ಸತಿ:- ತೇಲು ಮೋಡಗಳ ತೀಡಿ ಮುಡಿಗಟ್ಟಿ ಮಲ್ಲಿಗೆ ಮುಡಿದು ಮುಗುಳುನಗೆ ಚೆಲ್ವ ಮುಗಿಲುಚೆನ್ನೆಯ ನೋಡಿ ನಗದಿರ್ಪ ಕವಿಯು ಕವಿಯೇನೆಂಬೆ! ಚೆನ್ನ ಚಿನ್ಮಯನೆ, ಚೆಲುನಗೆಯನೊಮ್ಮೆ ಬೀರು, ಸುಪ್ರಭಾತದ ಸುಮನ ಸಂಚಯದಂತೆ! ಕಿರುನೃತ್ಯಗೈಯೊಮ್ಮೆ ಮಧುವನೀಂಟಿ ಮೈ...
ಈಗ ಎಲ್ಲಿರುವೆ? ಹೇಳು, ನಯ ನಾಜೂಕಿನ ಬೆಡಗಿನ ಬೆರಗ ಕಣ್ಣುಗಳ ತೆರೆಯಿಸಿದವನೇ? ನಡೆಯುವ ದಾರಿಯ ತುಂಬ ಗಾಲಿಗಳ ಉರಳುಸುತ ನನ್ನಲಿ ಒಂದಾಗಿ ಬಾಳ ಬೆಳಕಾದವನೇ? ನೆಮ್ಮದಿಯ ಅರಿವೆಯಲಿ ಗುರಿ ಇಟ್ಟು ಒಂದೇ ಮನಸ್ಸಿನ ನೇಯ್ಗೆಯ ಎಳೆ ಪೋಣಿಸಿದವನೇ? ಆಲದ ಭವನ...
ನಾನು ನನ್ನದು ಎಂಬ ಅಹಂಕಾರ ಬೇಡ ನೀನು ನಿನ್ನದು ಎಂಬ ಸದ್ವಿಚಾರವ ನೀಡ ನಾನೇಯಂತ್ರ ನೀನು ಯಾಂತ್ರಿಕ ನಾನೇ ಮಂತ್ರ ನೀನು ಮಾಂತ್ರಿಕ ನನ್ನಿಚ್ಛೆಯಿಂದ ಇಲ್ಲಿ ಯಾವುದು ನಡೆಯದು ಭಗವತ್ ಇಚ್ಛೆಯೇ ಸರ್‍ವಕ್ಕೂ ಅಹುದು ಆಡಿಸುವಾತನ ನಾನು ಕೈಗೊಂಬೆಯಂತೆ ಅವ...
ದೇವಾಲಯದ ಪ್ರವೇಶಕ್ಕೆ ಒಂದು ತಿಂಗಳುಂಟಂದಾಗ ಒಂದು ರಾತ್ರೆ ಚಂಚಲನೇತ್ರರಿಗೆ ಅಕಸ್ಮಾತ್ಕಾಗಿ ಅಪಸ್ಮಾರ ರೋಗ ತೊಡಗಿ ಚಿಕಿತ್ಸೆಗೆ ಅವಕಾಶವಿಲ್ಲದೆ ಗತರಾದರು. ವಾಗ್ದೇವಿಗೂ ಅವಳ ಪಕ್ಷದವರಿಗೂ ಸಿಡಿಲು ಬಡಿದಂತಾಯಿತು. ಕಟ್ಟಳೆಗನುಗುಣವಾಗಿ ವೃಂದಾವನವನ್...
