Home / ಕಿನ್ನರ ಲೋಕ

Browsing Tag: ಕಿನ್ನರ ಲೋಕ

“ರಾತ್ರಿ ಹಗಲು ಎರಡೂನೂ ಒಂದರ ಹಿಂದೆ ಮತ್ತೊಂದು ಬರ್‍ತಾನೇ ಇರ್‍ತಾವೆ, ಯಾತಕ್ ಆ ಥರ ಮಾಡ್ತಾವೆ?” “ರಾತ್ರಿ ಹಗಲು ಮಾತ್ರಾನೇ ಆ ಥರ ಸುತ್ತೋದಲ್ಲಣ್ಣ, ಇಡೀ ಜಗತ್ತೇ ಆ ರೀತಿ ಸುತ್ತು ಹಾಕ್ತಾ ಇದೆಯಣ್ಣ! ಬೇಸಿಗೆಯಾಯ್ತೋ ಮಳೆಗಾ...

ಛುಕ್ಕು ಛುಕ್ಕು ರೈಲು ಬಂತು ಸೀಟಿ ಊದುತ, ಸಿಗರೇಟ್ ಸೇದೋ ಹಾಗೆ ಕೊಳವೀಲ್ ಹೊಗೇ ಬಿಡುತ್ತ! ಎದೇ ತುಂಬ ನಿಗೀ ನಿಗೀ ಕೆಂಡ ಇಟ್ಕೊಂಡು ಸಾವಿರಾರು ಜನಾನ್ ತನ್ನ ಹೊಟ್ಟೇಗ್ಹಾಕ್ಕೊಂಡು! ರೈಲು ಹೋಗ್ತಾ ಇದ್ರೆ ಊರಿಗ್ ಊರೇ ಸುತ್ತುತ್ತೆ ಮರ ಗಿಡ ಬೆಟ್ಟ ಎ...

ಡೊಳ್ಳೂಹೊಟ್ಟೆ ಗುಂಡನ ಮನೆ ಭಾಳ ಹತ್ರ ಸ್ಕೂಲಿಗೆ, ಆದರೂನು ದಿನಾ ಅವನು ತುಂಬ ಲೇಟು ಕ್ಲಾಸಿಗೆ. ಹಂಡೆಯಂಥ ಹೊಟ್ಟೆ ಹೊತ್ತು ಬಲು ನಿಧಾನ ನಡೆವನು, ಗಂಟೆಗೊಂದು ಹೆಜ್ಜೆಯಿಟ್ಟು ಕಷ್ಟಪಟ್ಟು ಬರುವನು. ಮಗ್ಗಿ ಬರೆಯೊ ಗುಂಡ ಅಂದ್ರೆ ಬಗ್ಗಲಾರೆ ಎನುವನು,...

ಬೆಕ್ಕು ನಾಯಿ ಮೊಲ ಅಂದ್ರೆ ಭಾಳ ಇಷ್ಟ ನನಗೆ ಮುದ್ದು ಮಾಡಿ ಕರದ್ರೆ ಓಡಿ ಬಂದೇ ಬಿಡ್ತಾವ್ ಒಳಗೆ. ಬೆನ್ನು ಸವರಿ, ಕತ್ತು ತುರಿಸಿ ತಿಂಡಿ ತಟ್ಟೆ ಇಡಲು ತಿಂದು ಕೈಯ ನೆಕ್ಕುತ್ತಾವೆ ಮಾಡುತ್ತಾವೆ ಮರುಳು. ಬಾಲ ಆಡಿಸುತ್ತ ಬಂದು ಮೈಗೆ ಮೈಯ ತೀಡಿ ನೋಡತ...

ಚಂದಕ್ಕಿ ಮಾಮಾ ಚಕ್ಕುಲಿ ಮಾಮಾ ಮುತ್ತಿನ ಕುಡಿಕೆ ಕೊಡು ಮಾಮಾ ಕೊಡು ಮಾಮಾ ತೆಳ್ಳಗೆ ಹಪ್ಪಳದಂತಿರುವೆ ಬೆಳ್ಳಗೆ ದೋಸೆಯ ಹಾಗಿರುವೆ ಮೆಲ್ಲ ಮೆಲ್ಲಗೆ ಮುಂದಕೆ ಹೋದರು ಕಡೆಗೆ ಇದ್ದಲ್ಲೇ ಇರುವೆ ಕಿತ್ತಳೆ ಕೊಡುವೆ ಬಾ ಕೆಳಗೆ ಮುತ್ತನು ಕೊಡುವೆ ಬಾ ಬಳಿಗ...

