ಬೆಕ್ಕು ನಾಯಿ ಮೊಲ

ಬೆಕ್ಕು ನಾಯಿ ಮೊಲ ಅಂದ್ರೆ
ಭಾಳ ಇಷ್ಟ ನನಗೆ
ಮುದ್ದು ಮಾಡಿ ಕರದ್ರೆ ಓಡಿ
ಬಂದೇ ಬಿಡ್ತಾವ್ ಒಳಗೆ.

ಬೆನ್ನು ಸವರಿ, ಕತ್ತು ತುರಿಸಿ
ತಿಂಡಿ ತಟ್ಟೆ ಇಡಲು
ತಿಂದು ಕೈಯ ನೆಕ್ಕುತ್ತಾವೆ
ಮಾಡುತ್ತಾವೆ ಮರುಳು.

ಬಾಲ ಆಡಿಸುತ್ತ ಬಂದು
ಮೈಗೆ ಮೈಯ ತೀಡಿ
ನೋಡತ್ತಾವೆ ಥ್ಯಾಂಕ್ಸ್ ಅನ್ನೋ-
ಹಾಗೆ ಮೂತಿ ಮಾಡಿ.

ತೊಡೆ ಮೇಲೆ ಮಲಗಿಕೊಂಡು
ಏನೋ ಆಟ ಆಡ್ತಾವೆ.
ಪಾಪ! ಅವುಗಳಮ್ಮ ಎಲ್ಲೋ!
ಕೇಳುವಂತೆ ನೋಡ್ತಾವೆ.

ಇನ್ಮೇಲ್ ನಾನೇ ಅವುಗಳಿಗೆಲ್ಲ
ಅಮ್ಮ ಆಗಿಬಿಡ್ತೀನಿ.
ಹಾಲು ಕೊಟ್ಟು ಚಿನ್ನ ರನ್ನ
ಅಂತ ಮುದ್ದು ಮಾಡ್ತೀನಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೧೭೮
Next post ಸಂಬಂಧ…..

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…