ಮಧುಚಂದ್ರ

ಪಡುವಲದೊಡೆಯ ಪೂರ್ಣಿಮೆಯಿನಿಯ ಬೆಳಗಽನ್ನು ಸುಯ್ದಾ, ಬೆಳ್ಳಿಯ ಬೆಳಗನ್ನು ಸುಯ್ದಾ, ಬಾನಲಿ ಮೊಳೆದು ಮೆಲ್ಲಗೆ ಬೆಳೆದು ಇಳೆಯಲ್ಲಾ ಕಾಣ್ದಾಽ ಪೂರ್ಣಿ ಇಳೆಯಲ್ಲಾ ಕಾಣ್ದಾ ಅಮೃತದ ರಸದಾ ಚಿಲುಮೆಯಿಂದಽ ಭರಭರನೇ ಸುರಿದು ತಾನೇ ಭರ ಭರನೇ ಸುರಿದು...

ಸೃಷ್ಟಿ ಪಲ್ಲವಿ

ಜಗವು ತೆರೆದ ಬಾಗಿಲು ಹೃದಯಗಣ್ಣ ತೆರೆದು ನೋಡು ಸೃಷ್ಟಿ ಸತ್ಯ ತಿಳಿಯಲು ||ಪ|| ಬಾನು ಇಳೆಯು ವಾಯುವಗ್ನಿ ಜಲವು ಜೀವ ಕಾರಣ, ಜೀವ ದೇವ ದ್ವೈತಾದ್ವೈತ ಸೃಷ್ಟಿ ಸೊಬಗ ತೋರಣ | ಭೂಮಿ ಬಾನಿನೊಡಲು...

ಮಾನಸ ವೀಣ

ಮಾನಸ ಲೋಕದ ಪ್ರಭುವೆ ಮನ ಮಾನಸದ ಹೊನಲಿನ ವಿಭುವೆ ||ಪ|| ಮುಗಿಲಿಗೂ ಮಿಗಿಲು ನಿನ್ನಯ ಹರವು, ಕಡಲಿಗೂ ಹಿರಿದು ತಿಳಿವಿನ ಅಳವು, ಸಮೀರನ ಹಿಂದಿಕ್ಕೂ ವೇಗದ ಲೀಲೆ, ಅನಲನ ದಾಟಿಸೋ ಅಪುವಿನ ಓಲೆ, ಮಾಯಾ...

ಕಬ್ಬಿಗ

ಯಾವ ಪ್ರತಿಮೆಗೆ ಯಾವುದುಪಮೆಯೋ ರೂಪಕಕೆ ಯಾವುದೋ ಆಕರ ಭಾವಯಾನದ ಭೌಮ ಕವಿಯೊಳು ಕವಿಸಮಯ ದೀಪಗಳಂಕುರ | ಧೃವಗಳುತ್ತರ ದಕ್ಷಿಣಗಳು ಸಮದ ಸಮತೆಗೆ ತೋರಣ ದಿಶಾ ದಿಸೆಯ ದೆಸೆಗಳೆಲ್ಲವೂ ಕಾವ್ಯ ಬಲ್ಮೆ ಮೇಲ್ಮೆಗೆ ಕಾರಣ |...

ಬನ್ನಿ ಸಜ್ಜನರೇ… ಬನ್ನಿ

ಬನ್ನಿ ಸಜ್ಜನರೇ ಬನ್ನಿ ನವ ನಾಡ ಕಟ್ಟುವ ಬನ್ನಿ ||ಪ|| ಪ್ರಗತಿ ಬಂಡಾಯ ದಲಿತ ನವೋದಯ ನವ್ಯ ಸಂಪ್ರದ ಶೀಲರೆ ಬನ್ನಿ, ಜ್ಞಾನ ವಿಜ್ಞಾನ ನಿಧಿಯ ವಿಬುಧ ಜನ ಸಮ್ಮಾನ ಜನಪದರೆ ಬನ್ನಿ, ||ಅ.ಪ.||...

ಶ್ರೀ ಗುರುವಿಗೆ

ಅಂಧಕಾರದ ಭ್ರಾಂತಿ ಕಳೆಯಿಸೊ ಪ್ರಭೆಯೆ ನಿನಗೆ ವಂದನೆ, ಅಂತರಂಗದ ಹಣತೆ ಸೊಗಯಿಸೊ ಗುರುವೆ ನಿನಗೆ ವಂದನೆ | ಧಾತ ವಿಧಾತ ನಾಥನ ತೋರೋ ಕೈಯ ದೀವಿಗೆ ಭೂತ ಭವಿಷ್ಯದ್ವರ್ತಮಾನ ನಿನ್ನ ಹಿರಿಮೆಗರಿಮೆ ಸಾಕ್ಷಿಗೆ |...

ಸೌದಾಮಿನಿ

ನಿರಾಭರಣ ಸುಂದರಿ ಎನ್ನಂತರಾಳದ ಗೀತಿಕೆ ಮಂಜರಿ | ಒಡವೆ ತೊಡವಲಂಕಾರವಿರದ ಸಮದರ್ಶಿ ಸರಳಭಿಸಾರಿಕೆ ರೂಪಿನೊನಪಿನ ಬಿಂಕ ಬೆಡಗನು ತೊರೆದ ಸಿಂಗರ ಭೂಮಿಕೆ | ಝಣ ಝಣ ಶ್ರೀ ಸದ್ದ ಬಯಸದ ದುಗ್ದ ಹಾಸ ಮೌನದೆ...

ಅಂತರಗಂಗೆ

ನಿನ್ನದೀ ಲೋಕದಲಿ ನಿನ್ನಣತಿಯಂತೆ ಎನ್ನ ಬದುಕಿರುತಿರಲು ನನಗಿಲ್ಲ ಚಿಂತೆ ||ಪ|| ನಿನ್ನ ಕರುಣ ಬೆಳಕಿನ ಲೀಲೆ, ಮನದಿ ತಾ ತುಂಬಿರಲು ಎನ್ನ ಕಾಡುವುದೆಂತು ತಮಸ ತಾಪದಾಽಚಿತೆ, ||ಅ.ಪ.|| ಕರಿ ಕಾರಿರುಳುಗಳು ಬಣ್ಣದೊಳಥಳಕುಗಳು ಇಡಿಕಿರಿದರೇನಂತೆ ನನ್ನ...