Home / Lakshminarayana Bhatta

Browsing Tag: Lakshminarayana Bhatta

ಎಲ್ಲ ನಿನ್ನ ಲೀಲೆ ತಾಯೆ ಎಲ್ಲ ನಿನ್ನ ಮಾಯೆ ನಿನ್ನ ಅಲ್ಲಗಳೆದ ನಮ್ಮ ಕರುಣೆಯಿಂದ ಕಾಯೆ ಕಾರಿರುಳನು ಸೀಳಿ ಬರುವ ನಿಗಿ ನಿಗಿ ಉರಿಹರಳು ನೀಲಿನಭದ ಹಾಸಿನಲ್ಲಿ ಮಣಿನೇಯುವ ಇರುಳು, ಋತು ಮೀರದೆ ಮುಗಿಲ ಗಡಿಗೆ ಉರುಳಿ ಸುರಿವ ಜಲವು ಎಲ್ಲ ನಿನ್ನ ಲೀಲೆ ತ...

ಯಾರು ಜೀವವೇ ಯಾರು ಬಂದವರು ಭಾವನೆಗಳನೇರಿ? ಒಣಗಿದೆನ್ನೆದೆಗೆ ಮಳೆಯ ತಂದವರು ಬಿಸಿಲ ತೆರೆಯ ಸೀಳಿ? ಬಾನನೀಲಿಯಲಿ ಕರಿ ಬಿಳಿ ಬಣ್ಣದ ಗಾನ ಚಿಮ್ಮಿದವರು? ಕಾನು ಮಲೆಗಳಲಿ ಚಿಗುರು ಹೂವುಗಳ ಚಪ್ಪರ ಬೆಳೆದವರು? ನಸುಕಿನ ಬೆಳಕನು ಮಂಜಿನ ತೆರೆಯಲಿ ಜಾಲಿಸಿ...

ಬಾ ಬಾ ಓ ಬೆಳಕೇ ಕರುಣಿಸಿ ಇಳಿ ನೆಲಕೆ ನೀನಿಲ್ಲದೆ ಬಾಳೆಲ್ಲಿದೆ? ಹೋಳಾಗಿದೆ ಬದುಕೇ ಕಾಡು ಕಡಲು ಬಾನು ಏನಿದ್ದೂ ಏನು? ಮೈಯೆಲ್ಲಿದೆ ಇಡಿ ಬುವಿಗೇ ಕಾಣಿಸದಿರ ನೀನು? ನಿನ್ನ ಕೃಪಾಚರಣ ಚಾಚಿ ತನ್ನ ಕಿರಣ ಸೋಂಕಿದೊಡನೆ ಸಂಚರಿಸಿದೆ ನೆಲದೆದೆಯಲಿ ಹರಣ! ...

ನೀನೆಲ್ಲೋ ನಾನೆಲ್ಲೋ ದೂರದೂರವಾಗಿ ಕಾಯುವೆವು ಕೂಡಲೆಂದು ಹೃದಯ ಭಾರವಾಗಿ ಜೊತೆಯಾಗಿರಲು ಇರುತಿತ್ತೇ ಇಂಥ ತೀವ್ರಧ್ಯಾನ? ನೆಲದ ಮಿತಿಯ ಮೀರಿದಂಥ ಸೂರ್ಯಚಂದ್ರ ಕಾಣದಂಥ ಕಲ್ಪನೆಗಳ ಯಾನ? ಇಂಥ ಪ್ರೀತಿಯೊ೦ದಕೇ ತಾಳಬಲ್ಲ ಕೆಚ್ಚು, ಬೇಡಿದೊಡನೆ ಬಾರದೆ ಹಾ...

ಹೇಳದಿದ್ದರು ನೀನು ಎಲ್ಲ ಬಲ್ಲೆನು ನಾನು ಏನಿದೆ ಎಂದು ಎದೆಯಾಳದಲ್ಲಿ; ನಿನ್ನ ಕಣ್ಣಿನೊಳೇನೊ ನೋವು ತೇಲುತ್ತಿಹುದು ಕರಿಮೋಡ ಸುಳಿದಂತೆ ಬಾನಿನಲ್ಲಿ ನೂರು ಹಳೆ ನೆನಪುಗಳು ಚೀರಿ ಹೊಮ್ಮುತ್ತಲಿವೆ ಮರವೆಯಲಿ ಹುಗಿದರೂ ಮೇಲಕೆದ್ದು; ನಮ್ಮ ಮೇಲೇ ಏಕೆ ವಿ...

