ನನ್ನೊಡನೆ ಗೆಳೆಯನನೂ ಹಿಂಡಿ ನನ್ನೆದೆಯನ್ನ

ನನ್ನೊಡನೆ ಗೆಳೆಯನನೂ ಹಿಂಡಿ ನನ್ನೆದೆಯನ್ನ, ನರಳಿಸುತ್ತಿರುವ ಆ ಹೃದಯಕ್ಕೆ ಧಿಕ್ಕಾರ, ಕೊಟ್ಟುದಲ್ಲದೆ ನನಗೆ ಚಿತ್ರಹಿಂಸೆಯ, ನನ್ನ ಮಿತ್ರನನೂ ದಾಸ್ಯಕೂಪಕ್ಕೆಳೆದ ಹುನ್ನಾರ. ಕ್ರೂರಿ ಉರಿಗಣ್ಣಿಂದ ಸೆಳೆದುದಲ್ಲದೆ ನನ್ನ ಇನ್ನೊಂದು ಆತ್ಮವನೂ ಬಲವಾಗಿ ಮುತ್ತಿರುವೆ; ಕಳಕೊಂಡು ಅವನನ್ನ...

ವಸಾಹತು ಸಾಮ್ರಾಜ್ಯ

ಅಡ್ಡಡ್ಡಲ್ಲ ಉದ್ದುದ್ದಾಗಿ ತಲೆ ಅಲುಗಾಡಿಸುತ್ತಲೇ ಇರಬೇಕು ನಿಲ್ಲಿಸಿದರೆ ಬಂತು ಬೆತ್ತ. ‘ಪಾಪ! ಇವಳೆಷ್ಟು ಮುಗ್ಧೆ’ ಹಾಗೇಽ ಇರಬೇಕು ಮಾತನಾಡಿದರೆ ಮುರಿದುಬೀಳುತ್ತವೆ ಹಲ್ಲು. ಕಣ್ಣಿಗೆ ರೆಪ್ಪೆ ಬಂದಂತೆ ನಟಿಸಬೇಕು ವರ್‍ಣಿಸಿದರೆ ಬಾಸುಂಡೆಗಳು. ಇವನೊಬ್ಬನ ಮಾತುಗಳೇ ವೇದವಾಕ್ಯಗಳು...

ಸ್ಪಂಜ್ ನೆಲ

ಅವರ ಮನೆಯಲ್ಲಿ ಮೊಗಸಾಲೆ, ಹಜಾರ, ಕೋಣೆ ಎಲ್ಲೆಡೆ ನೆಲ ಸ್ಪಂಜ್‌ನಂತೆ ರತ್ನ ಕಂಬಳಿ. ನಮ್ಮ ಮನೆಯಲ್ಲಿ ಸ್ನಾನದ ಮನೆ ಶೌಚಾಲಯದಲ್ಲಿ ಕೂಡ ನೆಲ ಸ್ಪಂಜ್‌ನಂತೆ ಪಾಚಿಯೋ ಪಾಚಿ! *****

ತೃಪ್ತಿ

ನಾನು ಕನಸುಗಳ ಕಾಣುವುದು ಬಿಟ್ಟಿದ್ದೇನೆ ಯಾಕೆಂದರೆ ಕನಸಿನ ಲೋಕವೇ ನನ್ನದಾಗಿದೆ. ಎಳೆ ಬಿಸಿಲು ಬಿಂಬಿಸುವ ಸೂರ್ಯನ ಕೆಂಪಡರಿದ ನೀಲ ಬಾನತುಂಬ ದಿನಾಲು ಬೆಳ್ಳಕ್ಕಿಗಳು ಹಾರುತ್ತಿವೆ. ಮನೆಯ ಮುಂದಿನ ಪುಟ್ಟ ಗಿಡಗಳಲಿ ಹೂವರಳಿ ದಿವ್ಯ ಮೌನದಲಿ...

ಹಸಿರ ಬಾಂದಳದ ನಡುವೆ

ಹಸಿರ ಬಾಂದಳದ ನಡುವೆ ನಸುನಾಚಿದ ನೇಸರದಾಗೆ ಉಷೆಯ ಬೆಡಗಿನಂದದಲಿ ಚಿತ್ತಾರವೆಸಗೆ ಮೂಡಿಹುದು ಕನ್ನಡ ಹೊಸತನದ ಸೆಲೆಯಲಿ ಕೆಳೆಯಾಗಿ ನಿಲುವುವಂದದಿ ಛಲವೆಸೆದ ಸೊಬಗ ನೆಲೆ ವಸುಮತಿಯ ಬೆರೆತ ಭಾವದಾ ಸುಧೆಯಾಗಿ ಮೂಡಿಹುವುದು ನೋಡ ಕನ್ನಡ ಬಾಳೆಗರಿಮೆಯ...

