ಹುಲ್ಲನ್ ಬೆಳೆಯೋದ್

ಹುಲ್ಲನ್ ಬೆಳೆಯೋದ್ ಭೂಮಿ ಆದ್ರೆ
ಭೂಮಿನ್ ಮಾಡಿದ್ಯಾರು?
ರಾತ್ರೀನ್ ಬೆಳಗೋನ್ ಚಂದ್ರ ಆದ್ರೆ
ಚಂದ್ರನ್ ತಂದೋರ್‍ ಯಾರು?

ಹಾಲ್ನಲ್ ಬೆಣ್ಣೆ ಹ್ಯಾಗಿರುತ್ತೆ
ಕಣ್ಣೀಗ್ ಕಾಣದ ಹಾಗೆ?
ಮೋಡ್ದಲ್ ನೀರು ಹ್ಯಾಗ್ ಸೇರುತ್ತೆ
ಭಾರ ಆಗದ ಹಾಗೆ?

ಅಷ್ಟೊಂದ್ ಅಗಲದ ಆಕಾಶ
ಬೀಳದೆ ನಿಲ್ಲೋದ್ ಹ್ಯಾಗೆ,
ಕಂಬ ಇಲ್ಲದ ಚಪ್ಪರದಂತೆ
ಕೆಳಕ್ಕೆ ಕುಸಿಯದ ಹಾಗೆ,

ಸೀ ನೀರೆಲ್ಲ ಸಮುದ್ರ ಸೇರಿ
ಉಪ್ಪುಪ್ಪಾಗೋದ್ ಯಾಕೆ?
ಉಪ್ಪಾದ್ ನೀರು ಮೋಡ ಆಗಿ
ಸೀ ನೀರ್‍ ಬರುತ್ತೆ ಹ್ಯಾಗೆ?

ಹಸಿರೆಲೆ ನಡುವೆ ಬೆಳ್ಳಗೆ ಹೇಗೆ
ಮಲ್ಲಿಗೆ ಹೂವು ಅರಳತ್ತೆ?
ಭಾರೀ ಮರವೇ ಪುಟ್ಟನೆ ಹುಣಿಸೇ
ಬೀಜದಿಂದ ಏಳತ್ತೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೧೭೬
Next post ಆ ಒಂದು ನಗು

ಸಣ್ಣ ಕತೆ

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…