ಎಂಥ ಗೋಪೀ ಕಣ್ಣೊಳೆಂಥ ಶಾಂತಿ! ಕೆನೆ ಹಾಲು ಮೈ ಚಿನ್ನ, ಸೂರ್ಯಕಾಂತಿ ಹಾಲು ಗಡಿಗೆಯ ಹೊತ್ತು ತಲೆಯ ಮೇಲೆ ಸೆರಗಿಳಿಸಿ ಬೆಡಗಲ್ಲಿ ಹೆಗಲ ಮೇಲೆ ಮುಡಿದ ಮಲ್ಲಿಗೆ ಕಂಪ ಸುತ್ತ ಹರಡಿ ನಡೆಯುವಳು ನನ್ನ ನೆಮ್ಮದಿಯ ಕದಡಿ ನಡಿಗೆಯೇ ನೃತ್ಯವಾದಂಥ ಹೆಣ್ಣು ಕಲ...

ಇಂಥ ಮಿಂಚನು ಹಿಂದೆ ಕಾಣಲಿಲ್ಲ ಇಂಥ ಮಧುಮಯ ಕಂಠ ಕೇಳಲಿಲ್ಲ ಈ ರೂಪಸಿಯ ಹೆಸರು ರಾಧೆಯಂತೆ ಹೊಳೆಯುವಳು ನಟ್ಟಿರುಳ ತಾರೆಯಂತೆ ಗೋಪಿಯರ ನಡುವೆ ಬರಲು ಇವಳು ಮಣಿಮಾಲೆಯಲ್ಲಿ ಕೆಂಪು ಹರಳು! ನನ್ನ ಆಡಿಸಲಿಲ್ಲ ಹೀಗೆ ಯಾರೂ ಸುಖಕೆ ಜೋಡಿಸಲಿಲ್ಲ ಹೀಗೆ ಯಾರೂ...

ಕಾಯಬಲ್ಲೆ ನಾ ಕೃಷ್ಣ ಗೋಪಿಯರ ಮನೆಗೆ ಹೋಗದಂತೆ ಹೇಗೆ ಕಾಯಲೇ ಗೋಪಿಯರು ಅವನ ಕಾಡದಂತೆ ? ಸಾಕಾಗಿದೆಯೆ ದಿನವೂ ಮನೆಗೆ ಬರುವರು ಗೋಪಿಯರು ಶಿಕ್ಷೆಯ ನೆಪದಲಿ ಕೃಷ್ಣನ ಬಾಚಿ ಕೆನ್ನೆಯ ಹಿಂಡುವರು! ಸೆರಗನು ಸೆಳೆದ, ಮುಡಿಯನು ಎಳೆದ ಎನುವರು ಕಳ್ಳಿಯರು ಸೆ...

ಕೃಷ್ಣ ನಮ್ಮ ಈ ಗೋಕುಲಕೆ ಬಂದುದೇಕೆ ಗೊತ್ತೇ? ನಮ್ಮ ಒಳಗಿನ ಮಿಂಚನು ಭೂಮಿಗೆ ಇಳಿಸಿ ಹೊಳೆಸಲಿಕ್ಕೆ ಬಾನಿನ ಬೆಳಕಿಗೆ ಭೂಮಿಯ ತಮವ ಗುಡಿಸಿ ಹಾಕುವಂಥ ಬಲವಿದೆ, ಹಾಗೇ ಒಲವಿದೆ ನಮ್ಮೊಳು ಸ್ವಾರ್ಥವ ಗೆಲುವಂಥ ತೆತ್ತುಕೊಳ್ಳುವ ಪ್ರೇಮವೆ ಸಾಲದು ಬಾಳಿನ ಸ...

ನಾಚಿಕೆಯೆ ಹೀಗೇಕೆ ಹಗೆಯಾಯಿತು ನನ್ನ ಉರಿಸುವ ಕ್ರೂರ ಧಗೆಯಾಯಿತು? ಹರಿಯು ತಬ್ಬಿದ್ದಾಗ ಅವನ ಚೆಲುವ ನೋಡುತ್ತ ಬೆರಗಾಗಿ ಮೂಕಳಾದೆ ನಿನ್ನ ಜೊತೆ ಮಧುರೆಗೆ ನಾನು ಕೂಡ ಬರುವೆ ಎಂದೇಕೆ ನಾ ಹೇಳದಾದೆ? ಏನು ನಿಷ್ಕರುಣಿ ಆ ಕಂಸದೂತ! ಅಕ್ರೂರನಲ್ಲ ಅವ ಕ್ರ...

1...46474849

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...