ಈಗ ಎಲ್ಲಿರುವೆ? ಹೇಳು, ನಯ ನಾಜೂಕಿನ
ಬೆಡಗಿನ ಬೆರಗ ಕಣ್ಣುಗಳ ತೆರೆಯಿಸಿದವನೇ?
ನಡೆಯುವ ದಾರಿಯ ತುಂಬ ಗಾಲಿಗಳ ಉರಳುಸುತ
ನನ್ನಲಿ ಒಂದಾಗಿ ಬಾಳ ಬೆಳಕಾದವನೇ?
ನೆಮ್ಮದಿಯ ಅರಿವೆಯಲಿ ಗುರಿ ಇಟ್ಟು ಒಂದೇ
ಮನಸ್ಸಿನ ನೇಯ್ಗೆಯ ಎಳೆ ಪೋಣಿಸಿದವನೇ?
ಆಲದ ಭವನ ಅಂಬುದಿಗೆ ಹುಟ್ಟು ಹಾಕಲು
ಹೇಳಿಕೊಟ್ಟು ತಿಳಿಶಾಂತ ಒಲವಿನ ಸೂತ್ರ ಹೇಳಿದವನೇ?
ಹೊಂಬೆಳಕು ಹರಡಿ ಎಲ್ಲ ನಕ್ಷತ್ರಗಳ ನನ್ನ
ಉಡಿಯಲ್ಲಿ ಕಟ್ಟಿ, ಸೋಲನ್ನೊಪ್ಪದೇ ಗೆಲುವಿನ ಪಟ
ಹಿಡಿಸಿದವನೇ?
ನಿನ್ನ ಅರೆಗಳಿಗೆ ಬಿಟ್ಟಿರಲಾರೆ! ನಿನ್ನ ಪ್ರೇಮಕೆ
ಬೆಲೆ ಕಟ್ಟಲಾರೆ! ನಿನೊಬ್ಬನೇ ಸಾಕು ನನ್ನ ಬಾಳಿಗೆ
ಕರುಣಾಕರನೇ!
ನಿನ್ನ ಅರೆಗಳಿಗೆ ಬಿಟ್ಟಿರಲಾರೆ, ನಿನ್ನ ಪ್ರೇಮಕೆ
ಬೆಲೆ ಕಟ್ಟಲಾರೆ, ನಿನೊಬ್ಬನೇ ಸಾಕು ನನ್ನ ಬಾಳಿಗೆ
ಕರುಣಾಕರನೇ
ಕರಳು ಬಳ್ಳಿಯ ತೆನೆಗಳ ಹೊರಸಿ, ಒಲವ
ಹಸಿರು ಮೈದಳೆದು ನನ್ನ ತೋಟಕೆ ಕಾವಲುಗಾರನೇ,
ಈಗ ಎಲ್ಲರಿವೆ ಹೇಳು, ನಾನೀಗ ನಿನ್ನ
ಪಾದಗಳ ಸಂಭ್ರಮದಲ್ಲಿ ತೊಳೆಯಬೇಕಾಗಿದೆ.
*****