ಮೇರಾ ಭಾರತ್ ಮಹಾನ್ ಹೈ

ಮೇರಾ ಭಾರತ್ ಮಹಾನ್ ಹೈ
ಹೇಳಿ ನಮ್ಮಿದಿರು ಯಾರಿಹರು ಸ

ಗುಡಿ ಕಟ್ಟಿದವರನ್ನು ಗುಡಿಯಾಚೆರಿಗಿಸಿದ
ಕೆರೆ ಕಟ್ಟಿದವರನ್ನು ಕೆರೆ ಮುಟ್ಟಗೊಡದ
ಪಾವಿತ್ರ್ಯದ ಚರಿತೆ ಇದು ಅಲ್ಲವೆ ಹೇಳಿ
ಇಂತಹ ಚರಿತೆ ಬೇರೆಲ್ಲಿದೆ ಕೇಳಿ!

ತುಳಿದವನ ಜಾತಿಗೆ ಹೆಸರು ಮೇಲ್ಜಾತಿ
ತುಳಿಸಿಕೊಂಡವನಿಗೆ ಹೆಸರು ಕೀಳ್ಜಾತಿ
ಇಂತಹ ವ್ಯಾಖ್ಯಾನ ಬರೆದ ಸಾಮಾಜಿಕತೆ
ಹೌದಲ್ಲವೆ ಹೇಳಿ ಭಾರತದ ಆತ್ಮಕತೆ!

ದೇವಭಾಷೆ ದೇವಪುತ್ರರಿಂದ ಕೊಲೆಯಾದ ಕತೆ
ಪುರೋಹಿತ ನಾಮ ಹೊತ್ತು ತಿರೋಹಿತ ಆದ ಕತೆ
ಇಂತಹ ಕತೆ-ವೆತೆ ಪುಟವ ತುಂಬಿದ ಚರಿತೆ
ಎಂದೂ ಅಲ್ಲವೆ ಹೇಳಿ ಸುವರ್‍ಣಾಕ್ಷರ ಚರಿತೆ!

ನಮ್ಮ ಸಂಸ್ಕ ತಿದೇವಿ ನಿತ್ಯಪೂಜೆಗೆ ಮಾನ್ಯ
ಅದಕೆ ನಾವ್ ಧನ್ಯ ಬೇಡ ನಮಗೆ ಅನ್ಯ
ನಿಜದ ಕತೆ ಬೇಡ ಭ್ರಮೆಯ ಕತೆ ಚೆನ್ನ
ನಮಗೆ ನಾವ್ ಚಿನ್ನ ಹಣೆಬರಹವೆ ಚೆನ್ನ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೇಡ
Next post ಬೆಲೆ ಇಲ್ಲ

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…