ಇಗೋ ಈ ಮೌನಾ ಸುತ್ತಮುತ್ತೂ ಜಗದಗಲಾ ವಾಚಾತೀತಾ ಶ್ವೇತಾ ಶುಭ್ರಾ ಸ್ಫೀತಾ ಖಗಮಾಲಾ ಸಾಗರಮಗ್ನಾ ದಿಗಂತೋಡ್ಡೀನಾ ಲೀನಾ ನಿಃಶಬ್ದಾಕಾಶವ್ಯಾಪ್ತಾ ನಿರ್ನಾದಾ ಪಾರಾವಾರಾ ನೀಲಾಂತರ್ನೀಲಾ ಅಗಾಧಾ ಅನ್ಯೋನ್ಯಾ ಸಾಕ್ಷೀಮೂಕಾ -ಇಗೋ ಈ ಮೌನಾ. ಗುರುಗುಮ್ಮಾ ಅನಂ...
ಏನು ಇದು ಸಾರಥಿಯೆ, ನೀನಿಂತು ಮಾಡಿದರೆ ನಾನು ಹಗೆಯರಸರನು ಕೂನಿಸುವನೆಂತು ? ೧ ದಾರಿ ಯಾವುದು ಈಗ ತೇರ ನಡೆಯಿಸುತಿಹುದು ? ವೈರಿಗಳು ಪಾಳೆಯವ ಊರಿರುವುದೆಲ್ಲಿಯೊ ! ದಾರಿಯನು ಅರಿತವರು ಸಾರಿರುವ ಕುರುಹುಗಳು ತೋರಲೊಲ್ಲವು ಕಣ್ಗೆ, ಗಾರಗೊಂಡಿದೆ ಮನವು...
ಬಾರೇ… ಬಾರೇ…. ನನ್ನೊಲವ ಗೆದ್ದ ನೀರೆ| ಬಾರೇ ಬಾರೇ ನನ್ನ ಹೃದಯ ಕದ್ದ ನೀರೆ| ನೀರೆ ನೀರೇ ನೀ ಚೆಲುವಲಿ ಮಿಂದ ಅಪ್ಸರೆ|| ತೋರೆ ತೋರೇ ನೀಕರುಣೆಯಾ ತೋರೇ| ಒಲವಲಿ ನೀ ಬಂದು ನನ್ನನು ಸೇರೆ ನೀನೇ ನನಗೀಗ ಮನದಲ್ಲಿ ಮಿನುಗುವ ತಾರೆ|| ಸೆಳ...
ಗುಲಾಬಿಯ ವಾಸನೆ ಹಿಡಿಯಹೋಗಿ ಮೂಗೊಳಗೆ ಮುಳ್ಳು ಮುರಿದು ಅದೇ ಮೂಗುತಿಯೆಂದು ಮುಟ್ಟಿ ಮುಟ್ಟಿ ನೋಡುತ್ತ ಕನ್ನಡಿ ಮೀರಿ ಮುಖ ಹಿಗ್ಗಿಸುತ್ತ ಉರುಹೊಡೆದ ಇತಿಹಾಸ ಹೇಳುತ್ತ ವರ್‍ತಮಾನದ ಮಾನ ಕಳೆಯುತ್ತ ಕನ್ನಡಿಗೆ ಕಲ್ಲು ಬೀಳುತ್ತದೆ. ಆತ್ಮ ಚೂರುಚೂರಾಗು...
ಅದು ವಸಂತ ಮಾಸದ ಒಂದು ಭಾನುವಾರ. ಆದರೂ ಸಣ್ಣಗೆ ಸುರಿವ ಮಳೆ. ಮೋಡ ಕವಿದ ವಾತಾವರಣ. ಜಿಮ್ಮಿ ಪೋರ್‍ಟರ್, ಮೆತ್ತಗಿನ ಸ್ವಭಾವದ ಆತನ ಪತ್ನಿ ಎಲಿಸನ್, ಮತ್ತು ಆಕೆಯ ಗೆಳೆಯ ನಂಬಿಗಸ್ಥ, ಸದ್ಗುಣಿ ಕ್ಲಿಫ್ ಮನೆಯಲ್ಲಿದ್ದಾರೆ. ಅವರೇನೂ ಶ್ರೀಮಂತರಲ್ಲ. ಅ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...