ಹುಲ್ಲನ್ ಬೆಳೆಯೋದ್ ಭೂಮಿ ಆದ್ರೆ ಭೂಮಿನ್ ಮಾಡಿದ್ಯಾರು? ರಾತ್ರೀನ್ ಬೆಳಗೋನ್ ಚಂದ್ರ ಆದ್ರೆ ಚಂದ್ರನ್ ತಂದೋರ್‍ ಯಾರು? ಹಾಲ್ನಲ್ ಬೆಣ್ಣೆ ಹ್ಯಾಗಿರುತ್ತೆ ಕಣ್ಣೀಗ್ ಕಾಣದ ಹಾಗೆ? ಮೋಡ್ದಲ್ ನೀರು ಹ್ಯಾಗ್ ಸೇರುತ್ತೆ ಭಾರ ಆಗದ ಹಾಗೆ? ಅಷ್ಟೊಂದ್ ಅಗಲ...

ನೋಡಿದರೆ ದೂರಕ್ಕೆ ಕೆಂಪನೆಯ ಹೆಣ್ಣು ತೆಳ್ಳಗೇ ಉದ್ದಕ್ಕೆ ಜಡೆಯು ಇದೆ ಎನ್ನು ತವರಿನಲ್ಲಿರುವಾಗ ಹಸಿದೆನ್ನ ಬಣ್ಣ ಬಿಟ್ಟು ಮುದಿಯಾದಾಗ ಕೆಂಪು ಕಾಣಣ್ಣ ಬೈಯುವರು ನನ್ನನ್ನು ಬಲುಜೋರು ಎಂದು ಬೊಬ್ಬೆ ಹೊಡೆಸುತ್ತಾಳೆ ಉರಿಮಾರಿ ಎಂದು ನಿಮ್ಮ ಅಡಿಗೆಯ ಮ...

ಡೊಳ್ಳು ಹೊಟ್ಟೆ ಗುಂಡ ತಿಂಡಿ ತಿನ್ನೋಕ್ ಬಂದ, ಹಸಿವು ಇಲ್ಲ ನಂಗೆ ಚೂರೇ ತಿಂತೀನ್ ಅಂದ. ಒಂದು ತಟ್ಟೆ ಉಪ್ಪಿಟ್ಟು ಎರಡೇ ನಿಮಿಷ, ಢಂ! ಮೂರೇ ದೋಸೆ. ನಾಕೇ ರೊಟ್ಟಿ ಐದೇ ಇಡ್ಲಿ ಢಂ! ಆರು ಒಡೆ ಢಂ ಏಳು ಉಂಡೆ ಢಂ, ಎಂಟೊ, ಒಂಬತ್ತೊ ಪೂರಿ ಅಷ್ಟೆ ಢಂ ಢ...

ಅಪ್ಪ ಹೊರಗಡೆ ಹೋದಾಗ ಕೋಟು ಬೂಟು ಹಾಕ್ಕೊಂಡು ಅಪ್ಪನ ಕಪ್ಪನೆ ಕನ್ನಡಕ ಕಣ್ಣಿಗೆ ಸರಿಯಾಗ್ ಇಟ್ಕೊಂಡು ನಾನೇ ಅಪ್ಪ ಆಗ್ತೀನಿ ದಪ್ಪನೆ ದನೀಲಿ ಕೂಗ್ತೀನಿ ಅಣ್ಣ ಅಕ್ಕ ಎಲ್ಲರಿಗೂ ಸಖತ್ತು ರೋಪು ಹಾಕ್ತೀನಿ! ಅಣ್ಣನ್ ಕರೆದು ಕೇಳ್ತೀನಿ: “ಯಾಕೋ ಸ...

ಹಕ್ಕೀ ಮಾತ್ರ ಮೊಟ್ಟೇನ ಇಡುತ್ತೆ ಅನ್ನೋದ್ ಸುಳ್ಳಮ್ಮಾ, ತೆಂಗಿನ ಮರಗಳು ತಲೆಯಲ್ಲಿ ಮೊಟ್ಟೆ ಇಟ್ಟಿಲ್ವೇನಮ್ಮಾ? ಸೇಂಗಾ ಗಿಡಗಳು ನೆಲದಲ್ಲಿ ಕಪ್ಪನೆ ಮಣ್ಣಿನ ಬುಡದಲ್ಲಿ ಗೊಂಚಲು ಗೊಂಚಲು ಮೊಟ್ಟೇನ ಇಟ್ಟಿಲ್ವಾಮ್ಮಾ ಮರೆಯಲ್ಲಿ? ಹಲಸಿನ ಮರಾನ ನೋಡಮ್ಮ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...