ಯಾವ ಪ್ರತಿಮೆಗೆ ಯಾವುದುಪಮೆಯೋ
ರೂಪಕಕೆ ಯಾವುದೋ ಆಕರ
ಭಾವಯಾನದ ಭೌಮ ಕವಿಯೊಳು
ಕವಿಸಮಯ ದೀಪಗಳಂಕುರ |
ಧೃವಗಳುತ್ತರ ದಕ್ಷಿಣಗಳು
ಸಮದ ಸಮತೆಗೆ ತೋರಣ
ದಿಶಾ ದಿಸೆಯ ದೆಸೆಗಳೆಲ್ಲವೂ
ಕಾವ್ಯ ಬಲ್ಮೆ ಮೇಲ್ಮೆಗೆ ಕಾರಣ |
ಭಾಷೆ-ಭಾಷೆಯ ಭಾಷ್ಯ ಭಾಷಿಕ
ಶಬ್ದ ಶಾಬ್ಧಿಕ ನಾವಿಕ,
ಕಲ್ಪ ತಲ್ಪದ ನಾದ ನಿನದದ
ಗಾನ ಗೀತೆಯ ವೈಣಿಕ |
ರಸ ನವರಸ ಸರಸ ಸಮರಸ
ರಸಾವರ್ಷದ ರಸ ಋಷಿ,
ರಸೋಲ್ಲಾಸದ ರಸೋವೈಸ್ವದ
ರಸಾಮೃತ ಶವವ್ರಷಿ |
*****