಪರದೈವವೆಂದು ಸೀತೆಯ ಶೋಷಿಸಿದರು; ಸಹೋದರ ಭಕ್ತಿಯೆಂದು ಊರ್ಮಿಳೆಯ ಶೋಷಿಸಿದರು; ಮಲತಾಯಿಯೆಂದು ಕೈಕೇಯಿಯ ಶೋಷಿಸಿದರು; ಸೇಡು ಎಂದು ಶೂರ್ಪನಖಿಯ...

ಮನವೆಂಬ ಮರ್ಕಟ

ಹರಿಯಗೊಡದಿರು ಮನವೇ ಎಲ್ಲೆಂದರಲ್ಲಿ ಮನವು ಮರ್ಕಟವೆಂಬ ಮಾತು ನಿಜವಿಲ್ಲಿ. ಓಡುವುದು ನದಿಯಂತೆ ಬೀಸುವ ಗಾಳಿಯಂತೆ ಕತ್ತಿಯ ಅಲುಗಿನಂತೆ ಸುಳಿಯುವುದು ಕ್ಷಣ ಕ್ಷಣ ಚಪಲ ಚಿತ್ತವ ಹಿಡಿದು ಕಟ್ಟುವ ಇಂದ್ರಿಯ ನಿಗ್ರಹ ಶಕ್ತಿ ಇದ್ದರೆ ನೀನಾಗುವೆ...

ನಾಗರೀಕತೆ

ಎಲ್ಲಿ ಹೋಗಿವೆ ರೀತಿ ನೀತಿಗಳು ಎಲ್ಲಿ ಹೋಗಿವೆ ಮೌಲ್ಯಗಳು? ಎಲ್ಲಿ ಹೋಗಿದೆ ಸೌಜನ್ಯ ಮಾನವೀಯತೆಯ ಮೊಳಗುವ ಪಾಂಚಜನ್ಯ? ಹೆತ್ತವರಿಗಿಲ್ಲ ಮಕ್ಕಳು ಗುರುಗಳಿಗಿಲ್ಲ ಶಿಷ್ಯರು ಒಬ್ಬರಿಗಿಲ್ಲ ಇನ್ನೊಬ್ಬರು ಆಗುತ್ತಿದ್ದಾರೆ ಸ್ವಾರ್ಥಿಗಳು ಹೃದಯವಿಲ್ಲದ ಮಾನವರು. ಮಕ್ಕಳಿಗಿಲ್ಲ ಹೆತ್ತವರು...

ಜೀವನ್ಮುಕ್ತರು

ಅಂದು ರಾತ್ರಿ ಮಲಗಿದವರು ಏಳಲೇ ಇಲ್ಲ ಕಳಚಿ ನಡೆದರು ದೂರ ದೂರ ಬದುಕಿನ ಬವಣೆಗಳನ್ನೆಲ್ಲಾ. ವರವೋ ಶಾಪವೋ ಅವರಿಗೆ ಭೂಕಂಪ ಜನತೆ ತೋರುತಿದೆ ನಿಟ್ಟುಸಿರಿನ ಅನುಕಂಪ ಕನಸನ್ನು ಕನಸಾಗಿಯೇ ಉಳಿಸಿ ನಶ್ವರ ಬಾಳಿನ ಸತ್ಯವ...

ಆ ಹುಡುಗಿ

ಜಗಮಗಿಸುವ ಬೆಳಕಲ್ಲಿ ಜರಿಸೀರೆಯ ಭಾರಹೊತ್ತು ನಿಂತಿದ್ದಳು ಮದುಮಗಳು ಭವಿಷ್ಯದ ಕನಸುಗಳ ಹೊತ್ತು! ಸಾಕ್ಷಿಯಾಗಿದ್ದವು ಸಾವಿರಾರು ಕಣ್ಣುಗಳು ಹರಸಿದ್ದವು ನೂರಾರು ಹೃದಯಗಳು. ಪತಿಯಾಗುವವನ ಕೈ ಹಿಡಿದು ಸಪ್ತಪದಿಯ ತುಳಿವಾಗ ಅರಳಿತ್ತು ಪ್ರೀತಿ. ರಂಗಾಗಿತ್ತು ಮನಸ್ಸು ಒಲವು...