ಕೃಷಿ ಬೆಳಕಸ್ತಮಿಸಿದರೇನುಂಟು ಬದುಕು?

ಕೃಷಿ ಎಂದರದೊಂದು ಮಕ್ಕಳಾಟದವೊಲಿರಲು ರಾಶಿ ನಿಯಮಗಳದನು ಬಾಧಿಸದಿರಲು ಉಸಿರಾಟದವೊಲೆಮ್ಮ ಜೀವನದೊಳಾ ಕೃಷಿ ಇರಲು ನಿಸರ್ಗದೊಳಿಂತಪ್ಪುದಕೆಲ್ಲ ಮೂಗ ತೂರಿಸಲು ಅಸ್ತಮದುಸಿರಾಟ ಪುಸ್ಸೊತ್ತು ಯಂತ್ರದೊಳು - ವಿಜ್ಞಾನೇಶ್ವರಾ *****

ಮನವೆಂಬ ಮರ್ಕಟ

ಹರಿಯಗೊಡದಿರು ಮನವೇ ಎಲ್ಲೆಂದರಲ್ಲಿ ಮನವು ಮರ್ಕಟವೆಂಬ ಮಾತು ನಿಜವಿಲ್ಲಿ. ಓಡುವುದು ನದಿಯಂತೆ ಬೀಸುವ ಗಾಳಿಯಂತೆ ಕತ್ತಿಯ ಅಲುಗಿನಂತೆ ಸುಳಿಯುವುದು ಕ್ಷಣ ಕ್ಷಣ ಚಪಲ ಚಿತ್ತವ ಹಿಡಿದು ಕಟ್ಟುವ ಇಂದ್ರಿಯ ನಿಗ್ರಹ ಶಕ್ತಿ ಇದ್ದರೆ ನೀನಾಗುವೆ...
ವಚನ ವಿಚಾರ – ನನ್ನ ಗಂಡ ಮಿಕ್ಕವರಂತಲ್ಲ

ವಚನ ವಿಚಾರ – ನನ್ನ ಗಂಡ ಮಿಕ್ಕವರಂತಲ್ಲ

ಅವರಾರ ಪರಿಯಲ್ಲ ಎಮ್ಮ ನಲ್ಲನು ವಿಶ್ವವೆಲ್ಲ ಸತಿಯರು ಸೋಜಿಗದ ಪುರುಷನು ಅವರವರ ಪರಿಯಲ್ಲೆ ನೆರೆವನು ಅವರಿಗವರಂತೆ ಸುಖಮಯನು ನೋಡಾ ಅವರೆಲ್ಲರ ವಂಚಿಸಿ ಎನ್ನನಗಲದ ಪರಿಯ ನೋಡಾ ಕೆಳದಿ ನೀನೊಳ್ಳಿದಳಾದಡೆ ಮಹಾಮಂತ್ರವ ಜಪಿಸು ನಿನ್ನನಗಲನು ನಿನ್ನಾಣೆ...

ಸಗ್ಗದೊಡೆಯನ ಬಿಂಕ

ಜಗವನು ಬೆಳಗುವ ರವಿಯಿಹನೆಂದು, ತಣ್ಗದಿರನು ಶಿರದೊಳಗಿಹನೆಂದು, ಅಪಾರ ಸಂಪದವಲ್ಲಿಹುದೆಂದು, ಅಷ್ಟೈಶ್ವರ್ಯವು ತನಗಿಹುದೆಂದು, ಸಗ್ಗದೊಡೆಯ ತಾ ಪೇಳುವನು! ಬಲು ಬಲು ಬಿಂಕವ ತಾಳಿಹನು!! ಮೀರಿದ ಶೂರರು ಅಲ್ಲಿಹರೆಂದು, ಕುಕ್ಕುವ ಕವಿವರರಿರುತಿಹರೆಂದು, ಮುನಿವರರೆಲ್ಲರು ತನ್ನವರೆಂದು, ಕಲೆಗಳ ಕೋವಿದರಲ್ಲಿಹರೆಂದು,...