ಬಾ ನನ್ನ ಚೇತನ
ಆಗು ನವನಿಕೇತನ ||
ಹೃದಯ ಮಿಡಿವ ಮನವ ತುಡಿವ
ನವರಾಗದ ನವಚೇತನ || ಬಾ ||
ಕತ್ತಲೆಯಡಿಯಲ್ಲಿಹೆ ನಾನು |
ಮಿಡಿವ ಶೃತಿಯ ಮಾಲೆ ಧರಿಸಿ ||
ನಾನೊಂದೆ ಬಲು ನೊಂದೆ |
ಬೆಳಕ ಚೆಲ್ಲು ಮನಕೆ ತಂಪ ನೀಡುತ || ಬಾ ||
ಭರತ ಮಾತೆಯ ಮಡಿಲ ಕುಸುಮ |
ಬಿರಿದ ಹೂ ಮಲ್ಲಿಗೆ ಘಮಘಮ ||
ತನ್ನ ಕರುಳ ಬಳ್ಳಿ ಎಂದ ಮನ
ನನ್ನ ತಾಯಿಯೆದೆ ಹೂಮನ || ಬಾ ||
ಹೊಸಕದಿರು ರಾಗರೆಂಜಿನಿಯಲಿ
ತಾಳ ತಪ್ಪದಿರು ಮತ್ತೆ ||
ಆಗು ನೀನಾಗು ಕಲ್ಪತರು ಕಾಮಧೇನು |
ನವ ಭಾರತ ಚೇತನ
ನನ್ನ ಮನವ ಮಿಡಿಯುವ ನವನಿಕೇತನ || ಬಾ ||
*****
(ರಾಷ್ಟ್ರ ಕವಿ ಕುವೆಂಪುರವರ ಗೀತೆಯ ಸ್ಫೂರ್ತಿಯಿಂದಾದ ಕವಿತೆ)