Home / Kavana

Browsing Tag: Kavana

ಹೊಸ ವರ್‍ಷವು ಬರಲಿ ದಿನ ದಿನವೂ ಪ್ರತಿ ಕ್ಷಣವೂ ಹೊಸತನವು ಬಾಳಿಗೆ ಹೊಸ ಚೈತನ್ಯವ ತರಲಿ|| ಹರುಷದಾ ಮೊಗ ಚೆಲ್ಲಿ ವರುಷದ ಕಳೆ ಚಿಗುರಿ ಮುಂಗಾರಂಚಿನ ಇಬ್ಬನಿ ಹನಿ ಪುಟಿದೇಳುವ ಕಾಮನೆ ಹೂವಾಗಲಿ|| ಚಂದ್ರಿಕೆಯಾ ಸಖಿ ಹಸೆಮಣೆಯ ಕಾಂತೆಯರು ಮುತ್ತಿನಾರತಿ...

ನಾಲ್ಕು ಮಡಿಕೆಯ ಚಪಾತಿಯೊಳಗೆ ಭಾವನೆಗಳನ್ನು ಹೂತು ಲಟ್ಟಿಸಿ ಸಮಾಧಿ ಮಾಡಿದರೂ ತವೆಯ ಮೇಲೆ ಒಂದೊಂದಾಗಿ ಕೋಪಕಾರುತ್ತ ಉಬ್ಬಿ ಕೆಣಕಿ ಬಾಯಿ ಇಲ್ಲದವಳೇ ಎನ್ನುತ್ತ ಬುಸ್ ಎಂದು ಕೈ ಸುಟ್ಟಾಗ ಮತ್ತೆ ಚುರುಕಾಗಲು ಪ್ರಯತ್ನಿಸುತ್ತವೆ…. *****...

ಬೇಲಿ ಭ್ರಮಿಸುತ್ತೆ ಬೇರ್‍ಪಡಿಸಿದಂತೆ ಮನುಜರನ್ನು ಮನ ಮನೆಗಳನ್ನು ಅವರ ನಾಡನ್ನು ಬಳ್ಳಿ ಹಬ್ಬಿಕೊಳ್ಳುತ್ತೆ ಆಶ್ರಯಿಸಿ ಬೇಲಿಯನ್ನು ಸ್ನೇಹದ ಸೇತುವೆಯಾಗಿ ಹೊಮ್ಮಿಸುತ್ತೆ ಹೂಗಳನ್ನು *****...

೧ ಮೊದಲನೆಯವಳು ಟ್ಯೂಬು ಲೈಟಿನಂತ ಸುಪ್ರಕಾಶ ಸಭ್ಯ ನಗೆ ಹೊತ್ತುಬರುತ್ತಾಳೆ. ಸುತ್ತ ಇದ್ದವರತ್ತೆಲ್ಲ ಸರ್‍ವೋಪಯೋಗಿ ಮುಗುಳ್ನಗೆ ಬೀರುತ್ತಾ, ರೋಗಿಗಳ ಎದೆಯಲ್ಲಿ ಆಸೆಯ ಬುಗ್ಗೆ ಚಿಮ್ಮಿಸುತ್ತಾ ದಡ ದಡ ಬರುತ್ತಾಳೆ. ಕಂಡ ತಕ್ಷಣ, ಅವಳ ಸಭ್ಯತೆಯ ಪರ್ವ...

ಹುರಿಹೊಸೆದ ಹಗ್ಗದಲಿ ಹಾವು ಕಂಡಿತೆ, ಪಾಪ! ಬರಿಯುಸಿರು ಬಿಟ್ಟವರೆ ಇಲ್ಲಿ ಕೇಳಿ; ತುದಿಗಾಲ ಮೇಲೇಕೆ ನಿಲ್ಲುವಿರಿ? ಬಣ್ಣದುರಿ ಹಳೆಮನೆಯ ಉರಿಸಿದರೆ ತಪ್ಪೆ ಹೇಳಿ. ಅಜ್ಜ ಮೊಮ್ಮಗು ಮಾತು ನಮಗೇಕೆ ಬಿಟ್ಟುಬಿಡಿ ಮಣ್ಣು ಹಡೆದದ್ದರಿತೆ ಪ್ರೀತಿ ನೀತಿ ; ...

ಬಾಳಿನಂದದ ರೂಪದ ಒಲವಿಂದ ವೃಂದದಲಿ ಕೂಡಿ ನಲಿದು ಬಾರೆ ಬಾರೆ ಜಗವ ತಣಿಸುತಲಿ ಕುಣಿದು ನಲಿದು ಮನವ ತಣಿಸೆ ಆನಂದದಲಿ ಗರಿಗೆದರಿ ಕೂಡಿ ಒಲಿದು ಬಾರೆ ಬಾರೆ ಬಾ ತಾಯೆ|| ಶೃಂಗಾರ ಕಾವ್ಯದಲಿ ಹೊನ್ನಕುಂಚದಲಿ ನಲಿನಾಟ್ಯ ಸಮರಸ ಭಾವದೊಲಮೆಯಲಿ ನಲಿಯೆ ಒಲಿಯೆ...

ಕ್ಷಣಕ್ಷಣದ ಆವರಣದಲ್ಲಿ ಕಣವಾಗುವ ರೊಟ್ಟಿ ಅಪಾರ ಲಭ್ಯತೆಗಳಲಿ ಅಧಿಕವಾಗುವ ಹಸಿವು ಪೂರ್ಣತೆ ಶೂನ್ಯತೆಗಳು ಏಕಕಾಲಕ್ಕೆ ರೊಟ್ಟಿಯ ಎರಡು ಮುಖಗಳು ಹಸಿವಿನೆರಡು ಆಶಯಗಳು. *****...

1...5758596061...147

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...