ಪೆರುಮಾಳನ ಕೆಂದಾವರೆ

ಪೆರುಮಾಳನ ಕೆಂದಾವರೆ ಅರಳಿದೆ ನಸುನಕ್ಕೆ! ಹರಿನೀಲದ ಬಾನೊಳಗಿನ ಸಿಂಧೂರದ ಚುಕ್ಕೆ. ನಲಿವಿನ ನಲಿನವು ತಾನೇ ತಾನಾಗಿಯೆ ಬಿಚ್ಚೆ ಏಳ್ಮಡಿ ಧಾಳಾಧೂಳಿಯ ಏಳ್ಳಣ್ಣದ ಕಿಚ್ಚೇ ಕಾರಣತನುವಿನ ಕೃತಿಯೇ ಸವಿಯೇ ಹರಿವರಿಯೇ ಮನುಹೃದಯದಿ ಚಿಗಿ ನಿಗಿನಿಗಿ ಜಿಗಿ...

ಕೆಟ್ಟು ಒಳ್ಳೆಯವನು

ಕೆಟ್ಟು ಒಳ್ಳೆಯವನು ಎಂದೆನಿಸಿಕ್ಕೊಳ್ಳುವುದಕಿಂತ ಪೆಟ್ಟುತಿಂದು ಜಾಣನಾಗುವುದಕ್ಕಿಂತ | ಹಾಗೆಯೇ ಎನ್ನ ಒಳ್ಳೆಯವನೆಂದೆನಿಸು ಛೀ...ಥೂ ಎಂದೆನಿಸದೆ ಎನ್ನ ನೀ ಬೆಳೆಸು|| ಕೆಟ್ಟಮೇಲೆ ಬುದ್ಧಿ ಬರುವುದಕ್ಕಿಂತ ಕೈಸುಟ್ಟಮೇಲೆ ಅರಿವುಮೂಡುವುದಕ್ಕಿಂತ| ಕೆಡುವ, ಕೈಸುಡುವ ಮೊದಲೇ ನೀನದನ ತಿಳಿಸೆನ್ನ ದೊರೆಯೇ...

ಗಡಿಯಲ್ಲಿ ಕಾವ್ಯ

ಸುಮ್ಮನೆ ಬಿದ್ದಿರುವ ಉದ್ದುದ್ದ ಸರಹದ್ದು ಎತ್ತೆರತ್ತರಕ್ಕೆ ಬೆಳೆದ ದೇವದಾರುಗಳು ಅಸ್ತಿತ್ವ ಅಲುಗಾಡುವ ಯಾತನೆಗಳ ಮಧ್ಯೆ ಶಬ್ದ ಮೀರಿದ ಸಂಕಟಗಳ ನುಂಗಿ ದೀರ್ಘ ಬದುಕಿನ ವಿಷಾದಗಳ ಮರೆತು ಗುನಿಗುನಿಸಿ ಹಾಡುತ್ತಿದೆ ನೋಡು ಗಡಿಯಲ್ಲಿ ಸರಹದ್ದುಗಳೇ ಇಲ್ಲದ...

ಮೂರು ಮೊಗಗಳು

ಮೂರು ಮೊಗಗಳು ಮಾತ್ರ ಎದುರಿಗೆ ಕಂಡರೂ ನಾಲ್ಕನೆಯ ಮೊಗ ಇದ್ದೇ ಇರುವುದು ಕಾಣುವುದರಾಚೆಗೇ ಕಾಣದುದು ಇರುವುದು ಕಾಣುವುದೆ ಮರೆ ಕಾಣದಿರುವುದಕೆ ಓ ಧರ್ಮಚಕ್ರವೇ ಕೈಹಿಡಿದು ನಡೆಸೆನ್ನನು ಸತ್ಯಮೇವ ಜಯತೆ ಒಂದು ಹಕ್ಕಿಯು ತಿನ್ನುತಿದ್ದರು ಇನ್ನೊಂದು...

ವಿಷ ಕನ್ಯ

ಬಾಯ ಜೊಲ್ಲ ನೀರಿನಿಂದ ಹಿಡಿದು ಯೋನಿ ದ್ರವಣದವರೆಗೆ ಹರಿವ ಜಲ ಜಲವೂ ವಿಷ ವಿಷ ವಿಷ ಏನಿದು ಅವಳ ಶಾಪವೋ ಗಂಡನಿಂದ ಬಿಡಿಸಿದ್ದಕ್ಕೆ ಈ ಅಜ್ಜಿ ತಾತ ಹದಿಮೂರು ಹೆತ್ತರೂ ಕಚ್ಚಾಡಿದ್ದಕ್ಕೆ ಅವಳು ಒಲೆಯ...