ಗಳಿಗೆಬಟ್ಟಲ ತಿರುವುಗಳಲ್ಲಿ – ೩೪

ಹಸಿವೆಗೆಷ್ಟು ಮಾತಿತ್ತೋ ಕೇಳಲಾರಿಗೆ ಪುರುಸೊತ್ತು? ವ್ಯರ್ಥ ಮಾತು ಯಾರಿಗೆ ಬೇಕು? ರೊಟ್ಟಿ ಏತಕ್ಕೆ ಕಾದಿತ್ತೋ? ಕಾಯುವ ತಪ ಕಾದವರಿಗೇ ಗೊತ್ತು. ಮುಟ್ಟಲಾಗದ ಗುಟ್ಟುಗಳು ಮುಖವ ಕೊಲ್ಲುತ್ತವೆ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೩೩

ಹಸಿವು ತೀರಿಹೋದರೂ ಹಸಿ ಆರುವುದಿಲ್ಲ ರೊಟ್ಟಿ ಹಸಿವಿನೊಡಲಲ್ಲಿ ಕರಗಿಹೋದರೂ ರುಚಿ ತೀರುವುದಿಲ್ಲ. ಹಸಿವು ರೊಟ್ಟಿಗಳ ಆರದ ತೀರದ ನಿರಂತರ ಪಯಣಕೆ ಮೂಲ ಈ ಪರಸ್ಪರ ಸೆಳೆತ.

ಗಳಿಗೆಬಟ್ಟಲ ತಿರುವುಗಳಲ್ಲಿ – ೩೦

ಕತ್ತಲಲ್ಲಿ ಕಣ್ಣು ಮಿಟುಕಿಸಿದಂತೆ, ಕಾಣಲಾಗದ ಹಸಿವಿನ ಒಡಲಾಳದಲ್ಲಿ ರೊಟ್ಟಿಗೊಂದು ಪುಟ್ಟ ಘನವಾದ ಸ್ಥಾನವಿದೆಯಂತೆ. ಪ್ರತ್ಯಕ್ಷ ನೋಡಲಾಗದ ಸತ್ಯ ಇದ್ದರೂ ಇರದಂತೆ.

ಗಳಿಗೆಬಟ್ಟಲ ತಿರುವುಗಳಲ್ಲಿ – ೨೮

ಹಸಿವು ಗಡಿಯಾರದ ನಿಮಿಷದ ಮುಳ್ಳು. ರೊಟ್ಟಿ ಗಂಟೆಯ ಮುಳ್ಳು. ಅರವತ್ತು ನಿಮಿಷಗಳು ಸುತ್ತಿ ಬಂದರೂ ಹಸಿವು ಒಂದೇ ಗಂಟೆಯಾಗಿ ಮೆಲ್ಲಗೆ ತವಳುತ್ತದೆ ರೊಟ್ಟಿ. *****