ಹೋಳಿ ಹುಣ್ಣಿವೆ ದಿನದಂದು ಸೋಮ್ ವ್ಯೋಮಾದಿ ಸೇರಿ ಅಗೆದರು ಮನೆಯ ಮುಂದೊಂದು ಕಾಮ ದಹನದ ಗುಂಡಿಯೊಂದು ನೆಟ್ಟರು ನಾಲ್ಕು ಕೋಲು-ಗಳ ಹಚ್ಚಲು ಬಣ್ಣದ ಹಾಳೆಗಳ ಜಗಮಗ ಲೈಟನು ಹಾಕಿದರು ಸೌದೆ ಹೊರೆಗಳ ಒಟ್ಟಿದರು ಚಂದ್ರ ಜಗವನು ಬೆಳಗಿದನು ಸೌದೆಗೆ ಘಾಸಲೇಟ್...
ಅಮ್ಮ ನೋಡೆ ಆಕಾಶದಲಿ ಎಷ್ಟೊಂದ್ ಹೊಳೆಯೊ ನಕ್ಷತ್ರ ಆಟಕೆ ಕರೆದರೂ ಬರೋದಿಲ್ಲ ಯಾಕೆ ನಮ್ಮನೆ ಹತ್ರ ನಿನ್ನ ಹಾಗೆ ಅವರಮ್ಮನೂ ಬೈಯ್ದು ಬಿಡ್ತಾಳೋ ಏನೋ ದೂರಾ ಎಲ್ಲೂ ಹೋಗ್ಬೇಡಂತ ಹೊಡೆದು ಬಿಡ್ತಾಳೋ ಏನೋ…? ಅಮ್ಮ ಚುಕ್ಕಿಗಳ್ಯಾಕೆ ನನ್ನಂಗಿಲ್ಲ ದ...
ಎಷ್ಟೋ ಕವಿಗಳು ಆಗಿಹೋದರೂ ಇನ್ನಷ್ಟು ಕವಿಗಳು ಬರಲಿರುವರು ಈ ಇಷ್ಟರಲ್ಲಿ ನೀನೆಷ್ಟರವನೊ ನಾನೆಷ್ಟರವನೊ ಜಾಗ ಹಿಡಿದಿಟ್ಟಿರುವ ಆ ಇನ್ನೊಬ್ಬ ಎಷ್ಟರವನೊ ಕಾಲಾಂತರದಲ್ಲಿ ನುಡಿ ಹೀಗೇ ಉಳಿಯದಲ್ಲಾ ಅದು ಯಾರಿಗೂ ತಿಳಿಯದೇ ಬದಲಾಗುವುದಲ್ಲಾ ನುಡಿ ಬದಲಾಗುವ...
ಅಂದು- ಶಾಲೆಗೆ ಡಾ. ವಿ.ನಾಗರಾಜುರವರು ಆಗಮಿಸಿದ್ದರು. ಮಕ್ಕಳಿಗೆ ಆರೋಗ್ಯ ಭಾಗ್ಯದ ಬಗೆಗೆ ವಿವರಿಸಿದರು. ಅವರು ಹೇಳುವುದ ಕೇಳುತ್ತಾ ಕುಳಿತ ನಮಗೆಲ್ಲ ಐದಾರು ದಶಕಗಳ ಕೆಳಗೆ ನಾವೆಲ್ಲ ಕಡ್ಡಾಯವಾಗಿ ನಿತ್ಯ ಹಾಲು-ಮೊಸರು-ಮಜ್ಜಿಗೆ-ಬೆಣ್ಣೆ-ಗಿಣ್ಣು-ತು...
ಅವರು ಹೇಳ್ತಾನೆ ಇರ್ತಾರೆ I am nobody ಎಂದು ಹಾಗಾದರೆ ಬರಿ Soul ಏ ತುಂಬಾ ಭಯವಾಗುತ್ತೆ *****...
ಮೇರಾ ಭಾರತ್ ಮಹಾನ್ ಹೈ ಹೇಳಿ ನಮ್ಮಿದಿರು ಯಾರಿಹರು ಸ ಗುಡಿ ಕಟ್ಟಿದವರನ್ನು ಗುಡಿಯಾಚೆರಿಗಿಸಿದ ಕೆರೆ ಕಟ್ಟಿದವರನ್ನು ಕೆರೆ ಮುಟ್ಟಗೊಡದ ಪಾವಿತ್ರ್ಯದ ಚರಿತೆ ಇದು ಅಲ್ಲವೆ ಹೇಳಿ ಇಂತಹ ಚರಿತೆ ಬೇರೆಲ್ಲಿದೆ ಕೇಳಿ! ತುಳಿದವನ ಜಾತಿಗೆ ಹೆಸರು ಮೇಲ್ಜಾ...
ಇದೇಕೋ ಈ ಜನ ಬೇಡ ಬೇಡ ಎಂದರು ಹೂಬಿಟ್ಟಿತು ಹಣ್ಣಾಯಿತು ಮರ ಮತ್ತೆ ಮತ್ತೆ ಚಿಗುರುವುದಿದ್ದೇ ಇದೆ ಪ್ರತಿ ವರುಷ ಇನ್ನೇಕೆ ಕಸಿ ಮಾಡಿಸುವ ಹಂಬಲ ಬಿಡಿ ಅದೆಲ್ಲಾ ಚಿಕ್ಕ ಚಿಕ್ಕ ಗಿಡಗಳಿಗೆ ಬಳಲಿ ಬೆಂಡಾದವುಗಳಿಗೆ ತಾವೇ ಹೂ ಬಿಡಲಾರದವುಗಳಿಗೆ ನಿಮ್ಮಂಥವ...
ಎಂತಹ ಬಿರುಗಾಳಿಯಾದರೂ ಶಾಂತವಾಗಲೇ ಬೇಕು. ಎಂತಹ ಜ್ವಾಲಾಮುಖಿಯಾದರೂ ತಣ್ಣಗಾಗಲೇ ಬೇಕು. ಎಂತಹ ಪ್ರವಾಹವಾದರೂ ನೆರೆ ತಗ್ಗಲೇಬೇಕು. ಎಲ್ಲರಲೂ ಅಂತಃಕರಣ ಇದ್ದೇ ಇರುವುದು. ಕೇಡನು ಅದು ಕೊನೆಗೂ ಗೆದ್ದೇ ತೀರುವುದು. ***** ಗುಜರಾತ್‌ಗೆ ಕವಿ ಸ್ಪಂದನ...
ನಾನು ಕನವರಿಸಿರಬೇಕು – ಸಾಕಷ್ಟು ದೊಡ್ಡದಾಗಿಯೆ. ತಾಯಿ ಬಳಿ ಒಂದು “ಪುಟ್ಟ! ಪುಟ್ಟ! ಏನಾಯಿತು? ಕನಸು ಕಂಡಿಯ?” ಎಂದು ಹೊರಳಿ ಎಬ್ಬಿಸಿದಾಗ ಎಚ್ಚರಾಯಿತು. ನಾನು ಇನ್ನು ಯಾರನ್ನಾದರೂ ಎಬ್ಬಿಸಿದೆನೆ ಎಂದು ಆತಂಕದಿಂದ ಆಚೀಚೆ ನೋ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...







